• Home  
  • ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಮಾರ್ಗದರ್ಶನ (ATL Connect Program – a student mentoring activity on “IOT Applications”)
- ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಮಾರ್ಗದರ್ಶನ (ATL Connect Program – a student mentoring activity on “IOT Applications”)

Share: ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಮಾರ್ಗದರ್ಶನ (Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅತುಲ್ ಭಟ್, ಆದಿತ್ಯಾ, ಬಲರಾಮ್ ಭಾರದ್ವಜ್, ರಾಖಿ, ಅಲಕ ಮತ್ತು ರಜನಿಯವರು“ಕ್ಯಾನ್ವಾ ಬೇಸಿಕ್ಸ್ ಮತ್ತು ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಅನಂತೇಶ್ವರ ಆಂಗ್ಲ ಮಾಧ್ಯಮ ಫ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಿದರು.     ಈ ಕಾರ್ಯಕ್ರಮದ ಮುಖ್ಯಉದ್ದೇಶ, ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಡಿಜಿಟಲ್ ಸಾಕ್ಷರತೆಯ ಬಗ್ಗೆ ಮಾಹಿತಿ ನೀಡುವುದಾಗಿದೆ. […]

(Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅತುಲ್ ಭಟ್, ಆದಿತ್ಯಾ, ಬಲರಾಮ್ ಭಾರದ್ವಜ್, ರಾಖಿ, ಅಲಕ ಮತ್ತು ರಜನಿಯವರು“ಕ್ಯಾನ್ವಾ ಬೇಸಿಕ್ಸ್ ಮತ್ತು ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಅನಂತೇಶ್ವರ ಆಂಗ್ಲ ಮಾಧ್ಯಮ ಫ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಿದರು.

    ಈ ಕಾರ್ಯಕ್ರಮದ ಮುಖ್ಯಉದ್ದೇಶ, ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಡಿಜಿಟಲ್ ಸಾಕ್ಷರತೆಯ ಬಗ್ಗೆ ಮಾಹಿತಿ ನೀಡುವುದಾಗಿದೆ. ಕಾರ್ಯಕ್ರಮದಲ್ಲಿ ಅನಂತೇಶ್ವರ ಆಂಗ್ಲ  ಮಾಧ್ಯಮ ಫ್ರೌಢ ಶಾಲೆಯ ೯ ಮತ್ತು ೧೦ ನೇ ತರಗತಿಯ ಸುಮಾರು ೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 ಇವರಿಗೆ ಟಿಂಕರಿಂಗ್‌ ಕ್ಯಾಡ್ ಬಳಸಿ ಹಾರ್ಡ್‌ವೇರ್‌ ಏಕೀಕರಣ, ಸಿಮ್ಯುಲೇಶನ್ ಮತ್ತು ಕ್ಯಾನ್ವಾ ಪ್ಲಾಟ್‌ಫಾರ್ಮ್ ಬಳಸಿಕೊಂಡು ಡಿಜಿಟಲ್ ಸೃಜನಶೀಲತೆಯ ಬಗ್ಗೆ ಮಾಹಿತಿ ನೀಡಿದರು.

 ಅಟಲ್‌ ಟಿಂಕರಿಂಗ್ ಲ್ಯಾಬ್‌ನ ಪರಿಕಲ್ಪನೆ ಮತ್ತು ಯುವ ಮನಸ್ಸುಗಳಲ್ಲಿ ಸಮಸ್ಯೆ ಪರಿಹರಿಸಿ, ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದರು.

 ಸಂವೇದಕಗಳು ಮತ್ತುಇತರ ಮೂಲಭೂತ ಘಟಕಗಳನ್ನು ಹೇಗೆ ಬಳಸುವುದು, ಪೋಸ್ಟರ್‌ಗಳು, ಪ್ರಸ್ತುತಿಗಳು ಮತ್ತುಇತರ ದೃಶ್ಯ ವಿನ್ಯಾಸವನ್ನು ರಚಿಸಲು ಬಳಸುವ ಗ್ರಾಫಿಕ್ ವಿನ್ಯಾಸ ಸಾಧನವಾದ ಕ್ಯಾನ್ವಾ ಬೇಸಿಕ್ಸ್‌ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮವನ್ನು ಸಂಸ್ಥೆಯ ಗಣಕ ಯಂತ್ರ ವಿಭಾಗದ  ರಾಘವೇಂದ್ರ ಈಶ್ವರ ಹೆಗ್ಡೆಯವರು ಸಂಯೋಜಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.