ಮೈಸೂರು: ಅಂಗವಿಕಲ ಯುವಕನಿಂದ 39 ನೇ ಬಾರಿ ರಕ್ತದಾನ
ಗಣೇಶ್ ಕುಮಾರ್ ಶರ್ಮ 39 ನೇ ಬಾರಿ ರಕ್ತದಾನ ಮಾಡಿದ ಯುವಕ
(Mysore) ಮೈಸೂರು : ಮೈಸೂರಿನಲ್ಲಿ ರಕ್ತದಾನಿ ಗಣೇಶ್ ಎಂದು ಚಿರಪರಿಚಿತರಾದ ಗಣೇಶ್ ಕುಮಾರ್ ಶರ್ಮರವರು ಅಂಗವಿಕಲರಾಗಿದ್ದು, ಇಂದು 39 ನೇ ಬಾರಿಗೆ ರಕ್ತದಾನ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಅವರು ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ 39 ನೇ ಬಾರಿಗೆ ರಕ್ತದಾನ ಮಾಡಿದ್ದಾರೆ.
ಗಣೇಶ್‌ರವರು ರಕ್ತದಾನ ಮಾತ್ರವಲ್ಲದೆ, ಚುಟುಕು ಕವನಗಳನ್ನು ಬರೆಯುತ್ತಾರೆ. ರಕ್ತದಾನ ಮಾಡಿ ಒಬ್ಬರ ಜೀವ ಉಳಿಸಿದರೆ ಒಂದು ಕುಟುಂಬ ಬದುಕುತ್ತದೆ ಎಂದು ಸಾಮಾನ್ಯ ಜನರಿಗೆ ಸಾಬೀತು ಮಾಡಿದ್ದಾರೆ.
ಅಂಗವಿಕಲರೂ ರಕ್ತದಾನ ಮಾಡಿ ಸಮಾಜಕ್ಕೆ ಪ್ರೇರಣೆ ಆಗಬಹುದು ಎಂಬುದನ್ನು ಗಣೇಶ್ ರುಜುವಾತು ಮಾಡಿದ್ದಾರೆ.
ತನ್ನನ್ನು ಬೆಳೆಸಿದ ತಂದೆ ತಾಯಿಗೆ, ಕಷ್ಟದಲ್ಲಿದ್ದಾಗ ನನ್ನ ಕಾಪಾಡಿದ ಸತ್ಯ ದೇವರಿಗೆ ಹಾಗೂ ಇವರಿಗೆ ಕೆಲಸ ಕೊಟ್ಟ ರಾಚಿನ್ ಸರ್, ಶ್ರೀಶಾ ಮೇಡಂ ಮತ್ತು ಮೈಸೂರು ಜನತೆಗೆ ತುಂಬು ಹೃದಯದ ಧನ್ಯವಾದಗಳನ್ನು ಗಣೇಶ್ ಹೇಳಿದ್ದಾರೆ.

