ಶಿರ್ವ – ಮರದ ದಿಮ್ಮಿ ಸಾಗಿಸುತ್ತಿರುವ ಲಾರಿ ಚಾಲಕನ ಅಜಾಗರೂಕತೆ
ಲಾರಿಗೆ ಎಲೆಕ್ಟ್ರಿಕ್ ವಯರ್ ಸಿಲುಕಿ ವಿದ್ಯುತ್ ವ್ಯತ್ಯಯ, ಹಲವಾರು ಕಂಬಗಳಿಗೆ ಹಾನಿ
(Shirva) ಶಿರ್ವ : ಚಾಲಕನ ಅಜಾಗರೂಕತೆಯಿಂದ ಮರದ ದಿಂಬಿಗಳಿದ್ದ ಲಾರಿಗೆ ಎಲೆಕ್ಟ್ರಿಕ್ ವಯರ್ ಸಿಲುಕಿ ವಿದ್ಯುತ್ ವ್ಯತಯದ ಜೊತೆಗೆ ಹಲವಾರು ಕಂಬಗಳಿಗೆ ಹಾನಿಯಾದ ಘಟನೆ ಶಿರ್ವ ನ್ಯಾರ್ಮ ಶ್ರೀ ಮಹಾಲಸ ದೇವಸ್ಥಾನದ ದ್ವಾರದ ಬಳಿ ಶನಿವಾರ ರಾತ್ರಿ ಸಂಭವಿಸಿದೆ.
ಲಾರಿಯೊಂದು ಶಿರ್ವ ಶಾಂತಿಗುಡ್ಡೆಯಿಂದ ದಾಂಡೇಲಿಗೆ ಮರದ ದಿಂಬಿಗಳನ್ನು ಹೊತ್ತು ಹೊರಟಿತ್ತು. ಚಾಲಕನ ಅಜಾಗರೂಕತೆಯಿಂದ ಹೆಚ್ಚುವರಿ ಮರದ ದಿಮ್ಮಿಗಳನ್ನು ತುಂಬಿರುವ ಕಾರಣ ಈ ಅವಘಡ ಸಂಭವಿಸಿದೆ. ಇದರಿಂದ ಮೂರುವರೆ ತಾಸು ವಿದ್ಯುತ್ ವ್ಯತ್ಯ ಉಂಟಾಗಿದೆ.
ತಕ್ಷಣ ಸಾರ್ವಜನಿಕರು ಲಾರಿಯನ್ನು ತಡೆದು ನಿಲ್ಲಿಸಿ ವಿದ್ಯುತ್ ಸಂಪರ್ಕವನ್ನು ಸರಿಪಡಿಸುವಂತೆ ಆಗ್ರಹಿಸಿದರು.
ಗಟನಾ ಸ್ಥಳಕ್ಕೆ ಶಿರ್ವ ಠಾಣೆಯ ಸಿಬ್ಬಂದಿ ಆಗಮಿಸಿ, ವಾಹನ ಸಂಚಾರವನ್ನು ಸುಗಮಗೊಳಿಸಲು ಸಹಕರಿಸಿದರು.
ಮೆಸ್ಕಾಂ ಎಸ್.ಒ. ಮಂಜಪ್ಪರವರು ಆಗಮಿಸಿ, ಇಂತಹ ಲಾರಿಗಳಿಂದ ಮೆಸ್ಕಾಂಗೆ ರಾತ್ರಿ ಹೊತ್ತು ತುಂಬಾ ಸಲ ವಿದ್ಯುತ್ ಸಮಸ್ಯೆ ಆಗಿರುತ್ತದೆ. ಈ ವೆಚ್ಚವನ್ನು ಲಾರಿ ಚಾಲಕ ಹಾಗೂ ದಿಂಬಿಗಳನ್ನು ಸಾಗಿಸುವ ಗುತ್ತಿಗೆದಾರರೇ ಹೊಣೆ ಎಂದರು. ಕೊನೆಹೂ ಮೆಸ್ಕಾಂ ಸಿಬ್ಬಂದಿಗಳು ಸಮಸ್ಯೆ ಬಗೆಹರಿಸಿದರು.
ಶಿರ್ವ ಠಾಣಾಧಿಕಾರಿ ಮಂಜುನಾಥ್ , ಕ್ರೈಂ ಠಾಣಾಧಿಕಾರಿ ಲೋಹಿತ್ ಕುಮಾರ್ ಸ್ಥಳಕ್ಕಾಗಮಿಸಿ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ವೆಚ್ಚವನ್ನು ಭರಿಸುವಂತೆ ಸೂಚಿಸಿದರು. ಮುಂದೆ ಇಂತಹ ಪ್ರಕರಣಗಳು ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಕರಿಯಣ್ಣ, ಪ್ರೇಮನಾಥ್ ಶೆಟ್ಟಿ, ಗಿರಿಧರ್ ಪ್ರಭು, ಕೆವಿನ್, ಅರುಣ್, ಅಹಾದ್ ಶಿರ್ವ ಮತ್ತಿತರರು ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಸಹಕರಿಸಿದರು.

