• Home  
  • ಹೆಜಮಾಡಿ: ಅಂಗಳದಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಮೃತ್ಯು (Hejamadi: Woman dies after slipping and falling in yard)
- ಅಪರಾಧ

ಹೆಜಮಾಡಿ: ಅಂಗಳದಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಮೃತ್ಯು (Hejamadi: Woman dies after slipping and falling in yard)

Share: ಹೆಜಮಾಡಿ : ಅಂಗಳದಲ್ಲಿ ಕಾಲು ಜಾರಿ ಬಿದ್ದು ಮಹಿಳೆ ಮೃತ್ಯು  (Hejamady) ಹೆಜಮಾಡಿ : ಮನೆಯಿಂದ ಹೊರಗಡೆ ಹೋಗುವ ಸಮಯ ಮನೆಯ ಅಂಗಳದಲ್ಲಿ ಕಾಲು ಜಾರಿ ಬಿದ್ದು, ತಲೆಗೆ ಪೆಟ್ಟಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಹೆಜಮಾಡಿ ಗ್ರಾಮದ ಪಲಿಮಾರು ಪಡು ಜಯಂತಿ ನಿವಾಸದಲ್ಲಿ ಘಟಿಸಿದೆ. ಮೃತ ಜಯಂತಿ ಎಮ್‌ ಕಾಂಚನ್‌ (87)   ವಯೋವೃದ್ಧರಾಗಿದ್ದು, ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮನೆಯ ಅಂಗಳದಲ್ಲಿ ಕಾಲು ಜಾರಿ ಬಿದ್ದು ಅವರ ತಲೆಗೆ ಹಿಂಬಾಗದಲ್ಲಿ ಗಾಯವಾಗಿದೆ.  ಕೂಡಲೇ ಅವರ ಮಗ […]

 (Hejamady) ಹೆಜಮಾಡಿ : ಮನೆಯಿಂದ ಹೊರಗಡೆ ಹೋಗುವ ಸಮಯ ಮನೆಯ ಅಂಗಳದಲ್ಲಿ ಕಾಲು ಜಾರಿ ಬಿದ್ದು, ತಲೆಗೆ ಪೆಟ್ಟಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಹೆಜಮಾಡಿ ಗ್ರಾಮದ ಪಲಿಮಾರು ಪಡು ಜಯಂತಿ ನಿವಾಸದಲ್ಲಿ ಘಟಿಸಿದೆ.

ಮೃತ ಜಯಂತಿ ಎಮ್‌ ಕಾಂಚನ್‌ (87)   ವಯೋವೃದ್ಧರಾಗಿದ್ದು, ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಮನೆಯ ಅಂಗಳದಲ್ಲಿ ಕಾಲು ಜಾರಿ ಬಿದ್ದು ಅವರ ತಲೆಗೆ ಹಿಂಬಾಗದಲ್ಲಿ ಗಾಯವಾಗಿದೆ.

 ಕೂಡಲೇ ಅವರ ಮಗ ಪ್ರಮೋದ್ ರವರು ಸ್ಥಳಕ್ಕೆ ತೆರಳಿ ತಾಯಿಯನ್ನು ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.

 ಅಲ್ಲಿನ ವೈದ್ಯರು ಪರೀಕ್ಷಿಸಿ ಜಯಂತಿಯವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಇವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂದು ಅವರ ಮಗ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.