ಉಚ್ಚಿಲ ಬಸ್ ನಿಂದ ಬಿದ್ದು ವಯೋವೃದ್ಧರಿಗೆ ಗಾಯ
ಪಣಿಯೂರಿನ ಗಣೇಶ್ ಆಚಾರ್ಯ ಗಾಯಗೊಂಡವರು.
(Uchila) ಉಚ್ಚಿಲ : ಉಚ್ಚಿಲ ರಾ.ಹೆ.66 ರ ವೇಗದೂತ ಬಸ್ ನಿಲ್ದಾಣದ ಬಳಿ ಮಧ್ಯ ವಯಸ್ಕರೋರ್ವರು ಬಸ್ ನಿಂದ ಕೆಳಗೆ ಬಿದ್ದು ತೀವ್ರ ಗಾಯಗೊಂಡ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ವೇಗದೂತ ಬಸ್ಸಿನಿಂದ ಪಣಿಯೂರಿನ ಗಣೇಶ್ ಆಚಾರ್ಯ ಗಾಯಗೊಂಡವರು.
ಗಾಯಗೊಂಡ ಗಣೇಶ ಆಚಾರ್ಯವರನ್ನು ಉಚ್ಚಿಲ ಸಮಾಜ ಸೇವಕ ಜಲಾಲುದ್ದೀನ್ ರವರು ಸ್ಥಳೀಯ ಎಸ್ಡಿಪಿಐ ಆಂಬುಲೆನ್ಸ್ ಮೂಲಕ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಡುಬಿದ್ರಿ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

