• Home  
  • ಉಚ್ಚಿಲ ರಾಹೆ 66: ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ಅಲ್‌ ಇಹ್ಸಾನ್‌ ಶಾಲಾ ಸಿಬ್ಬಂದಿಯಿಂದ ತಾತ್ಕಾಲಿಕ ದುರಸ್ತಿ (Uchila NH 66: Pothole at the turn of the service road, Temporary repairs by Al Ihsan School staff)
- Mansoon - PROBLEMS - social service - ಕರಾವಳಿ

ಉಚ್ಚಿಲ ರಾಹೆ 66: ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ಅಲ್‌ ಇಹ್ಸಾನ್‌ ಶಾಲಾ ಸಿಬ್ಬಂದಿಯಿಂದ ತಾತ್ಕಾಲಿಕ ದುರಸ್ತಿ (Uchila NH 66: Pothole at the turn of the service road, Temporary repairs by Al Ihsan School staff)

Share: ಉಚ್ಚಿಲ ರಾಹೆ 66 : ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ಅಲ್‌ ಇಹ್ಸಾನ್‌ ಶಾಲಾ ಸಿಬ್ಬಂದಿಯಿಂದ ತಾತ್ಕಾಲಿಕ ದುರಸ್ತಿ (Uchila) ಉಚ್ಚಿಲ : ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಶೆಟ್ಟಿ ಲಂಚ್ ಹೋಮ್ ಎದುರು ಸರ್ವಿಸ್ ರಸ್ತೆಯ ಇಕ್ಕಡೆಗಳಲ್ಲಿ  ಬೃಹತ್‌ ಗುಂಡಿಯೊಂದು ಉಂಟಾಗಿತ್ತು. ಮಳೆಯಿಂದಾಗಿ ಈ ಗುಂಡಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆ ಉಂಟಾಗುತ್ತಿತ್ತು. ಸ್ಥಳೀಯರು ಈ ಗುಂಡಿಯಲ್ಲಿ ಗಿಡವೊಂದನ್ನು ನೆಟ್ಟು, […]

(Uchila) ಉಚ್ಚಿಲ : ಕರಾವಳಿಯಲ್ಲಿ ಸುರಿದ ಭಾರೀ ಮಳೆಗೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಶೆಟ್ಟಿ ಲಂಚ್ ಹೋಮ್ ಎದುರು ಸರ್ವಿಸ್ ರಸ್ತೆಯ ಇಕ್ಕಡೆಗಳಲ್ಲಿ  ಬೃಹತ್‌ ಗುಂಡಿಯೊಂದು ಉಂಟಾಗಿತ್ತು.

ಮಳೆಯಿಂದಾಗಿ ಈ ಗುಂಡಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆ ಉಂಟಾಗುತ್ತಿತ್ತು.

ಸ್ಥಳೀಯರು ಈ ಗುಂಡಿಯಲ್ಲಿ ಗಿಡವೊಂದನ್ನು ನೆಟ್ಟು, ವಾಹನ ಸವಾರರಿಗೆ ಮಾಹಿತಿ ನೀಡಿ, ಪ್ರತಿಭಟನೆ ಸಲ್ಲಿಸಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೂಡಲೇ ಈ ಗುಂಡಿಯನ್ನು ಮುಚ್ಚಿ ಸಂಭಾವ್ಯ ಅಪಘಾತ ತಪ್ಪಿಸಿಬೇಕಿದ್ದು, ಅವರು ಕಣ್ಣು ಮುಚ್ಚಿ ಕುಳಿತಿದ್ದಾರೆ.

ಇದೀಗ ಮೂಳೂರಿನ ಅಲ್ಇಹ್ಸಾನ್‌ ಶಾಲಾ ಸಿಬ್ಬಂದಿಯವರು‌ ಇಂಟರ್‌ ಲಾಕ್‌ ತುಂಡುಗಳನ್ನು ಗುಂಡಿಗೆ ಹಾಕಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ.

ಈ ಕಾರ್ಯಕ್ಕೆ ಸಾರ್ವತ್ರಿಕವಾಗಿ ಶ್ಲಾಘನೆ ವ್ಯಕ್ತವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.