• Home  
  • ಉಡುಪಿಯಲ್ಲಿ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ (World Suicide Prevention Day celebrated in Udupi)
- PROBLEMS - social service

ಉಡುಪಿಯಲ್ಲಿ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ (World Suicide Prevention Day celebrated in Udupi)

Share: ಉಡುಪಿಯಲ್ಲಿ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ ಡಾ. ಎ. ವಿ ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮ (Udupi) ಉಡುಪಿ: ಡಾ  ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ಇಂದು (ಬುಧವಾರ) ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆಯನ್ನು ಆಚರಿಸಲಾಯಿತು.   ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಡಾ. ಎ. ವಿ ಬಾಳಿಗ ಸ್ಮಾರಕ ಆಸ್ಪತ್ರೆ ಇವರ ಸಂಯೋಜನೆಯಲ್ಲಿ ವಿದ್ಯಾರ್ಥಿಗಳಿಗಾಗಿ ಅರ್ಧ ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದ ಆರಂಭದಲ್ಲಿ ಡಾ. ವರಲಕ್ಷ್ಮಿ ಚಂದ್ರಶೇಖರನ್ […]

(Udupi) ಉಡುಪಿ: ಡಾ  ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ಇಂದು (ಬುಧವಾರ) ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆಯನ್ನು ಆಚರಿಸಲಾಯಿತು.

  ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಡಾ. ಎ. ವಿ ಬಾಳಿಗ ಸ್ಮಾರಕ ಆಸ್ಪತ್ರೆ ಇವರ ಸಂಯೋಜನೆಯಲ್ಲಿ ವಿದ್ಯಾರ್ಥಿಗಳಿಗಾಗಿ ಅರ್ಧ ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮದ ಆರಂಭದಲ್ಲಿ ಡಾ. ವರಲಕ್ಷ್ಮಿ ಚಂದ್ರಶೇಖರನ್ ಇವರು ಹದಿ ಹರೆಯದವರ ಮಾನಸಿಕ ಆರೋಗ್ಯ ಎಂಬ ವಿಚಾರವಾಗಿ ಮೊದಲ ಅವಧಿಯಲ್ಲಿ ಮಾಹಿತಿ ನೀಡಿದರು.   

 ಆಳ್ವಾಸ್ ಕಾಲೇಜು ಮೂಡುಬಿದರೆ ಇಲ್ಲಿಯ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಮಧುಮಾಲಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

  ಡಾ. ಪಿ ವಿ. ಭಂಡಾರಿ , ಶ್ರೀಮತಿ ಸೌಜನ್ಯ ಶೆಟ್ಟಿ, ಡಾ. ದೀಪಕ್ ಮಲ್ಯ, ಡಾ. ಮಾನಸ ಈ. ಆರ್ ರವರು ಆತ್ಮಹತ್ಯೆ ತಡೆಯ ಕುರಿತು ಮಾಹಿತಿ ನೀಡಿದರು.   

  ಡಾ. ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಪಿ ವಿ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.

  ಮುಖ್ಯ ಅತಿಥಿಗಳಾಗಿ ಡಾ. ವರಲಕ್ಷ್ಮೀ ಚಂದ್ರಶೇಖರನ್, ಮನೋ ವೈದ್ಯರುಗಳಾದ ಡಾ. ದೀಪಕ್ ಮಲ್ಯ, ಡಾ. ಮಾನಸ್ ಈ. ಆರ್ ಉಪಸ್ಥಿತರಿದ್ದರು.

  ಶ್ರೀಮತಿ ಪೂರ್ಣಿಮಾ ಪ್ರಾರ್ಥಿಸಿದರು. ಶ್ರೀಮತಿ ಪದ್ಮ ರಾಘವೇಂದ್ರ ಸ್ವಾಗತಿಸಿದರು. ಸುರೇಶ್ ಎಸ್ ನಾವೂರು ಇವರು ವಂದಿಸಿದರು.

 ಈ ಸಂದರ್ಭ ಕಮಲ್ ಏ ಬಾಳಿಗ ಚಾರಿಟಬಲ್ ಟ್ರಸ್ಟ್ ಹಾಗೂ ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಜಂಟಿಯಾಗಿ ನಿರ್ಮಿಸಿದ “ಆ ಕ್ಷಣ” ಎಂಬ ಕಿರು ಚಿತ್ರವನ್ನು ಡಾ. ವರಲಕ್ಷ್ಮಿ ಚಂದ್ರಶೇಖರನ್ ಇವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು,  ಡಾ. ಜಿ ಶಂಕರ್ ಸರಕಾರಿ ಪ್ರಥಮ ದರ್ಜೆ  ಮಹಿಳಾ ಕಾಲೇಜು ಅಜ್ಜರಕಾಡು, ಎಸ್ ಆರ್ ಎಸ್ ಎಮ್ ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರ್ಕೂರು, ಆಳ್ವಾಸ್ ಕಾಲೇಜ್ ಮೂಡುಬಿದರೆ ಇಲ್ಲಿನ ಸಮಾಜ ಕಾರ್ಯ ವಿಭಾಗದ  ಸ್ನಾತಕೋತ್ತರ ಪದವಿಯ 170 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.  

Leave a comment

Your email address will not be published. Required fields are marked *

eMedia Kannada  @2025. All Rights Reserved.