ಶ್ರೀ ಶೀರೂರು ಪರ್ಯಾಯ 2026-28 : ಉಡುಪಿ ಜಿಲ್ಲೆಯ ಮಹಿಳೆಯರ ಸಭೆ
ಶೀರೂರು ಮಠದ ಪೀಠಾಧಿಪತಿ ಶ್ರೀ ವೇದವರ್ಧನ ಶ್ರೀಪಾದರ ಉಪಸ್ಥಿತಿ
(Udupi) ಉಡುಪಿ: ಶ್ರೀ ಶೀರೂರು ಮಠದ ಪರ್ಯಾಯದ ಕುರಿತಂತೆ ಉಡುಪಿ ಜಿಲ್ಲೆಯ ಮಹಿಳೆಯರ ಸಭೆ ಶೀರೂರು ಮಠದಲ್ಲಿ ನಡೆಯಿತು.
ಶೀರೂರು ಮಠದ ಪೀಠಾಧಿಪತಿ ಶ್ರೀ ವೇದವರ್ಧನ ಶ್ರೀಪಾದರು ಆಶೀರ್ವಚನ ನೀಡಿ, ಶೀರೂರು ಪರ್ಯಾಯ ಕೃಷ್ಣಭಕ್ತರ ಪರ್ಯಾಯ. ನಮ್ಮ ನಿಮ್ಮೆಲ್ಲರ ಪರ್ಯಾಯ. ಎಲ್ಲರೂ ಒಟ್ಟಾಗಿ ಕೃಷ್ಣ ಸೇವೆಯಲ್ಲಿ ಭಾಗಿಯಾಗೋಣ ಎಂದು ಆಶೀರ್ವಚನ ನೀಡಿದರು.
ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯರು ಮಾತನಾಡಿ, ಪರ್ಯಾಯದ ಸಂದರ್ಭದಲ್ಲಿ ಮಾತ್ರ ಕೃಷ್ಣನ ಸೇವೆ ಮಾಡುವುದಲ್ಲ. ಶೀರೂರು ಪರ್ಯಾಯ ಎರಡು ವರ್ಷವೂ ಕೃಷ್ಣನ ಸೇವೆ ಮಾಡಬೇಕು. ಮುಖ್ಯವಾಗಿ ಮಹಿಳೆಯರು ಕೃಷ್ಣ ಸೇವೆಯಲ್ಲಿ ತೊಡಗಿಸಿ ಕೊಂಡರೆ, ಲೋಕಕ್ಕೆ ಒಳಿತಾಗುವುದು ಎಂದರು.
ಸ್ವಾಗತ ಸಮಿತಿಯ ಅಧ್ಯಕ್ಷರಾದ ಉಡುಪಿ ಶಾಸಕ ಯಶ್ಪಾಲ್ ಸುವರ್ಣರವರು ಮಹಿಳಾ ವಿಭಾಗ ಕಾರ್ಯವೈಖರಿ ಬಗ್ಗೆ ತಿಳಿಸಿದರು ಮತ್ತು ಮಹಿಳಾ ವಿಭಾಗದ ಸಂಚಾಲಕರ ಹೆಸರುಗಳನ್ನು ಘೋಷಿಸಿದರು.
ಮಹಿಳಾ ಸಂಚಾಲಕರುಗಳಾಗಿ ಪದ್ಮಾ ರತ್ನಾಕರ್, ನಯನ ಗಣೇಶ್, ವೀಣಾ ಎಸ್ ಶೆಟ್ಟಿ, ವಾಸಂತಿ ರಾವ್ ಕೊರಡ್ಕಲ್, ಜ್ಯೋತಿ ಹೆಬ್ಬಾರ್, ಸಹ ಸಂಚಾಲಕರುಗಳಾಗಿ ತಾರ ಆಚಾರ್ಯ, ಸಂಧ್ಯಾ ರಮೇಶ್, ಶೋಭಾ ಉಪಾಧ್ಯಾಯ, ಪದ್ಮಲತಾ ಎಂ ಎಸ್, ಭಾರತಿ, ದಿವ್ಯಾ ವಿ ಪ್ರಸಾದ್, ನೀತಾ ಪ್ರಭು, ಮಮತ ಶೆಟ್ಟಿ, ನಳಿನಿ ಪ್ರದೀಪ್, ಮೀನಾಕ್ಷಿ ಬನ್ನಂಜೆ, ಮಾಯಾ ಕಾಮತ್, ಇಂದಿರಾ ಶಶಿಧರ್, ಸುಮಂಗಲರವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆಯವರು ಮಾತನಾಡಿ, ಅನ್ನ ಬ್ರಹ್ಮನ ಕ್ಷೇತ್ರದಲ್ಲಿ ಸೇವೆ ಮಾಡಿ ಊರ ಪರವೂರ ಭಕ್ತರಿಗೆ ಉತ್ತಮ ಆತಿಥ್ಯ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳೆಯರು ಪರ್ಯಾಯದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ಕಾರ್ಯದರ್ಶಿ ಮೋಹನ್ ಭಟ್, ಜೊತೆ ಕಾರ್ಯದರ್ಶಿ ಸಂದೀಪ್ ಮಂಜ, ವಿಷ್ಣು ಪ್ರಸಾದ್ ಪಾಡಿಗಾರ್ ಉಪಸ್ಥಿರಿದ್ದರು.
ಜೊತೆ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

