• Home  
  • ವಿದುಷಿ ದೀಕ್ಷಾರಿಂದ ಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ ನೃತ್ಯಾರ್ಪಣೆ (Vidushi Deeksha performs a solo song and dance performance to the compositions of Purandara Das)
- World - ಜೀವನಶೈಲಿ - ಮನೋರಂಜನೆ

ವಿದುಷಿ ದೀಕ್ಷಾರಿಂದ ಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ ನೃತ್ಯಾರ್ಪಣೆ (Vidushi Deeksha performs a solo song and dance performance to the compositions of Purandara Das)

Share: ವಿದುಷಿ ದೀಕ್ಷಾರಿಂದ ಪುರಂದರ ದಾಸರ ರಚನೆಗಳಿಗೆ ಏಕವ್ಯಕ್ತಿ ಗಾನ ನೃತ್ಯಾರ್ಪಣೆ   ವಿಶ್ವದಾಖಲೆಗೆ ದೀಕ್ಷಾ ಪ್ರಯತ್ನ  (Udupi) ಉಡುಪಿ: ಹೆಜ್ಜೆ ಗೆಜ್ಜೆ ಉಡುಪಿ-ಮಣಿಪಾಲ ಸಂಸ್ಥೆಯ ಸಹ ನಿರ್ದೇಶಕಿ ವಿದುಷಿ ದೀಕ್ಷಾ ರಾಮಕೃಷ್ಣ ಪುರಂದರ ದಾಸರ ರಚನೆ ಗಳಿಗೆ ಏಕವ್ಯಕ್ತಿ ‘ಗಾನ ನೃತ್ಯಾರ್ಪಣೆ’ `ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರ್ಪಡೆಗೆ ಜ. 3 ರಂದು ಪ್ರಯತ್ನಿಸಲಿದ್ದಾರೆ.     ವಿದುಷಿ ದೀಕ್ಷಾ ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ  ಮಾಹಿತಿ ನೀಡಿ, ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ […]

 (Udupi) ಉಡುಪಿ: ಹೆಜ್ಜೆ ಗೆಜ್ಜೆ ಉಡುಪಿ-ಮಣಿಪಾಲ ಸಂಸ್ಥೆಯ ಸಹ ನಿರ್ದೇಶಕಿ ವಿದುಷಿ ದೀಕ್ಷಾ ರಾಮಕೃಷ್ಣ ಪುರಂದರ ದಾಸರ ರಚನೆ ಗಳಿಗೆ ಏಕವ್ಯಕ್ತಿ ‘ಗಾನ ನೃತ್ಯಾರ್ಪಣೆ’ `ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರ್ಪಡೆಗೆ ಜ. 3 ರಂದು ಪ್ರಯತ್ನಿಸಲಿದ್ದಾರೆ.

    ವಿದುಷಿ ದೀಕ್ಷಾ ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ  ಮಾಹಿತಿ ನೀಡಿ, ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಈ ಕಾರ್ಯಕ್ರಮ ಬೆಳಗ್ಗೆ 8.30ಕ್ಕೆ ಉದ್ಘಾಟನೆಗೊಳ್ಳಲಿದೆ.

  9 ಗಂಟೆ ಯಿಂದ ನವೀನ ರೀತಿಯ ಏಕವ್ಯಕ್ತಿ ‘ಪುರಂದರ ಗಾನ -ನರ್ತನ’ ಪ್ರಾರಂಭಗೊಳ್ಳುತ್ತದೆ. ಹಿಮ್ಮೇಳದಲ್ಲಿ ಹಾರ್ಮೋ ನಿಯಂನಲ್ಲಿ ವಿದ್ವಾನ್‌ ಸತೀಶ್ ಭಟ್, విద్వానా ಶಶಿಕಿರಣ್ ಮಣಿಪಾಲ, ತಬಲಾದಲ್ಲಿ ವಿದ್ವಾನ್ ಮಾಧವಾಚಾರ್ಯ ಉಡುಪಿ, ವಿದುಷಿ ವಿಜೇತಾ ಹೆಗಡೆ ಕೆರೆಮನೆ ಸಹಕರಿಸಲಿದ್ದಾರೆ.

    ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಏಷ್ಯಾ ಮುಖ್ಯಸ್ಥ ಡಾ. ಮನಿಷ್ ಬಿಷ್ಟೋಮ್, ಹೆಜ್ಜೆ ಗೆಜ್ಜೆ ಸಂಸ್ಥೆಯ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣ, ಬಸವ ಟ್ರಸ್ಟ್ ಬಳ್ಳಾರಿ ಸಂಸ್ಥಾಪಕ ಡಾ. ಶರಣಬಸವ ಹಾಗೂ ಹೆಜ್ಜೆಗೆಜ್ಜೆಯ ಕಾರ್ಯದರ್ಶಿ ರಾಮಕೃಷ್ಣ ಹೆಗಡೆ ಉಪಸ್ಥಿತರಿರುವರು.

   ಸಂಜೆ 5 ಗಂಟೆಗೆ ಸಮಾರೋಪ ನಡೆಯಲಿದ್ದು, ಪಲಿಮಾರು ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ, ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಡಾ. ಮನಿಷ್ ಬಿಷ್ಟೋಯ್, ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ, ವಿದ್ವಾನ್ ರಾಘವೇಂದ್ರ ಆಚಾರ್ಯ ಮಣಿಪಾಲ, ಎಂಜಿಎಂ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಡಾ.ಎಂ.‌ ವಿಶ್ವನಾಥ ಪೈ, ಡಾ. ಶರಣಬಸವ ಭಾಗವಹಿಸಲಿದ್ದಾರೆ.

   ನಂತರ ಹೆಜ್ಜೆ ಗೆಜ್ಜೆ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

   ದೀಕ್ಷಾ ರಾಮಕೃಷ್ಣ ಭರತನಾಟ್ಯ ಕಲಾವಿದೆಯಾಗಿದ್ದು, ಝೀ ಕನ್ನಡ ಸರಿಗಮಪ ಸೀಸನ್ 13ರ ಫೈನಲಿಸ್ಟ್, 2 ಬಾರಿ ಈ ಟಿವಿ ಎದೆ ತುಂಬಿ ಹಾಡುವೆನು ವಿನ್ನರ್, ಆಕಾಶವಾಣಿ ಬಿ ಹೈ ಗ್ರೇಡ್ ಕಲಾವಿದರಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.