• Home  
  • ಬೆಳಪು: ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ  ಅವ್ಯವಹಾರದ ಬಗ್ಗೆ ತನಿಖೆಗೆ ಅಸ್ತು: ಡಾ. ದೇವಿಪ್ರಸಾದ್ ಶೆಟ್ಟಿ (Belapu: Investigation into the mismanagement of the Advanced Science Research Center: Dr. Deviprasad Shetty)
- PROBLEMS - protest - ಶಾಲಾ ಕಾಲೇಜು

ಬೆಳಪು: ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ  ಅವ್ಯವಹಾರದ ಬಗ್ಗೆ ತನಿಖೆಗೆ ಅಸ್ತು: ಡಾ. ದೇವಿಪ್ರಸಾದ್ ಶೆಟ್ಟಿ (Belapu: Investigation into the mismanagement of the Advanced Science Research Center: Dr. Deviprasad Shetty)

Share: ಬೆಳಪು: ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ  ಅವ್ಯವಹಾರದ ಬಗ್ಗೆ ತನಿಖೆಗೆ ಅಸ್ತು: ಡಾ. ದೇವಿಪ್ರಸಾದ್ ಶೆಟ್ಟಿ (Belapu) ಬೆಳಪು: ಕಾಪು ತಾಲೂಕಿನ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಸಂಶೋಧನಾ ಕೇಂದ್ರದ ಅನುದಾನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭಾರೀ ಭ್ರಷ್ಟಾಚಾರವಾಗಿದ್ದು, ೧೦ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಬಡ ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕು ಚೆಲ್ಲಬೇಕಾದ ಯೋಜನೆಗೆ ಕತ್ತಲು ಆವರಿಸಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ನೀಡಿ […]

(Belapu) ಬೆಳಪು: ಕಾಪು ತಾಲೂಕಿನ ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಸಂಶೋಧನಾ ಕೇಂದ್ರದ ಅನುದಾನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಭಾರೀ ಭ್ರಷ್ಟಾಚಾರವಾಗಿದ್ದು, ೧೦ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಬಡ ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕು ಚೆಲ್ಲಬೇಕಾದ ಯೋಜನೆಗೆ ಕತ್ತಲು ಆವರಿಸಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ನೀಡಿ ತಕ್ಷಣ ತನಿಖೆ ನಡೆಸಿ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಪತ್ರಿಕಾಗೋಷ್ಠಿಯ ಮೂಲಕ ಎಚ್ಚರಿಸಲಾಗಿದೆ. ಇದೀಗ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಭೆ ನಡೆಸಿ ತನಿಖೆ ನಡೆಸಲು ೫ ಮಂದಿ ಸಿಂಡಿಕೇಟ್ ಸದಸ್ಯರ ಸಮಿತಿ ರಚಿಸಿರುವುದು ಸ್ವಾಗತಾರ್ಹವಾಗಿದ್ದು ಸತ್ಯಾಂಶ ಶೀಘ್ರ ಹೊರಗೆ ಬರಲಿ. ವಿದ್ಯಾದೇಗುಲದಲ್ಲಿ ಲೂಟಿ ಹೊಡೆಯುವುದು ನಿಲ್ಲಲಿ ಎಂದು ಬೆಳಪು ಗ್ರಾ.ಪಂ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.

ಈಗಾಗಲೇ ಬೆಳಪು ಗ್ರಾಮದಲ್ಲಿ ಕಳೆದ ೪೦ ವರ್ಷಗಳಿಂದ ವಾಸ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಿಲ್ಲ. ಅಧಿಕಾರಿಗಳು ಕಾನೂನಿನ ಬಗ್ಗೆ ಮಾತನಾಡುತ್ತಾರೆ. ಉದ್ಯಮಿಗಳಿಗೆ ಬೇಕಾ ಬಿಟ್ಟಿ ‘ಪಂಚಾಯತ್ ಕಾಡು’ ಪ್ರದೇಶವನ್ನು ಸರಕಾರವೆಂದು ದಿನ ಬೆಳಗಾದರೆ ಮಾಡಿ ಮಂಜೂರುಗೊಳಿಸುತ್ತಾರೆ. ಈ ಬಗ್ಗೆ ಕಂದಾಯ ಸಚಿವರಿಗೆ, ಅರಣ್ಯ ಸಚಿವರಿಗೆ ಮನವಿ ನೀಡಿ ಜಂಟಿ ಸರ್ವೇ ನಡೆಸಿ ಸ್ಪಷ್ಟ ವರದಿ ನೀಡಿದರೂ ಬಡವರಿಗೆ ಹಕ್ಕುಪತ್ರ ನೀಡುತ್ತಿಲ್ಲ.  ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.

ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರು ಸಂಸದರಾಗಿದ್ದಾಗ ಬೆಳಪುವಿನಲ್ಲಿ ೨೬ ಮಂದಿ ಬಡವರಿಗೆ ಹಕ್ಕುಪತ್ರ ನೀಡಿದ್ದರು. ಲಾಲಾಜಿ ಮೆಂಡನ್ ಶಾಸಕರಾಗಿದ್ದಾಗ ೧೬೮ ಮಂದಿಗೆ ನಿವೇಶನ ಸಹಿತ ಹಕ್ಕುಪತ್ರ ನೀಡಿದ್ದಾರೆ.

 ನಾನು ಹಲವಾರು ವರ್ಷಗಳಿಂದ ಬಡಜನರಿಗೆ ಹಕ್ಕುಪತ್ರ ನೀಡುವಂತೆ ಹತ್ತಾರು ನಾಯಕರುಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸೊರಕೆಯವರು ಸರಕಾರದ ಮಂತ್ರಿಯಾಗಿದ್ದಾಗ ಮನವಿ ಮಾಡಿದರೂ ಅಧಿಕಾರಿಗಳು ಕಾನೂನಿನ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದರು. ಅಧಿಕಾರಿ ಶಾಹಿಗಳ ತಪ್ಪು ನಿರ್ಧಾರದ ವಿರುದ್ಧ ನಾನು ಬಡವರೊಂದಿಗೆ ‘ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹʼಮಾಡುವ ಎಚ್ಚರಿಕೆ ನೀಡಿದ್ದೇನೆ. ಇದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಜಿಲ್ಲೆಯ ಹಲವು ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಸಂಪರ್ಕಿಸಿ  ಇದು ನ್ಯಾಯಯುತ ಹೋರಾಟ ನಮ್ಮಲ್ಲೂ ಸಮಸ್ಯೆಯಿದೆ. ಪಕ್ಷಾತೀತವಾಗಿ ಬೃಹತ್ ಮಟ್ಟದಲ್ಲಿ ಹೋರಾಟ ಮಾಡುವ ಬಗ್ಗೆ ತಿಳಿಸಿದರು.

ಇದೀಗ ಸೊರಕೆಯವರು ಹಕ್ಕುಪತ್ರ ಒದಗಿಸುವ ಭರವಸೆ ನೀಡಿದ್ದು ಅಭಿನಂದನಾರ್ಹ. ತಪ್ಪಿದಲ್ಲಿ ನಮ್ಮ ಹೋರಾಟ ಅನಿವಾರ್ಯವೆಂದು ದೇವಿಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.