• Home  
  • ಮೂಡುಬೆಟ್ಟು ಶ್ರೀ ಕೋಡ್ದಬ್ಬು ಪರಿವಾರ ದೈವಗಳ ವಾರ್ಷಿಕ ತಂಪು ನೇಮ – ಉರಿ ನೇಮ (Annual thampu nema – Uri nema of Mudubettu Shri Koddabbu Parivara deities)
- ಧಾರ್ಮಿಕ

ಮೂಡುಬೆಟ್ಟು ಶ್ರೀ ಕೋಡ್ದಬ್ಬು ಪರಿವಾರ ದೈವಗಳ ವಾರ್ಷಿಕ ತಂಪು ನೇಮ – ಉರಿ ನೇಮ (Annual thampu nema – Uri nema of Mudubettu Shri Koddabbu Parivara deities)

Share: ಮೂಡುಬೆಟ್ಟು ಶ್ರೀ ಕೋಡ್ದಬ್ಬು ಪರಿವಾರ ದೈವಗಳ ವಾರ್ಷಿಕ ತಂಪು ನೇಮ – ಉರಿ ನೇಮಸಾರ್ವಜನಿಕ ಅನ್ನಸಂತರ್ಪಣೆ, ಹೂವಿನ ಪೂಜೆ ನೆರವೇರಿತು   (Yermal)ಎರ್ಮಾಳು : ಶ್ರೀ ಕೋಡ್ದಬ್ಬು ದೈವಸ್ಥಾನ, ಮೂಡುಬೆಟ್ಟು ಇಲ್ಲಿ ಕೋಡ್ದಬ್ಬು ತನ್ನಿಮಾನಿಗ – ಧೂಮಾವತಿ ಬಂಟ ದೈವಗಳ ‘ತಂಪು ನೇಮ – ಉರಿ ನೇಮ’ ವು ಸಂಪನ್ನಗೊಂಡಿತು.    ಚಪ್ಪರ ಮುಹೂರ್ತ, ಸಂಜೆ ಗಂಟೆ 6.30ಕ್ಕೆ ಭಂಡಾರ ಇಳಿದು, ಸಂಜೆ ಗಂಟೆ 7.30 ರಿಂದ ಮೂಡುಬೆಟ್ಟು ನೈಮಾಡಿ ಲಕ್ಷ್ಮೀ ನಿವಾಸ ಸುಂದರಿ ಕಾಂತಾರ ಶೆಟ್ಟಿ […]

(Yermal)ಎರ್ಮಾಳು : ಶ್ರೀ ಕೋಡ್ದಬ್ಬು ದೈವಸ್ಥಾನ, ಮೂಡುಬೆಟ್ಟು ಇಲ್ಲಿ ಕೋಡ್ದಬ್ಬು ತನ್ನಿಮಾನಿಗ – ಧೂಮಾವತಿ ಬಂಟ ದೈವಗಳ ‘ತಂಪು ನೇಮ – ಉರಿ ನೇಮ’ ವು ಸಂಪನ್ನಗೊಂಡಿತು.

   ಚಪ್ಪರ ಮುಹೂರ್ತ, ಸಂಜೆ ಗಂಟೆ 6.30ಕ್ಕೆ ಭಂಡಾರ ಇಳಿದು, ಸಂಜೆ ಗಂಟೆ 7.30 ರಿಂದ ಮೂಡುಬೆಟ್ಟು ನೈಮಾಡಿ ಲಕ್ಷ್ಮೀ ನಿವಾಸ ಸುಂದರಿ ಕಾಂತಾರ ಶೆಟ್ಟಿ ಸ್ಮರಣಾರ್ಥ ಇವರ ಮಕ್ಕಳ ಪ್ರಾಯೋಜಕತ್ವದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.

 ರಾತ್ರಿ ಗಂಟೆ 9 ರಿಂದ  ಕೋಡ್ದಬ್ಬು ತನ್ನಿಮಾನಿಗ ‘ತಂಪು ನೇಮ’ ಹಾಗೂ ವಿನಯ ಕೆ. ಶೆಟ್ಟಿ, ಸ್ಮರಣಾರ್ಥ “ವಿನಾಯಕ ಕೇಟರರ್ಸ್” ವತಿಯಿಂದ ಹೂವಿನ ಪೂಜೆ ನೆರವೇರಿತು.

  ಈ ಸಂದರ್ಭ  ಸ್ಥಳವಂದಿಗರು ಹಾಗೂ ಮೊಕ್ತೇಸರರಾದ ಲೆಪ್ಪುಗುತ್ತು ವಿಜಯ ಶೆಟ್ಟಿ ಮಹಾಬಲಗುತ್ತು, ಬೋಜ ಶೆಟ್ಟಿ ಬರ್ಪಾಣಿ, ನೈಮಾಡಿ ಲಕ್ಷ್ಮೀ ನಿವಾಸ ನಾರಾಯಣ ಕೆ. ಶೆಟ್ಟಿ, ನಿತ್ಯಾನಂದ ಶೆಟ್ಟಿ ಹೊಸಮನೆ, ನಾಟಿಮನೆ ಪ್ರಭಾಕರ್ ಆರ್. ಸಾಲ್ಯಾನ್, ಮೂಡುಬೆಟ್ಟು, ಡಾ. ವಿಜಯ ಕುಮಾರ್, ಪೂವ ಮಾಸ್ಟರ್ ಮನೆ ರಂಗನಾಥ ಅದಮಾರು, ಆಡಳಿತ ಮೊಕ್ತೇಸರ ಎರ್ಮಾಳು ಉದಯ ಕೆ. ಶೆಟ್ಟಿ, ಕಾರ್ಯದರ್ಶಿ ಅರುಣ್ ಕುಮಾರ್ ಮೂಡುಬೆಟ್ಟು, ಕೋಶಾಧಿಕಾರಿ ಬರ್ಪಾಣಿ ಸಂತೋಷ್ ಜೆ. ಶೆಟ್ಟಿ, ಅರ್ಚಕರು ಉಪಸ್ಥಿತರಿದ್ದರು.

 ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ದೈವಗಳ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.