• Home  
  • ಕುಂದಾಪುರ: ಸಮುದ್ರಕ್ಕೆ ಈಜಲು ತೆರಳಿದ್ದ ಇಬ್ಬರ ಸಾವು, ಓರ್ವನ ರಕ್ಷಣೆ, ಓರ್ವ ನಾಪತ್ತೆ (Kundapur: Two people who went swimming in the sea died, one was rescued, one is missing)
- ಅಪರಾಧ

ಕುಂದಾಪುರ: ಸಮುದ್ರಕ್ಕೆ ಈಜಲು ತೆರಳಿದ್ದ ಇಬ್ಬರ ಸಾವು, ಓರ್ವನ ರಕ್ಷಣೆ, ಓರ್ವ ನಾಪತ್ತೆ (Kundapur: Two people who went swimming in the sea died, one was rescued, one is missing)

Share: ಕುಂದಾಪುರ: ಸಮುದ್ರಕ್ಕೆ ಈಜಲು ತೆರಳಿದ್ದ ಇಬ್ಬರ ಸಾವು, ಓರ್ವನ ರಕ್ಷಣೆ, ಓರ್ವ ನಾಪತ್ತೆ ಕುಂದಾಪುರ ಗೋಪಾಡಿ ಚೆರ್ಕಿ ಕಡು ಎಂಬಲ್ಲಿಯ ಸಮುದ್ರ (Kundapura) ಕುಂದಾಪುರ:  ಸಮುದ್ರಕ್ಕೆ ಈಜಲು ತೆರಳಿದ್ದ ಬೆಂಗಳೂರಿನ ನಾಲ್ವರು ಯುವಕರು ಸಮುದ್ರ ಪಾಲಾಗಿ ಇಬ್ಬರು ಮೃತಪಟ್ಟು ಓರ್ವ ನಾಪತ್ತೆಯಾಗಿ, ಇನ್ನೊರ್ವ ನನ್ನು ರಕ್ಷಿಸಿದ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಚೆರ್ಕಿ ಕಡು ಎಂಬಲ್ಲಿ  ಭಾನುವಾರ ಮಧ್ಯಾಹ್ನ ಸಂಭವಿಸಿದೆ.  ಬೆಂಗಳೂರಿಂದ ಬಂದಿದ್ದ 10 ಮಂದಿ ಯುವಕರ ತಂಡವು ಕುಂಬಾಶಿಯ ಗಾಯಿತ್ರಿ ಕಂಫರ್ಟ್ ನಲ್ಲಿ ತಂಗಿದ್ದು, […]

(Kundapura) ಕುಂದಾಪುರ:  ಸಮುದ್ರಕ್ಕೆ ಈಜಲು ತೆರಳಿದ್ದ ಬೆಂಗಳೂರಿನ ನಾಲ್ವರು ಯುವಕರು ಸಮುದ್ರ ಪಾಲಾಗಿ ಇಬ್ಬರು ಮೃತಪಟ್ಟು ಓರ್ವ ನಾಪತ್ತೆಯಾಗಿ, ಇನ್ನೊರ್ವ ನನ್ನು ರಕ್ಷಿಸಿದ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಚೆರ್ಕಿ ಕಡು ಎಂಬಲ್ಲಿ  ಭಾನುವಾರ ಮಧ್ಯಾಹ್ನ ಸಂಭವಿಸಿದೆ.

 ಬೆಂಗಳೂರಿಂದ ಬಂದಿದ್ದ 10 ಮಂದಿ ಯುವಕರ ತಂಡವು ಕುಂಬಾಶಿಯ ಗಾಯಿತ್ರಿ ಕಂಫರ್ಟ್ ನಲ್ಲಿ ತಂಗಿದ್ದು, ಇಂದು ಮಧ್ಯಾಹ್ನ 9 ಮಂದಿ ಯುವಕರು ಸಮುದ್ರ ಸ್ನಾನ ಮಾಡಲೆಂದು ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಸಮುದ್ರಕ್ಕೆ ಇಳಿದಿದ್ದಾರೆ.

ಸಮುದ್ರದ ಅಬ್ಬರದ ಅಲೆಗೆ ನಾಲ್ವರು ಕೊಚ್ಚಿ ಹೋಗಿದ್ದು, ಓರ್ವನನ್ನು ತಕ್ಷಣ ಸ್ಥಳೀಯರು ಹಾಗೂ ಜೊತೆಗೆ ಇದ್ದ ಯುವಕರು ಸೇರಿ ಎತ್ತಿ ಮೇಲಕ್ಕೆ ತಂದಿದ್ದಾರೆ. ಆದರೆ ಆತ ಗಂಭೀರ ಗೊಂಡಿದ್ದು, ತಕ್ಷಣ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

 ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಜೀವನ್ ಮಿತ್ರ ನಾಗರಾಜ್ ಪುತ್ರನ್ ರವರು ಸ್ಥಳೀಯರ ಸಹಕಾರದಿಂದ ಇಬ್ಬರ ಮೃತದೇಹವನ್ನು ಸಮುದ್ರದಲ್ಲಿ ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ.

 ಇನ್ನೊರ್ವ ನಾಪತ್ತೆ ಆಗಿದ್ದಾನೆ. ಅವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕುಂದಾಪುರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

ಸಮುದ್ರ ಕಿನಾರೆಯಲ್ಲಿ ನೂರಾರು ಮಂದಿ ಜಮಾಯಿಸಿದ್ದಾರೆ.

ಁಁಁಁಁಁಁಁಁಁಁ

Leave a comment

Your email address will not be published. Required fields are marked *

eMedia Kannada  @2025. All Rights Reserved.