ಮಲ್ಲಾರು : ಕಕ್ಕು ಕೋಚ ಶೆಟ್ಟಿ ಕುಟುಂಬಿಕರಿಂದ ಆಟಿ ಕೂಟ – 2025
(Kaup) ಕಾಪು : ಮಲ್ಲಾರಿನ ಕಕ್ಕು ಕೋಚ ಶೆಟ್ಟಿ ಕುಟುಂಬಿಕರಿಂದ ಭಾನುವಾರ ಮೂಲ ದೈವದ ಮನೆಯಲ್ಲಿ ಆಟಿ ಕೂಟ – 2025 ಕಾರ್ಯಕ್ರಮ ನೆರವೇರಿತು.
ಈ ಸಂದರ್ಭ ಕುಟುಂಬದ ಹಿರಿಯರಾದ ಗೋಪಾಲ ಶೆಟ್ಟಿಯವರು ಮಾತನಾಡಿ, ಸುಮಾರು 400 ವರ್ಷ ಇತಿಹಾಸ ಇರುವ ಕಕ್ಕು ಕೋಚ ಶೆಟ್ಟಿ ಅವಿಭಕ್ತ ಕುಟುಂಬವಾಗಿದೆ.
ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ಕುಟುಂಬಿಕರು ತಾವೇ ತಯಾರಿಸಿದ ಅಡುಗೆ ಮಾಡುವುದರಲ್ಲಿ ಹೆಚ್ಚಿನ ಸಂತಸ ಅಡಗಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮುಂದಿನ ಪೀಳಿಗೆಗೂ ಇದು ನೆನಪಾಗಲಿದೆ ಎಂದರು.
ಈ ಸಂದರ್ಭ 20ಕ್ಕೂ ಅಧಿಕ ಆಟಿಯ ಖಾದ್ಯಗಳನ್ನು ಉಣಬಡಿಸಲಾಯಿತು.
ಈ ಸಂದರ್ಭ ಮುಕ್ಕಾಲ್ತಿ ಜಯ ಶೆಟ್ಟಿ, ಕುಟ್ಟಿ ಶೆಟ್ಟಿ, ಅಶೋಕ್ ಶೆಟ್ಟಿ, ಅನಿಲ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ಸಹಿತ ಕೂಡು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
