• Home  
  • ಕಾರ್ಕಳ ಅಡಿಕೆ ಕಳವು ಪ್ರಕರಣ: 12 ವಿದ್ಯಾರ್ಥಿಗಳ ಬಂಧನ (Karkala: 12 students arrested in areca nut theft case)
- ಅಪರಾಧ

ಕಾರ್ಕಳ ಅಡಿಕೆ ಕಳವು ಪ್ರಕರಣ: 12 ವಿದ್ಯಾರ್ಥಿಗಳ ಬಂಧನ (Karkala: 12 students arrested in areca nut theft case)

Share: ಕಾರ್ಕಳ ಅಡಿಕೆ ಕಳವು ಪ್ರಕರಣ : 12 ವಿದ್ಯಾರ್ಥಿಗಳ ಬಂಧನ   ಬಟ್ಟೆ ಖರೀದಿ, ಇನ್ನಿತರ ಮೋಜು ಮಸ್ತಿಗಾಗಿ ಕದ್ದ ಬಗ್ಗೆ ತಪ್ಪೊಪ್ಪಿಗೆ  ( Karkala) ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮುಂಡ್ಕೂರು ಗ್ರಾಮದಲ್ಲಿ ರವೀಂದ್ರ ಶೆಟ್ಟಿ ಎಂಬವರ ಅಡಿಕೆ ತೋಟದ ಶೆಡ್‌ನಿಂದ 5 ಲಕ್ಷ ರೂ. ಮೌಲ್ಯದ ಅಡಿಕೆ ಕಳವಾದ ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.     ಸೆ. 8 ರಂದು 12 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇವರೆಲ್ಲರೂ ಅಪ್ರಾಪ್ತರಾಗಿದ್ದು ಬೇರೆ […]

  ಬಟ್ಟೆ ಖರೀದಿ, ಇನ್ನಿತರ ಮೋಜು ಮಸ್ತಿಗಾಗಿ ಕದ್ದ ಬಗ್ಗೆ ತಪ್ಪೊಪ್ಪಿಗೆ

 ( Karkala) ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮುಂಡ್ಕೂರು ಗ್ರಾಮದಲ್ಲಿ ರವೀಂದ್ರ ಶೆಟ್ಟಿ ಎಂಬವರ ಅಡಿಕೆ ತೋಟದ ಶೆಡ್‌ನಿಂದ 5 ಲಕ್ಷ ರೂ. ಮೌಲ್ಯದ ಅಡಿಕೆ ಕಳವಾದ ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಸೆ. 8 ರಂದು 12 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇವರೆಲ್ಲರೂ ಅಪ್ರಾಪ್ತರಾಗಿದ್ದು ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

    ಆರೋಪಿಗಳಿಂದ 5 ಲಕ್ಷ ರೂ. ಮೌಲ್ಯದ 1, 100 ಕಿಲೋ  ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಬಟ್ಟೆ ಖರೀದಿ ಸೇರಿದಂತೆ ಇನ್ನಿತರ ಮೋಜು ಮಸ್ತಿಗಾಗಿ ಅಡಿಕೆ ಕಳವು ಮಾಡಿರುವುದಾಗಿ ಮಕ್ಕಳು ತಪ್ಪೊಪ್ಪಿಕೊಂಡಿದ್ದಾರೆ.

    ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕ‌ರ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸುಧಾಕರ್, ಕಾರ್ಕಳ ಉಪವಿಭಾಗ ಸಹಾಯಕ ಪೊಲೀಸ್ ಅಧಿಕ್ಷಕಿ ಹರ್ಷ ಪ್ರಿಯಾಂವದ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನೀರಿಕ್ಷಕ ಮಂಜಪ್ಪ ಅವರ ನೇತೃತ್ವದಲ್ಲಿ, ಕಾರ್ಕಳ ಗ್ರಾಮಾಂತರ ಠಾಣೆ ಪಿಎಸ್‌ಐಯವರಾದ ಪ್ರಸನ್ನ ಎಂ. ಎಸ್. ಮತ್ತು ಸುಂದರ, ಎಎಸ್‌ಐಗಳಾದ ಪ್ರಕಾಶ್, ಸುಂದರ ಗೌಡ ಮತ್ತು ಸಿಬ್ಬಂದಿ ರುದ್ರೇಶ್‌, ಚಂದ್ರಶೇಖರ, ಮಹಾಂತೇಶ್‌, ಜಿಲ್ಲಾ ಪೊಲೀಸ್‌ ಕಚೇರಿ ಸಿಡಿಆ‌ರ್ ಸಿಬ್ಬಂದಿ ದಿನೇಶ್ ಮತ್ತು ನಿತಿನ್ ಅವರ ತಂಡ ಕಾರ್ಯಾಚರಣೆ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.