ಮುದರಂಗಡಿಯಲ್ಲಿ ರಸ್ತೆ ಡಿವೈಡರ್ಗೆ ಬೈಕ್ ಡಿಕ್ಕಿ – ಯುವಕ ದುರ್ಮರಣ
ಮುದರಂಗಡಿಯ ಜಾಸ್ವಿನ್ ಡಿಸೋಜ (23) ಮೃತಪಟ್ಟ ದುರ್ದೈವಿ ಯುವಕ
(Shirva) ಶಿರ್ವ : ಇಲ್ಲಿನ ಮುದರಂಗಡಿ ಪೇಟೆಯ ಸಮೀಪ ಇಂದು (ಡಿಸೆಂಬರ್ 26) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಘಟಿಸಿದೆ.
ಮೃತ ಯುವಕನನ್ನು ಮುದರಂಗಡಿ ಅಗರ್ ದಂಡೆ ನಿವಾಸಿ ಜಾಸ್ವಿನ್ ಡಿಸೋಜ (23) ಮೃತಪಟ್ಟ ದುರ್ದೈವಿ.
ಘಟನೆಯ ವಿವರ:
ಶುಕ್ರವಾರ ಮುಂಜಾನೆ ಸುಮಾರು 3:40ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಜಾಸ್ವಿನ್ ಅವರು ತಡರಾತ್ರಿವರೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ವಾಪಸ್ ಮನೆಗೆ ಮರಳುತ್ತಿದ್ದಾಗ, ಮುದರಂಗಡಿ ಪೇಟೆ ಸಮೀಪದ ರಸ್ತೆ ಪಕ್ಕದಲ್ಲಿದ್ದ ಡಿವೈಡರ್ಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಜಾಸ್ವಿನ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಮಣಿಪಾಲಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಅಂತ್ಯಕ್ರಿಯೆ:
ಮೃತ ಜಾಸ್ವಿನ್ ರವರ ಅಂತ್ಯಕ್ರಿಯೆಯು ನಾಳೆ (ಡಿಸೆಂಬರ್ 27) ಸಂಜೆ 4:00 ಗಂಟೆಗೆ ಮುದರಂಗಡಿಯ ಚರ್ಚ್ನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

