ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆ : ಪೂರ್ವಭಾವಿಯಾಗಿ ಶಾಂತಿಗಾಗಿ ಪೊಲೀಸರಿಂದ ಪೆರೇಡ್
ಅಧಿಕಾರಿಗಳಿಂದ ಮತ ಯಂತ್ರ ಪರಿಶೀಲನೆ
(Kinnigoli) ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ 18 ವಾರ್ಡ್ ಗಳಿಗೆ ಡಿ. 21 ರಂದು ಚುನಾವಣೆ ಹಿನ್ನಲೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಹಾಗೂ ಶಾಂತಿ ಕಾಪಾಡುವ, ನಾಗರಿಕರಲ್ಲಿ ಧೈರ್ಯ ಮೂಡಿಸುವ ನಿಟ್ಟಿನಲ್ಲಿ ಮುಲ್ಕಿ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಬಿ ಎಸ್ ಹಾಗೂ ಹಾಗೂ ವಿಶೇಷ ಕಾರ್ಯಪಡೆಯ ನೇತೃತ್ವದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಿಂದ ರಾಜಾಂಗಣದ ತನಕ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ, ಪರೇಡ್ ನಡೆಯಿತು.
ಕಿನ್ನಿಗೋಳಿ ಪಟ್ಟಣ ಪಂಚಾಯತ್‌ಗೆ ನಡೆಯಲಿರುವ ಚುನಾವಣೆಗೆ ಮಂಗಳವಾರದಂದು ಮತ ಯಂತ್ರಗಳ ಪರಿಶೀಲನೆ ನಡೆಯಿತು. ಚುನಾವಣೆ ಅಧಿಕಾರಿಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.

