ಬೆಳ್ಮಣ್ ಸರಕಾರಿ ಪ.ಪೂ ಕಾಲೇಜು ವಾರ್ಷಿಕೋತ್ಸವ – ಕಾರ್ಕಳ ತಹಶೀಲ್ದಾರ್ ಗೆ ಸನ್ಮಾನ
ಜೀವನದ ಪಾಠ ಹೇಳುವ ಶಿಕ್ಷಣ ಅಗತ್ಯ : ತಹಶೀಲ್ದಾರ್ ಪ್ರದೀಪ್ ಆರ್
(Belman) ಬೆಳ್ಮಣ್ : ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ನಿರಾಸಕ್ತಿ ಇದೆ. ಅತ್ಯುತ್ತಮ ಹುದ್ದೆಗಳು ಸಮಾಜ ಸೇವೆ ಪೂರಕ ಎಂದು ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್ ಹೇಳಿದರು.
ಅವರು ಬೆಳ್ಮಣ್ ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ಸೇವೆ ಮಾಡಲು ಅನುಕೂಲ. ಕುಟುಂಬ ಗೌರವವನ್ನೂ ಹೊಂದ ಬಹುದಾಗಿದೆ ಎಂದ ಅವರು, ಜೀವನದ ಪಾಠ ಹೇಳುವ ಶಿಕ್ಷಣ ಅಗತ್ಯ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೂರ್ಯಕಾಂತ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುರಳೀಧರ ಜೋಗಿಯವರನ್ನು ಸಮ್ಮಾನಿಸಲಾಯಿತು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಹಾಸ್ ಹೆಗ್ಡೆ, ರೋಟರಿ ವಲಯ 5 ರ ಸಹಾಯಕ ಗವರ್ನರ್ ವಿಜ್ಞೇಶ್ ಶೆಣೈ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಬಾಲಚಂದ್ರ
ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್ ಮತ್ತಿತರರಿದ್ದರು.
ಕಾಲೇಜು ಪ್ರಾಚಾರ್ಯ ವಿನೋದ್ ವಿನ್ಸೆಂಟ್ ಸ್ವಾಗತಿಸಿ, ವರದಿ ನೀಡಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಾಲ್ ಪ್ರೌಢಶಾಲೆಯ ವರದಿ ನೀಡಿದರು. ಅರ್ಥ ಶಾಸ್ತ್ರ ಉಪನ್ಯಾಸಕ ವಿಜಯ ಕುಮಾರ್ ಸಮ್ಮಾನಿತರ ಪರಿಚಯ ಮಾಡಿದರು. ವಿಲಾಸಿನಿ ಕಾರ್ಯಕ್ರಮ ನಿರೂಪಿಸಿದರು.

