• Home  
  • ನಿಟ್ಟೆ : ಪರಪ್ಪಾಡಿಯಲ್ಲಿ ಪತಿಯನ್ನುಕತ್ತಿಯಿಂದ ಕಡಿದು ಭೀಕರ ಹಲ್ಲೆ ನಡೆಸಿದ ಪತ್ನಿ (Nitte: Wife brutally attacks husband by slashing him with a sword in Parappadi)
- ಅಪರಾಧ

ನಿಟ್ಟೆ : ಪರಪ್ಪಾಡಿಯಲ್ಲಿ ಪತಿಯನ್ನುಕತ್ತಿಯಿಂದ ಕಡಿದು ಭೀಕರ ಹಲ್ಲೆ ನಡೆಸಿದ ಪತ್ನಿ (Nitte: Wife brutally attacks husband by slashing him with a sword in Parappadi)

Share: ನಿಟ್ಟೆ : ಪರಪ್ಪಾಡಿಯಲ್ಲಿ ಪತಿಯನ್ನುಕತ್ತಿಯಿಂದ ಕಡಿದು ಭೀಕರ ಹಲ್ಲೆ ನಡೆಸಿದ ಪತ್ನಿ  ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲು (karkala) ಕಾರ್ಕಳ : ಗಂಡನಿಗೆ ಮನಸೋ ಇಚ್ಚೆ ಕತ್ತಿಯಿಂದ ಕಡಿದು ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿ ಎಂಬಲ್ಲಿ  ಸಂಭವಿಸಿದೆ.  ನಿಟ್ಟೆ ಗ್ರಾಮದ ಪರಪ್ಪಾಡಿ ಶೇಖ‌ರ್ ಮೂಲ್ಯರಿಗೆ ಅವರ ಪತ್ನಿ ಮಾಲತಿ ಮೂಲ್ಯ ಕತ್ತಿಯಿಂದ ಕಡಿದು ಬಳಿಕ ಮಗಳಿಗೆ ಕರೆ ಮಾಡಿ ನಿಮ್ಮ ತಂದೆಗೆ ಯಾರೋ ಕತ್ತಿಯಿಂದ ಹಲ್ಲೆಗೈದು ಅವರು ಮೃತ […]

(karkala) ಕಾರ್ಕಳ : ಗಂಡನಿಗೆ ಮನಸೋ ಇಚ್ಚೆ ಕತ್ತಿಯಿಂದ ಕಡಿದು ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿ ಎಂಬಲ್ಲಿ  ಸಂಭವಿಸಿದೆ.

 ನಿಟ್ಟೆ ಗ್ರಾಮದ ಪರಪ್ಪಾಡಿ ಶೇಖ‌ರ್ ಮೂಲ್ಯರಿಗೆ ಅವರ ಪತ್ನಿ ಮಾಲತಿ ಮೂಲ್ಯ ಕತ್ತಿಯಿಂದ ಕಡಿದು ಬಳಿಕ ಮಗಳಿಗೆ ಕರೆ ಮಾಡಿ ನಿಮ್ಮ ತಂದೆಗೆ ಯಾರೋ ಕತ್ತಿಯಿಂದ ಹಲ್ಲೆಗೈದು ಅವರು ಮೃತ ಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾಳೆ.

 ಆಕೆ ಕೂಡಲೇ ಆಂಬುಲೆನ್ಸ್‌ ಗೆ ಕರೆ ಮಾಡಿ ಶೇಖರ್ ಮೂಲ್ಯರನ್ನು ಮಂಗಳೂರು ವೆನ್ಹಾಕ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

 ಘಟನೆ ಬಗ್ಗೆ ಅನುಮಾನಗೊಂಡ ಪೊಲೀಸರು ಮಾಲತಿಯನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಸತ್ಯ ಸಂಗತಿ ಬಯಲಾಗಿದೆ.

 ಗಂಡ ಕುಡಿದು ಗಲಾಟೆ ಮಾಡುತ್ತಿದ್ದ ಕಾರಣ ನಾನೇ ಗಂಡನಿಗೆ ಕತ್ತಿಯಿಂದ ಕಡಿದಿರುವುದಾಗಿ ಪೊಲೀಸರ ಮುಂದೆ ಬಾಯ್ದಿಟ್ಟಿದ್ದಾಳೆ.

 ಆರೋಪಿ ಮಾಲತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

  ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಆರೋಪಿ ಮಾಲತಿ ಮತ್ತು ಗಾಯಾಳು ಶೇಖ‌ರ್ ಮೂಲ್ಯ ಈ ಹಿಂದೆ 2011 ರಲ್ಲಿ ನೆರೆ ಮನೆ ನಿವಾಸಿ ರಾಮಣ್ಣ ಕುಲಾಲ್ ಅವರನ್ನುವ ಕೊಲೆ ಮಾಡಿದ್ದು, ಜೀವಾವಧಿ ಶಿಕ್ಷೆ ಅನುಭವಿಸಿ 2021 ರಲ್ಲಿ ಬಿಡುಗಡೆ ಹೊಂದಿರುತ್ತಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.