• Home  
  • ತೆಂಕ ಎರ್ಮಾಳು: ಪಿಡಿಒ ಸಹಿ ನಕಲು, ದೂರು ದಾಖಲು (Tenka Yermalu: Copy of PDO’s signature, complaint filed)
- ಅಪಘಾತ

ತೆಂಕ ಎರ್ಮಾಳು: ಪಿಡಿಒ ಸಹಿ ನಕಲು, ದೂರು ದಾಖಲು (Tenka Yermalu: Copy of PDO’s signature, complaint filed)

Share: ತೆಂಕ ಎರ್ಮಾಳು: ಪಿಡಿಒ ಸಹಿ ನಕಲು, ದೂರು ದಾಖಲು ಪಿಡಿಒ ರಜನಿಯವರ ಸಹಿ ದುರುಪಯೋಗ (Thenka yermal) ತೆಂಕ ಎರ್ಮಾಳು: ತನ್ನ ಸಹಿಯನ್ನು ಪಂಚಾಯತ್ ಸಿಬಂದಿಯೊಬ್ಬರು ನಕಲು ಮಾಡಿ ದೃಢಪತ್ರವೊಂದನ್ನು ಮೂಲ್ಕಿ ಉಪನೋಂದಣಿ ಕಚೇರಿಗೆ ನೀಡಿದ್ದಾರೆ ಎಂದು ತೆಂಕ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರಜನಿ ಅವರು ಪಡುಬಿದ್ರಿ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.    ಪಿಡಿಒ ರಜನಿಯವರ ಸಹಿ ದುರುಪಯೋಗ ಆಗಿರುವ ಬಗ್ಗೆ ಅವರಿಗೆ ಸಾರ್ವಜನಿಕರಿಂದ ಮಾಹಿತಿ ಲಭಿಸಿತ್ತು. ಹಾಗಾಗಿ ತೆಂಕ ಗ್ರಾ. […]

(Thenka yermal) ತೆಂಕ ಎರ್ಮಾಳು: ತನ್ನ ಸಹಿಯನ್ನು ಪಂಚಾಯತ್ ಸಿಬಂದಿಯೊಬ್ಬರು ನಕಲು ಮಾಡಿ ದೃಢಪತ್ರವೊಂದನ್ನು ಮೂಲ್ಕಿ ಉಪನೋಂದಣಿ ಕಚೇರಿಗೆ ನೀಡಿದ್ದಾರೆ ಎಂದು ತೆಂಕ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ರಜನಿ ಅವರು ಪಡುಬಿದ್ರಿ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.

   ಪಿಡಿಒ ರಜನಿಯವರ ಸಹಿ ದುರುಪಯೋಗ ಆಗಿರುವ ಬಗ್ಗೆ ಅವರಿಗೆ ಸಾರ್ವಜನಿಕರಿಂದ ಮಾಹಿತಿ ಲಭಿಸಿತ್ತು. ಹಾಗಾಗಿ ತೆಂಕ ಗ್ರಾ. ಪಂ. ಕಚೇರಿಯಿಂದ ಮೂಲ್ಕಿ ಉಪನೊಂದಣಾಧಿಕಾರಿ ಕಚೇರಿಗೆ ಕಳುಹಿಸಿದ ದಾಖಲೆಗಳನ್ನೆಲ್ಲ ಪರಿಶೀಲಿಸಿದಾಗ, ಗ್ರಾ.ಪಂ. ವ್ಯಾಪ್ತಿಯ 7ನೇ ವಾರ್ಡಿನ ಸರ್ವೇ ನಂಬ್ರ 56/2ರಲ್ಲಿ ಗಿರಿಯಪ್ಪ ಕೋಟ್ಯಾನ್ ಅವರ ಹೆಸರಿನಲ್ಲಿ ಕಟ್ಟಡ ನಂಬ್ರ 7-5ರಲ್ಲಿರುವ ವಾಸ್ತವ್ಯದ ಕಟ್ಟಡವು ಸುಮಾರು 800 ಚದರ ಅಡಿಯ ಹಂಚಿನ ಕಟ್ಟಡವಾಗಿದ್ದು, ಕಟ್ಟಡದ ನೆಲಕ್ಕೆ ಟೈಲ್ಸ್ ಅಳವಡಿಸಲಾಗಿರುತ್ತದೆ ಎಂದು ಈ ಮೂಲಕ ದೃಢಪಡಿಸಲಾಗಿದೆ ಎಂದು ನಮೂದಿಸಿರುವುದು ಪತ್ತೆಯಾಗಿದೆ.

   ಆದರೆ ಅದನ್ನು ಪಿಡಿಒ ಜನಿಯವರು ನೀಡಿರಲಿಲ್ಲ ದೃಡಪತ್ರದಲ್ಲಿ ತೆಂಕ ಗ್ರಾ. ಪಂ.ನ ಲೆಟರ್‌ಹೆಡ್‌ನಲ್ಲಿ ಪಿಡಿಒ ಅವರ ಸೀಲು ಹಾಗೂ ನಕಲಿ ಸಹಿ ಇರುವುದು ಕಂಡುಬಂದಿದೆ.

ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.