• Home  
  •  ಮಣಿಪಾಲ ಕೆಎಂಸಿಯಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಸೌಲಭ್ಯದ ಉದ್ಘಾಟನೆ (Inauguration of state-of-the-art robotic surgery facility at Manipal KMC)
- health

 ಮಣಿಪಾಲ ಕೆಎಂಸಿಯಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಸೌಲಭ್ಯದ ಉದ್ಘಾಟನೆ (Inauguration of state-of-the-art robotic surgery facility at Manipal KMC)

Share: ಮಣಿಪಾಲ ಕೆಎಂಸಿಯಲ್ಲಿ ಅತ್ಯಾಧುನಿಕ ರೊಬೊಟಿಕ್ ಸರ್ಜರಿ ಸೌಲಭ್ಯದ ಉದ್ಘಾಟನೆ  ಒಲಿಂಪಿಕ್ ಚಾಂಪಿಯನ್ ಸೈನಾ ನೆಹ್ವಾಲ್ ರಿಂದ  ಅನಾವರಣ (Manipala) ಮಣಿಪಾಲ: ಉಡುಪಿ ಜಿಲ್ಲೆಯ ಆರೋಗ್ಯ ಕ್ಷೆತ್ರದಲ್ಲಿ  ಒಂದು ಮೈಲಿಗಲ್ಲಾಗಿದ್ದು, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಇಂದು ತನ್ನ ಸುಧಾರಿತ ರೊಬೊಟಿಕ್ ಸರ್ಜರಿ ಸೌಲಭ್ಯವನ್ನು ಪ್ರಥಮವಾಗಿ ಪರಿಚಯಿಸಲಾಯಿತು.    ಈ  ಅತ್ಯಾಧುನಿಕ  ತಂತ್ರಜ್ಞಾನದ ಸೌಲಭ್ಯವನ್ನು  ಒಲಿಂಪಿಕ್ ಬ್ಯಾಡ್ಮಿಂಟನ್ ಚಾಂಪಿಯನ್ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿ  ಸೈನಾ ನೆಹ್ವಾಲ್ ಅನಾವರಣಗೊಳಿಸಿದರು.     ಶಸ್ತ್ರಚಿಕಿತ್ಸಾ ಆಂಕೊಲಾಜಿ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಜಿಐ ಶಸ್ತ್ರ […]

(Manipala) ಮಣಿಪಾಲ: ಉಡುಪಿ ಜಿಲ್ಲೆಯ ಆರೋಗ್ಯ ಕ್ಷೆತ್ರದಲ್ಲಿ  ಒಂದು ಮೈಲಿಗಲ್ಲಾಗಿದ್ದು, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಇಂದು ತನ್ನ ಸುಧಾರಿತ ರೊಬೊಟಿಕ್ ಸರ್ಜರಿ ಸೌಲಭ್ಯವನ್ನು ಪ್ರಥಮವಾಗಿ ಪರಿಚಯಿಸಲಾಯಿತು.

   ಈ  ಅತ್ಯಾಧುನಿಕ  ತಂತ್ರಜ್ಞಾನದ ಸೌಲಭ್ಯವನ್ನು  ಒಲಿಂಪಿಕ್ ಬ್ಯಾಡ್ಮಿಂಟನ್ ಚಾಂಪಿಯನ್ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿ  ಸೈನಾ ನೆಹ್ವಾಲ್ ಅನಾವರಣಗೊಳಿಸಿದರು.

    ಶಸ್ತ್ರಚಿಕಿತ್ಸಾ ಆಂಕೊಲಾಜಿ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಜಿಐ ಶಸ್ತ್ರ ಚಿಕಿತ್ಸೆ, ಒಬಿಜಿ, ಮೂತ್ರಶಾಸ್ತ್ರ ಮತ್ತು ಮೊಣಕಾಲು ಹಾಗೂ ಕೀಲು  ಬದಲಿ ಕಾರ್ಯ ವಿಧಾನಗಳಲ್ಲಿ ನಿಖರತೆಯನ್ನು ಹೆಚ್ಚಿಸುವ ಮತ್ತು ಫಲಿತಾಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಈ ಸುಧಾರಿತ ತಂತ್ರಜ್ಞಾನವು ರೋಗಿಗಳ ಆರೈಕೆಯಲ್ಲಿ ಕ್ರಾಂತಿಯನ್ನುಂಟುಮಾಡಲಿದೆ. ಈ ಉದ್ಘಾಟನೆಯೊಂದಿಗೆ, ಕಸ್ತೂರ್ಬಾ ಆಸ್ಪತ್ರೆ ಉಡುಪಿ ಜಿಲ್ಲೆಯ ರೋಬೋಟಿಕ್ ನೆರವಿನ ಶಸ್ತ್ರ ಚಿಕಿತ್ಸೆಗಳನ್ನು ನೀಡುವ ಮೊದಲ ಆರೋಗ್ಯ ಸಂಸ್ಥೆಯಾಗಿದೆ.

