• Home  
  • ಹೆಬ್ರಿಯ ಬಡ ಮಹಿಳೆಗೆ ಕಾರ್ಕಳ ಶಾಸಕರಿಂದ ಸದೃಢ ಮನೆ ಹಸ್ತಾಂತರ (Karkala MLA hands over a sturdy house to a poor woman from Hebri)
- social service - ರಾಜಕೀಯ

ಹೆಬ್ರಿಯ ಬಡ ಮಹಿಳೆಗೆ ಕಾರ್ಕಳ ಶಾಸಕರಿಂದ ಸದೃಢ ಮನೆ ಹಸ್ತಾಂತರ (Karkala MLA hands over a sturdy house to a poor woman from Hebri)

Share: ಹೆಬ್ರಿಯ ಬಡ ಮಹಿಳೆಗೆ ಕಾರ್ಕಳ ಶಾಸಕರಿಂದ ಸದೃಢ ಮನೆ ಹಸ್ತಾಂತರ ಹೆಬ್ರಿ ಗ್ರಾಮದ ಬಡ ಚುಕ್ರಿ ಕೊರಗರವರಿಗೆ ಮನೆ ಹಸ್ತಾಂತರ (Karkala) ಕಾರ್ಕಳ : ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಸೇವಾ ಕಾರ್ಯಗಳಲ್ಲಿ ಒಂದಾದ ಹೆಬ್ರಿ ಗ್ರಾಮದ ಬಡ ಮಹಿಳೆ ಚುಕ್ರಿ ಕೊರಗ ಅವರಿಗೆ ನಿರ್ಮಿಸಿದ  ಸದೃಢ ಮನೆಯ ಹಸ್ತಾಂತರ ಕಾರ್ಯವು ಇತ್ತೀಚೆಗೆ ನಡೆಯಿತು.    ಶಾಸಕ ವಿ. ಸುನಿಲ್ ಕುಮಾರ್ ಅವರು ಗಣ್ಯರ ಸಮಕ್ಷಮ ಬಡ ಮಹಿಳೆಯ ಕುಟುಂಬಕ್ಕೆ ಮನೆ ಹಸ್ತಾಂತರಿಸಿದರು‌. […]

(Karkala) ಕಾರ್ಕಳ : ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಸೇವಾ ಕಾರ್ಯಗಳಲ್ಲಿ ಒಂದಾದ ಹೆಬ್ರಿ ಗ್ರಾಮದ ಬಡ ಮಹಿಳೆ ಚುಕ್ರಿ ಕೊರಗ ಅವರಿಗೆ ನಿರ್ಮಿಸಿದ  ಸದೃಢ ಮನೆಯ ಹಸ್ತಾಂತರ ಕಾರ್ಯವು ಇತ್ತೀಚೆಗೆ ನಡೆಯಿತು.

   ಶಾಸಕ ವಿ. ಸುನಿಲ್ ಕುಮಾರ್ ಅವರು ಗಣ್ಯರ ಸಮಕ್ಷಮ ಬಡ ಮಹಿಳೆಯ ಕುಟುಂಬಕ್ಕೆ ಮನೆ ಹಸ್ತಾಂತರಿಸಿದರು‌.

    ಬಡ ಮಹಿಳೆ ಚುಕ್ರಿ ಕೊರಗರವರ ಹೆಣ್ಣು ಮಕ್ಕಳು, ಮೊಮ್ಮಕ್ಕಳ ಕುಟುಂಬ ಶಿಥಿಲಾವಸ್ಥೆಯ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಮಳೆ ಬಂದರೆ ಮನೆ ಸೋರುತ್ತಿತ್ತು. ಗೋಡೆಗಳು ಬಿರುಕು ಬಿಟ್ಟಿದ್ದವು. ಮೇಲ್ಛಾವಣಿ ಕುಸಿಯುವ ಸ್ಥಿತಿಯಲ್ಲಿತ್ತು. ಬದುಕು ಅಸಾಧ್ಯವಾಗಿತ್ತು.

   ಮನೆಯ ಪಕ್ಕದ ಶೌಚಾಲಯವೂ ಮಳೆಗೆ ಕೊಚ್ಚಿಹೋಗಿತ್ತು. ಬದುಕು ಕತ್ತಲೆಗೆ ದೂಡಿತ್ತು. ಈ ಬಡ ಕುಟುಂಬದ  ನೋವಿನ ಕಥೆ ಮನಗಂಡ  ಶಾಸಕ ಸುನೀಲ್‌ ಕುಮಾರ್‌ ರವರು ಸದೃಢ ಮನೆ ನಿರ್ಮಾಣ ಕಾರ್ಯ ನಡೆಸಿ ಹಸ್ತಾಂತರಿಸಿದರು. 

    ಸೇವಾ ಕಾರ್ಯದಡಿ ಶಾಸಕರು ಈ ಹಿಂದೆ ಅಗಸ್ಡ್ 15 ರಂದು ತನ್ನ 50ನೇ ಹುಟ್ಟು ಹಬ್ಬದ  ಸೇವಾ ಕಾರ್ಯದ ಪ್ರಯುಕ್ತ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಹಸ್ತಾಂತರಿಸಿದ್ದರು. ಇನ್ಮೂ ಹಲವು ಸೇವಾ ಕಾರ್ಯಗಳು ಇದುವರೆಗೆ ಕ್ಷೇತ್ರದ ಶಾಸಕರಿಂದ  ನಡೆದಿದೆ.

    ಸರಳ ಕಾರ್ಯಕ್ರಮದಲ್ಲಿ ಪ್ರಮುಖರಾದ ಸತೀಶ್ ಪೈ, ಲಕ್ಷ್ಮೀನಾರಾಯಣ ನಾಯಕ್, ತಾರಾನಾಥ್ ಬಂಗೇರ ಸುಧಾಕರ್ ಹೆಗ್ಡೆ, ಅರುಣ್ ಶೆಟ್ಟಿ, ಗಣೇಶ್ ಕುಮಾರ್, ಹೆಚ್ ಕೆ ಸುಧಾಕರ್, ಸುರೇಶ್ ಭಂಡಾರಿ, ಪ್ರಸಾದ್ ಭಂಡಾರಿ, ಶಶಿಧರ್ ಭೋಜ ಶೆಟ್ಟಿ, ಚುಕ್ರಿ ಹಾಗೂ ಚುಕ್ರಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.