• Home  
  •   ಕಾಪು ಕಾಂಗ್ರೆಸ್ಸಿನಿಂದ ದಿ. ಆಸ್ಕರ್ ಫೆರ್ನಾಂಡಿಸ್‌ರವರ  ನಾಲ್ಕನೇ ಪುಣ್ಯತಿಥಿ ಆಚರಣೆ (Kaup Congress celebrates the fourth death anniversary of Late. Oscar Fernandes)
- ರಾಜಕೀಯ - ಸಂಘ, ಸಂಸ್ಥೆಗಳು

  ಕಾಪು ಕಾಂಗ್ರೆಸ್ಸಿನಿಂದ ದಿ. ಆಸ್ಕರ್ ಫೆರ್ನಾಂಡಿಸ್‌ರವರ  ನಾಲ್ಕನೇ ಪುಣ್ಯತಿಥಿ ಆಚರಣೆ (Kaup Congress celebrates the fourth death anniversary of Late. Oscar Fernandes)

Share:   ಕಾಪು ಕಾಂಗ್ರೆಸ್ಸಿನಿಂದ ದಿ. ಆಸ್ಕರ್ ಫೆರ್ನಾಂಡಿಸ್‌ರವರ  ನಾಲ್ಕನೇ ಪುಣ್ಯತಿಥಿ ಆಚರಣೆ ಕಾಪು ರಾಜೀವ ಭವನದಲ್ಲಿ ಪುಣ್ಯತಿಥಿ ಆಚರಣೆ  (Kaup) ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಮತ್ತು ಕಾಪು   ಯುವಕಾಂಗ್ರೆಸ್ ಸಮಿತಿ ಇದರ ಆಶ್ರಯದಲ್ಲಿ ದಿವಂಗತ ಆಸ್ಕರ್ ಫೆರ್ನಾಂಡಿಸ್ ಅವರ ನಾಲ್ಕನೇ ವರ್ಷದ ಪುಣ್ಯತಿಥಿಯನ್ನು ಕಾಪುವಿನ ರಾಜೀವ ಭವನದಲ್ಲಿ ಭಾವಪೂರ್ಣವಾಗಿ ಆಚರಿಸಲಾಯಿತು.   ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ದಿವಂಗತ ಆಸ್ಕರ್ ಫೆರ್ನಾಂಡಿಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅವರ ಸಮಾಜಮುಖಿ ಸೇವೆ ಹಾಗೂ ತ್ಯಾಗವನ್ನು ಸ್ಮರಿಸಿದರು.    […]

 (Kaup) ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಮತ್ತು ಕಾಪು   ಯುವಕಾಂಗ್ರೆಸ್ ಸಮಿತಿ ಇದರ ಆಶ್ರಯದಲ್ಲಿ ದಿವಂಗತ ಆಸ್ಕರ್ ಫೆರ್ನಾಂಡಿಸ್ ಅವರ ನಾಲ್ಕನೇ ವರ್ಷದ ಪುಣ್ಯತಿಥಿಯನ್ನು ಕಾಪುವಿನ ರಾಜೀವ ಭವನದಲ್ಲಿ ಭಾವಪೂರ್ಣವಾಗಿ ಆಚರಿಸಲಾಯಿತು.

  ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ದಿವಂಗತ ಆಸ್ಕರ್ ಫೆರ್ನಾಂಡಿಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅವರ ಸಮಾಜಮುಖಿ ಸೇವೆ ಹಾಗೂ ತ್ಯಾಗವನ್ನು ಸ್ಮರಿಸಿದರು.

   ದಿವಂಗತ ಆಸ್ಕರ್ ಫೆರ್ನಾಂಡಿಸ್ ಅವರ ಜೀವನ ಶೈಲಿ ಹಾಗೂ ತತ್ವಗಳು ಇಂದಿನ ಪೀಳಿಗೆಯ ಯುವಕರಿಗೆ ಮಾದರಿಯಾಗಿದ್ದು, ಸಮಾಜದಲ್ಲಿ ಬದಲಾವಣೆಗೆ ಪ್ರೇರಣೆ ನೀಡಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಆಸ್ಕರ್ ಫರ್ನಾಂಡೀಸ್ ಅವರ ಹಾದಿಯಲ್ಲಿ ನಡೆಯುವ ಸಂಕಲ್ಪ ಕೈಗೊಂಡರು.

  ಈ ಸಂದರ್ಭ ಕಾಪು ವಿಧಾನಸಭಾಕ್ಷೇತ್ರದ ಯುವಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಅಧ್ಯಕ್ಷ ಸುಕುಮಾರ್, ಗೌರೀಶ್ ಕೋಟ್ಯಾನ್, ಕೆ ಪಿ ಸಿ ಸಿ ಸಂಯೋಜಕರಾದ ನವೀನ್ ಚಂದ್ರ ಶೆಟ್ಟಿ, ಅಬ್ದುಲ್ ಅಝೀಜ್, ನವೀನ್ ಎನ್ ಶೆಟ್ಟಿ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಗೀತಾ ವಾಗ್ಲೆ, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್, ಉಡುಪಿ ಜಿಲ್ಲಾ ಮೀನುಗಾರಿಕಾ ಕಾಂಗ್ರೆಸ್ ನ ಅಧ್ಯಕ್ಷ ವಿಶ್ವಾಸ್ ಅಮೀನ್, ಪ್ರಚಾರ ಸಮಿತಿಯ ಉಡುಪಿ ಜಿಲ್ಲಾ ಅಧ್ಯಕ್ಷರು ಹರೀಶ ಕಿಣಿ, ಕಾಪು ಗ್ಯಾರಂಟಿ ಸಮಿತಿ ಅಧ್ಯಕ್ಷರ ನವೀನ್ ಸುವರ್ಣ, ಪ್ರಚಾರ ಸಮಿತಿ ಕಾಪು ಅಧ್ಯಕ್ಷರು ಜಿತೇಂದ್ರ ಫುರ್ಟಾಡೋ, ಕಾಂಗ್ರೆಸ್ ಮುಖಂಡರುಗಳಾದ ಹರಿಪ್ರಸಾದ್ ರೈ, ಜೇಬಾ,      ಸುದೀರ್, ರೋಲ್ಫಿ, ಶಿವಾಜಿ ಸುವರ್ಣ, ಸಂತೋಷ್ ಬೈರಂಪಳ್ಳಿ, ಶೇಖರ್ ಹೆಜಮಾಡಿ, ಯೂಸಿ ಶೇಕಬ್ಬ ಉಚ್ಚಿಲ, ರತನ್ ಶೆಟ್ಟಿ, ಅಖಿಲೇಶ್ ಕಟಪಾಡಿ, ಪ್ರಭಾಕರ್ ಆಚಾರ್ಯ, ಅಮೀರ್,  ಗಣೇಶ್ ಕೋಟ್ಯಾನ್‌, ಸತೀಶ್ ಚಂದ್ರ, ಆಸೀಫ್ ಮುಳೂರ್, ದೇವರಾಜ್, ನಿತಿನ್ ಉದ್ಯಾವರ, ಲತೀಫ್  ಶಿರ್ವ, ಅಹ್ಮದ್, ಕೀರ್ತನ್, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.