• Home  
  • ಪಡುಬಿದ್ರಿ : ದುಬೈಯಲ್ಲಿ ತಲೆಮರೆಸಿಕೊಂಡಿದ್ದ ಹಲವು ಪ್ರಕರಣಗಳ ಆರೋಪಿ ಪೋಲಿಸ್ ವಶ (Padubidri: Police arrest accused in several cases who was absconding in Dubai)
- ಅಪರಾಧ

ಪಡುಬಿದ್ರಿ : ದುಬೈಯಲ್ಲಿ ತಲೆಮರೆಸಿಕೊಂಡಿದ್ದ ಹಲವು ಪ್ರಕರಣಗಳ ಆರೋಪಿ ಪೋಲಿಸ್ ವಶ (Padubidri: Police arrest accused in several cases who was absconding in Dubai)

Share: ಪಡುಬಿದ್ರಿ : ದುಬೈಯಲ್ಲಿ ತಲೆಮರೆಸಿಕೊಂಡಿದ್ದ ಹಲವು ಪ್ರಕರಣಗಳ ಆರೋಪಿ ಪೋಲಿಸ್ ವಶ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನ (Padubidri) ಪಡುಬಿದ್ರಿ : ಹಲವು ಪ್ರಕರಣಗಳಲ್ಲಿ ಆರೋಪಿತನಾದ ವ್ಯಕ್ತಿಯನ್ನು ಪಡುಬಿದ್ರಿ ಪೋಲಿಸರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತ ಆರೋಪಿ ಇಕ್ಬಾಲ್‌ ಅಹಮ್ಮದ್‌ ಅನ್ಸಾರಿ ಮೈಸೂರು ಜಿಲ್ಲೆಯ ಮಂಡಿ ಮೋಹಲ್ಲಾದವನಾಗಿದ್ದು, ಈತನ ವಿರುದ್ಧ ಕೊಲೆ ಹಾಗೂ ಕಳ್ಳತನದ ಬಗ್ಗೆ ಪಡುಬಿದ್ರಿ, ಶಿರ್ವ, ಮಣಿಪಾಲ, ತೀರ್ಥಹಳ್ಳಿ ಠಾಣೆಗಳಲ್ಲಿ  ಪ್ರಕರಣಗಳು ದಾಖಲಾಗಿತ್ತು.  ಈತನು ಸುಮಾರು 8 […]

(Padubidri) ಪಡುಬಿದ್ರಿ : ಹಲವು ಪ್ರಕರಣಗಳಲ್ಲಿ ಆರೋಪಿತನಾದ ವ್ಯಕ್ತಿಯನ್ನು ಪಡುಬಿದ್ರಿ ಪೋಲಿಸರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 ಬಂಧಿತ ಆರೋಪಿ ಇಕ್ಬಾಲ್‌ ಅಹಮ್ಮದ್‌ ಅನ್ಸಾರಿ ಮೈಸೂರು ಜಿಲ್ಲೆಯ ಮಂಡಿ ಮೋಹಲ್ಲಾದವನಾಗಿದ್ದು, ಈತನ ವಿರುದ್ಧ ಕೊಲೆ ಹಾಗೂ ಕಳ್ಳತನದ ಬಗ್ಗೆ ಪಡುಬಿದ್ರಿ, ಶಿರ್ವ, ಮಣಿಪಾಲ, ತೀರ್ಥಹಳ್ಳಿ ಠಾಣೆಗಳಲ್ಲಿ  ಪ್ರಕರಣಗಳು ದಾಖಲಾಗಿತ್ತು.

 ಈತನು ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತೆಲೆಮರೆಸಿಕೊಂಡು ವಾಸವಾಗಿದ್ದನು.

 ಈತನ ವಿರುದ್ದ ಪಡುಬಿದ್ರಿ ಠಾಣೆಯಲ್ಲಿ ಎಲ್ ಒ ಸಿ  ಹಾಕಲಾಗಿತ್ತು.

 ಈತನು ಆ. 29 ರಂದು ದುಬೈ ಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಈತನನ್ನು ಇಮಿಗ್ರೇಶನ್‌ ಸಂದರ್ಭ ಬಂಧಿಸಿ ಪಡುಬಿದ್ರಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು.

ಪಡುಬಿದ್ರಿ ಠಾಣೆಗೆ ಕರೆತರಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.