• Home  
  • ಸಂಕಲಕರಿಯ ಅಶ್ವತ ಗೆಳೆಯರ ಬಳಗದ ವತಿಯಿಂದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾ ಕೂಟ (Village level volleyball tournament organized by the Ashwat Friends Association of Sankalkar)
- ಕ್ರೀಡೆ - ಸಂಘ, ಸಂಸ್ಥೆಗಳು

ಸಂಕಲಕರಿಯ ಅಶ್ವತ ಗೆಳೆಯರ ಬಳಗದ ವತಿಯಿಂದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾ ಕೂಟ (Village level volleyball tournament organized by the Ashwat Friends Association of Sankalkar)

Share: ಸಂಕಲಕರಿಯ ಅಶ್ವತ ಗೆಳೆಯರ ಬಳಗದ ವತಿಯಿಂದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾ ಕೂಟ  ಪಂದ್ಯಾ ಕೂಟ ಉದ್ಘಾಟಿಸಿದ ಕಾರ್ಕಳ ಶಾಸಕ ಸುನಿಲ್ ಕುಮಾರ್   (Belman) ಬೆಳ್ಮಣ್‌ : ಅಶ್ವತ್ಥ ಗೆಳೆಯರ ಬಳಗ (ರಿ.) ಉಗ್ಗೆದಬೆಟ್ಟು, ಸಂಕಲಕರಿಯ ಅಶಕ್ತರಿಗೆ ಸಹಾಯಾರ್ಥ ಹಾಗೂ ವೈದ್ಯಕೀಯ ನೆರವಿಗಾಗಿ 5ನೇ ವರ್ಷದ ಗ್ರಾಮೀಣ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟ ಉಗ್ಗೆದಬೆಟ್ಟು ಮೈದಾನದಲ್ಲಿ ಜರಗಿತು.    ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ದೀಪ  ಪ್ರಜ್ವಲನೆಯ ಮೂಲಕ ಪಂದ್ಯಾಟಕ್ಕೆ ವಿದ್ಯುಕ್ತವಾಗಿ ಚಾಲನೆ […]

(Belman) ಬೆಳ್ಮಣ್‌ : ಅಶ್ವತ್ಥ ಗೆಳೆಯರ ಬಳಗ (ರಿ.) ಉಗ್ಗೆದಬೆಟ್ಟು, ಸಂಕಲಕರಿಯ ಅಶಕ್ತರಿಗೆ ಸಹಾಯಾರ್ಥ ಹಾಗೂ ವೈದ್ಯಕೀಯ ನೆರವಿಗಾಗಿ 5ನೇ ವರ್ಷದ ಗ್ರಾಮೀಣ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾಟ ಉಗ್ಗೆದಬೆಟ್ಟು ಮೈದಾನದಲ್ಲಿ ಜರಗಿತು.

   ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ದೀಪ  ಪ್ರಜ್ವಲನೆಯ ಮೂಲಕ ಪಂದ್ಯಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಅವರು ಮಾತನಾಡಿ, ಕ್ರೀಡೆಯಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಸ್ಪರ್ದಾಳುಗಳು ಕ್ರೀಡಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.

    ಮುಖ್ಯ ಅತಿಥಿಗಳಾಗಿ ಮಂಜಣ್ಣ ಸೇವಾ ಬ್ರಿಗೇಡ್ ಸ್ಥಾಪಕಾಧ್ಯಕ್ಷ ಮನೋಜ್ ಕೋಡಿಕೆರೆ, ಜಿತೇಶ್ ಮಿಜಾರ್, ಸೋಮನಾಥ್ ಪೂಜಾರಿ ಅಮ್ಮ ಕ್ಯಾಟರರ್ಸ್, ಭಾಸ್ಕರ ಪೂಜಾರಿ, ದಿನೇಶ್ ಶೆಟ್ಟಿ ಕೊಟ್ರಪಾಡಿ, ಅಶ್ವತ ಗೆಳೆಯರ ಬಳಗದ ಅಧ್ಯಕ್ಷ ಅಜಿತ್,  ಸ್ಥಾಪಕಾಧ್ಯಕ್ಷ ಸುರೇಶ್ ಆಚಾರ್ಯ, ಗಿರೀಶ್ ಆಚಾರ್ಯ ಉಪಸ್ಥಿತರಿದ್ದರು.

ಅಶ್ವತ ಗೆಳೆಯರ ಬಳಗದ ಅಧ್ಯಕ್ಷ ಅಜಿತ್ ಸ್ವಾಗತಿಸಿದರು. ಸಂದೀಪ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.