ಮಂದಾರ್ತಿ ಯಕ್ಷಗಾನ ಮೇಳದ ಬಣ್ಣದ ವೇಷಗಾರ ಬಣ್ಣದಲ್ಲಿದ್ದಾಗಲೇ ಸಾವು
ಬಣ್ಣದ ವೇಷಗಾರ ನೆಮ್ಮಾರು ಈಶ್ವರ ಗೌಡ ಮೃತಪಟ್ಟವರು
(Kundapura) ಕುಂದಾಪುರ : ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಮಂದಾರ್ತಿ ಇದರ ಎರಡನೇ ಮೇಳದ ಕಲಾವಿದ, ಬಣ್ಣದ ವೇಷಗಾರ ನೆಮ್ಮಾರು ಈಶ್ವರ ಗೌಡ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ಪ್ರದರ್ಶನ ವೇಳೆ ಅಸೌಖ್ಯಕ್ಕೆ ಒಳಗಾಗಿ ಮೃತಪಟ್ಟ ಘಟನೆ ಘಟಿಸಿದೆ.
ಬುಧವಾರ ರಾತ್ರಿ ಕುಂದಾಪುರ ತಾಲೂಕು ಸೌಧದಲ್ಲಿ ಆಯೋಜಿಸಲಾಗಿದ್ದ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ನೆಮ್ಮಾರು ಈಶ್ವರ ಗೌಡರವರು ಮಹಿಷಾಸುರನ ಪಾತ್ರ ಮಾಡಿದ್ದರು.
ಯಕ್ಷಗಾನದ ಕೊನೆ ಕ್ಷಣದ ಪ್ರದರ್ಶನ ವೇಳೆ ತೀವ್ರ ಅಸೌಖ್ಯಕ್ಕೆ ಒಳಗಾಗಿದ್ದ ಈಶ್ವರ ಗೌಡರವರು ಅಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕಾರಿನಲ್ಲಿ ಹಾಲಾಡಿಗೆ ಕರೆ ತರುವ ವೇಳೆ ಮೃತ ಪಟ್ಟಿದ್ದಾರೆ.
ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ಈಶ್ವರ ಗೌಡರವರ ತಂದೆಯವರೂ ವೇಷಧಾರಿಯಾಗಿದ್ದು, ತಂದೆಯ ಆಶೀರ್ವಾದ ಪಡೆದು ಪಾತ್ರ ನಿರ್ವಹಿಸಿದ್ದರು.

