• Home  
  • ಬೆಳ್ತಂಗಡಿ; ಮಕ್ಕಳ ಕುಣಿತ ಭಜನಾ ತಂಡದ  ಮಕ್ಕಳಿಗೆ ಸಮವಸ್ತ್ರ, ತಾಳ ವಿತರಣೆ (Belthangady; Uniforms and tambourines distributed to children of the children’s dance and bhajan team)
- ಧಾರ್ಮಿಕ

ಬೆಳ್ತಂಗಡಿ; ಮಕ್ಕಳ ಕುಣಿತ ಭಜನಾ ತಂಡದ  ಮಕ್ಕಳಿಗೆ ಸಮವಸ್ತ್ರ, ತಾಳ ವಿತರಣೆ (Belthangady; Uniforms and tambourines distributed to children of the children’s dance and bhajan team)

Share: ಬೆಳ್ತಂಗಡಿ; ಮಕ್ಕಳ ಕುಣಿತ ಭಜನಾ ತಂಡದ  ಮಕ್ಕಳಿಗೆ ಸಮವಸ್ತ್ರ, ತಾಳ ವಿತರಣೆ  ಸಂದೇಶ್ ಮದ್ದಡ್ಕರವರ ತರಬೇತಿಯ 30 ಮಕ್ಕಳ ಕುಣಿತ ಭಜನಾತಂಡದ ಸದಸ್ಯರಿಗೆ ವಿತರಣೆ (Belthangadi) ಬೆಳ್ತಂಗಡಿ: ತೆಂಕ ಕಾರಂದೂರು ಶ್ರೀ ವಿಷ್ಣು ಮೂರ್ತಿ  ದೇವಸ್ಥಾನದಲ್ಲಿ ಗುರುಗಳಾದ ಸಂದೇಶ್ ಮದ್ದಡ್ಕ ಇವರ ತರಬೇತಿಯಲ್ಲಿ ಕಳೆದ 9 ತಿಂಗಳಿಂದ ತರಬೇತಿ ಪಡೆಯುತ್ತಿರುವ ಸುಮಾರು 30 ಸದಸ್ಯರುಗಳಿರುವ  ತಂಡದ ಮಕ್ಕಳ ಕುಣಿತ ಭಜನಾತಂಡ ದ ಮಕ್ಕಳಿಗೆ ವಿವಿಧ ದಾನಿಗಳ, ಹಾಗೂ ಮಕ್ಕಳ ಪೋಷಕರ ಸಹಕಾರ ದಲ್ಲಿ ಸಮವಸ್ತ್ರ ಹಾಗೂ […]

(Belthangadi) ಬೆಳ್ತಂಗಡಿ: ತೆಂಕ ಕಾರಂದೂರು ಶ್ರೀ ವಿಷ್ಣು ಮೂರ್ತಿ  ದೇವಸ್ಥಾನದಲ್ಲಿ ಗುರುಗಳಾದ ಸಂದೇಶ್ ಮದ್ದಡ್ಕ ಇವರ ತರಬೇತಿಯಲ್ಲಿ ಕಳೆದ 9 ತಿಂಗಳಿಂದ ತರಬೇತಿ ಪಡೆಯುತ್ತಿರುವ ಸುಮಾರು 30 ಸದಸ್ಯರುಗಳಿರುವ  ತಂಡದ ಮಕ್ಕಳ ಕುಣಿತ ಭಜನಾತಂಡ ದ ಮಕ್ಕಳಿಗೆ ವಿವಿಧ ದಾನಿಗಳ, ಹಾಗೂ ಮಕ್ಕಳ ಪೋಷಕರ ಸಹಕಾರ ದಲ್ಲಿ ಸಮವಸ್ತ್ರ ಹಾಗೂ ಭಜನಾ ಮಂಡಳಿಯ ವತಿಯಿಂದ ತಾಳವನ್ನು ವಿಷ್ಣು ಮೂರ್ತಿ ದೇವಸ್ಥಾನ ದ ಆಡಳಿತ ಮೋಕ್ತೆಸರಾದ ಶ್ರೀ ಕೃಷ್ಣ ಸಂಪಿಗೆತ್ತಾಯ ರವರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಭಾನುವಾರ ದೇವಾಲಯದ ವಠಾರದಲ್ಲಿ ನೀಡಲಾಯಿತು.

ಈ ತಂಡ ತಾಲೂಕಿನ ಇತರ ಕಡೆ 10ಕ್ಕೂ ಹೆಚ್ಚು ಭಜನಾ ಕಮ್ಮಟಗಳಲ್ಲಿ ಭಜನಾ ಸೇವೆ ನೀಡುತ್ತಾ ಬಂದಿರುತ್ತಾರೆ.

  ಈ ಸಂದರ್ಭದಲ್ಲಿ ಶ್ರೀ ವಿಷ್ಣು ಸಂಪಿಗೆತ್ತಾಯ, ಅರ್ಚಕರಾದ ಶಂಕರ ನಾರಾಯಣ ಭಟ್, ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಸಂತೋಷ್ ಹೆಗ್ಡೆ, ಜಾತ್ರೊತ್ಸವ ಸಮಿತಿ ಕಾರ್ಯದರ್ಶಿ ವಿದ್ಯಾನಂದ,  ಭಜನಾ ಮಂಡಳಿ ಅಧ್ಯಕ್ಷ ಹೇಮಂತ್ ಗುಂಡೇರಿ, ವರ ಮಹಾಲಕ್ಷ್ಮಿಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ರೂಪಲತಾ, ಭಜನಾ ಮಂಡಳಿ ಸದಸ್ಯರುಗಳು, ಜಾತ್ರೊತ್ಸವ ಸಮಿತಿ ಸದಸ್ಯರುಗಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

  ಶ್ರೀಮತಿ ಅಶ್ವಿನಿ ಅತಿಥಿ ಗಣ್ಯರನ್ನು ಹಾಗೂ ಸಹಕರಿಸಿದ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.