ಮುಲ್ಕಿ: ಕಬ್ಬಿಣದ ಸರಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಅಪಘಾತ
ರಸ್ತೆಗೆ ಜಾರಿದ ಕಬ್ಬಿಣದ ಸರಳುಗಳು :ತಪ್ಪಿದ ಅನಾಹುತ
(Mulki) : ಮುಲ್ಕಿ: ಮುಲ್ಕಿ ಜಂಕ್ಷನಿನಲ್ಲಿ ತನ್ನ ಮಿತಿಗಿಂತ ಉದ್ದದ ಕಬ್ಬಿಣದ ಸರಳನ್ನು ಕೊಂಡೊಯ್ಯುತ್ತಿದ್ದ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಡಿವೈಡರ್ ಏರಿ, ಕಬ್ಬಿಣದ ಸರಳುಗಳು ಜಾರಿ ರಸ್ತೆಗೆ ಬಿದ್ದ ಘಟನೆ ಶುಕ್ರವಾರ ಸಂಜೆ ಘಟಿಸಿದೆ.
ಅದೃಷ್ಟವಶಾತ್ ಅಪಘಾತಕ್ಕೀಡಾದ ಪಿಕಪ್ ವಾಹನದ ಸಮೀಪ ಯಾವುದೇ ವಾಹನಗಳು ಇಲ್ಲದ್ದರಿಂದ ಸಂಭಾವ್ಯ ಅಪಘಾತವೊಂದು ತಪ್ಪಿದೆ.
ಇದೇ ರೀತಿಯ ದುರ್ಘಟನೆ ಈ ಹಿಂದೆ ಕೂಳೂರು ಕುದುರೆಮುಖ ಸಮೀಪ ನಡೆದಿತ್ತು. ಮಿತಿಗಿಂತ ಹೆಚ್ಚು ಪ್ಲೈವುಡ್ ಗಳನ್ನು ಕೊಂಡೊಯ್ಯುತ್ತಿದ್ದ ಲಾರಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕಾರ್ಮಿಕರ ಮೇಲೆ ಬಿದ್ದು ಸಾವು ನೋವು ಸಂಭವಿಸಿತ್ತು.
ಮುಲ್ಕಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

