• Home  
  • ಉಚ್ಚಿಲ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ, ಬೈಕ್‌ ಸವಾರ ಗಂಭೀರ (Uchilla: Unidentified vehicle hits and flees, biker in serious condition)
- ಅಪಘಾತ - ಅಪರಾಧ

ಉಚ್ಚಿಲ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ, ಬೈಕ್‌ ಸವಾರ ಗಂಭೀರ (Uchilla: Unidentified vehicle hits and flees, biker in serious condition)

Share: ಉಚ್ಚಿಲ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ, ಬೈಕ್‌ ಸವಾರ ಗಂಭೀರ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಜಲಾಲುದ್ದೀನ್ ತಂಡದಿಂದ ಶ್ಲಾಘನೀಯ ಕಾರ್ಯ (Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66  ಮೊಗವೀರ ಭವನ ಸಭಾಭವನದ ಮುಂದೆ ಅಪರಿಚಿತ ವಾಹನವೊಂದು ಬೈಕೊಂದಕ್ಕೆ ಡಿಕ್ಕಿ ಹೊಡೆದು ಪರಾರಿ ಆಗಿದ್ದು, ಪರಿಣಾಮ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಘಟಿಸಿದೆ.     ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ರಾಜಸ್ತಾನದ ಕರೌಲಿ ಜಿಲ್ಲೆಯ ಹೇಮ್‌ ಸಿಂಗ್ ಎಂದು ಗುರುತಿಸಲಾಗಿದೆ. […]

(Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66  ಮೊಗವೀರ ಭವನ ಸಭಾಭವನದ ಮುಂದೆ ಅಪರಿಚಿತ ವಾಹನವೊಂದು ಬೈಕೊಂದಕ್ಕೆ ಡಿಕ್ಕಿ ಹೊಡೆದು ಪರಾರಿ ಆಗಿದ್ದು, ಪರಿಣಾಮ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಘಟಿಸಿದೆ.

    ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ರಾಜಸ್ತಾನದ ಕರೌಲಿ ಜಿಲ್ಲೆಯ ಹೇಮ್‌ ಸಿಂಗ್ ಎಂದು ಗುರುತಿಸಲಾಗಿದೆ.  

    ಪಡುಬಿದ್ರಿ ಕಡೆಯಿಂದ ಕಾಪು ಕಡೆಗೆ ಸಾಗುತ್ತಿದ್ದ ಬೈಕಿಗೆ ಉಚ್ಚಿಲ ಮೊಗವೀರ ಭವನದ ಎದುರು ಹಿಂದಿನಿಂದ ಬಂದ  ಅಪರಿಚಿತ ವಾಹನ ಡಿಕ್ಕಿ ಆಗಿದೆ. ಸೋಮವಾರ ರಾತ್ರಿ 10.45ರ ಸುಮಾರಿಗೆ ಈ ಘಟನೆ ಘಟಿಸಿದೆ.

    ಅಪಘಾತ ನಡೆದ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಉಚ್ಚಿಲದ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಮತ್ತವರ ತಂಡ, ಉಚ್ಚಿಲ ಎಸ್‌ಡಿಪಿಐ ಅಂಬ್ಯುಲೆನ್ಸ್ ನ ಚಾಲಕ ಕೆ. ಎಂ.ಸಿರಾಜ್ ಅವರ ಸಹಾಯದಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

     ಈ ವೇಳೆ ಬೈಕ್ ಸವಾರ ಹೇಮ್ ಸಿಂಗ್ ಸ್ಥಿತಿ ಗಂಭೀರವಾಗಿದ್ದು, ಉಡುಪಿಯ ಆದರ್ಶ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

    ಪಡುಬಿದ್ರಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಅವರು ಡಿಕ್ಕಿ ಹೊಡೆದು ಪರಾರಿ ಆದ ವಾಹನದ ಪತ್ತೆಗಾಗಿ ಶ್ರಮಿಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.