      ಮಾಹೆ ಮಣಿಪಾಲದ ಸಹ ಕುಲಾಧಿಪತಿ  ಡಾ. ಎಚ್.ಎಸ್. ಬಲ್ಲಾಳ್  ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಣಿಪಾಲ ಕ್ಲಸ್ಟರ್‌ನ ಸಿ ಓ ಓ   ಡಾ. ಸುಧಾಕರ್ ಕಂಟಿಪುಡಿ,  ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ  ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮತ್ತು ಮಣಿಪಾಲ ಆಸ್ಪತ್ರೆಗಳ ಮಂಗಳೂರಿನ ಪ್ರಾದೇಶಿಕ ಮುಖ್ಯ ಅಧಿಕಾರಿ ಶ್ರೀ ಸಘೀರ್ ಸಿದ್ದಿಕಿ ಸೇರಿದಂತೆ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.

    ಮಣಿಪಾಲ ಕ್ಲಸ್ಟರ್‌ನ ಸಿ ಓ ಓ  ಡಾ. ಸುಧಾಕರ್ ಕಂಟಿಪುಡಿ ಅವರು ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ ಸೌಲಭ್ಯದ  ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ  ಸ್ವಾಗತಿಸಿದರು.

    ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ರೋಬೋಟಿಕ್ಸ್‌ನ ಅವಲೋಕನವನ್ನು ಸರ್ಜಿಕಲ್ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ  ಡಾ. ನವೀನ ಕುಮಾರ್ ಎ ಎನ್ ಅವರು ನೀಡಿದರು.

    ಸಂಪೂರ್ಣ ಕೀಲು ಮತ್ತು ಮೊಣಕಾಲು ಬದಲಿ ಶಸ್ತ್ರ ಚಿಕಿತ್ಸೆಯಲ್ಲಿ  ರೊಬೊಟಿಕ್ಸ್  ಕುರಿತು – ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್ ಕೆ ರಾವ್ ನೀಡಿದರು.

   ಮಾಹೆ ಮಣಿಪಾಲದ ಸಹ ಕುಲಾಧಿಪತಿ  ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷೀಯ ಮಾತುಗಳನ್ನಾಡಿದರು.

    ಈ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ರೋಬೋಟಿಕ್ಸ್‌ನ ಅನ್ವಯಿಕೆಗಳು ಮತ್ತು ಒಟ್ಟು ಕೀಲು ಮತ್ತು ಮೊಣಕಾಲು ಬದಲಿ ಕಾರ್ಯವಿಧಾನಗಳ ಕುರಿತು ನೇರ ಪ್ರದರ್ಶನಗಳು ಮತ್ತು ವಿವರವಾದ ಪ್ರಸ್ತುತಿಗಳು ಒಳಗೊಂಡಿತ್ತು.

ರೊಬೊಟಿಕ್ಸ್ ಸೌಲಭ್ಯ ಉದ್ಘಾಟಿಸಿ ಮಾತನಾಡಿದ  ಸೈನಾ ನೆಹ್ವಾಲ್, “ಒಬ್ಬ ಕ್ರೀಡಾಪಟುವಾಗಿ, ನಿಖರತೆ,  ಶೀಘ್ರ ಚೇತರಿಕೆ ಮತ್ತು ಗರಿಷ್ಠ ಕಾರ್ಯಕ್ಷಮತೆಗೆ ಮರಳುವುದರ ನಿರ್ಣಾಯಕ ಪ್ರಾಮುಖ್ಯತೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈ ರೊಬೊಟಿಕ್ಸ್ ಸರ್ಜರಿ ಕಾರ್ಯಕ್ರಮದ ಪ್ರಾರಂಭವು ಈ ಪ್ರದೇಶಕ್ಕೆ ಒಂದು ಪ್ರಮುಖ ಬದಲಾವಣೆಯಾಗಿದೆ. ತಂತ್ರಜ್ಞಾನವು ಕ್ರೀಡಾ ತರಬೇತಿ ಮತ್ತು ಕಾರ್ಯಕ್ಷಮತೆಯನ್ನು ಪರಿವರ್ತಿಸಿದಂತೆಯೇ, ಇದು ಈಗ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಯನ್ನುಂಟುಮಾಡುತ್ತಿದೆ ಎಂದರು.

     ಮಣಿಪಾಲ ಕ್ಲಸ್ಟರ್ ನ ಸಿ ಓ ಓ ಡಾ. ಸುಧಾಕರ್ ಕಂಟಿಪುಡಿ, ಮಾಹೆ ಮಣಿಪಾಲದ ಸಹ ಕುಲಾಧಿಪತಿ  ಡಾ. ಎಚ್.ಎಸ್. ಬಲ್ಲಾಳವರು ಮಾಹಿ ನೀಡಿದರು.

    ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ  ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರ ಧನ್ಯವಾದ ಅರ್ಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.