ಎರ್ಮಾಳು ತೆಂಕ ಕಿನಾರ ಗ್ಲೋಬಲ್ ಶಾಲೆ ವಾರ್ಷಿಕೋತ್ಸವ
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಸಿಇಓ ಪ್ರತೀಕ್ ಬಾಯಲ್
(Yhenka Yermal) ತೆಂಕ ಎರ್ಮಾಳು: ತೆಂಕ ಎರ್ಮಾಳು ಕಿನಾರ ಗ್ಲೋಬಲ್ ಶಾಲೆ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು.
ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್ ರವರು ಕಾರ್ಯಕ್ರಮ ಉದ್ಘಾಟಿಸಿದರು
ಅವರು ಮಾತನಾಡಿ, ಶಿಕ್ಷಣವು ಕೇವಲ ಅಂಕಕ್ಕೆ ಸೀಮಿತವಾಗದೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರ ಬೇಕು ಎಂದರು.
ಇನ್ನೊರ್ವ ಮುಖ್ಯ ಅತಿಥಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ್ ಮಾತನಾಡಿ, ಪೋಷಕರು ಮಕ್ಕಳಿಗೆ ಅಸ್ತಿಯನ್ನು ಮಾಡುವ ಬದಲಿಗೆ ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನೇ ಸಮಾಜಕ್ಕೆ ಅಸ್ತಿಗಳನ್ನಾಗಿ ಮಾಡಿ ಎಂದರು.
ವಿಶೇಷ ಅಹ್ವಾನಿತರಾಗಿ ಕಾಪು ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಜೇಮ್ಸ್ ಡಿ ಸಿಲ್ವ, ಡಾ. ಸುನಿಲ್ ಕುಮಾರ್, ಅಲ್ ಫಲಹ್ ಮ್ಯಾನೇಜಿಂಗ್ ಡೈರೆಕ್ಟರ್ ನಜೀರ್ ಹುಸೇನ್, ಉದ್ಯಮಿ ಸಚಿನ್ ಶೆಟ್ಟಿ, ಶ್ರೇಯ ಗೋಲ್ಡ್ ಅಂಡ್ ಡೈಮಂಡ್ ಮಾಲಕರಾದ ವಿಶುಕುಮಾರ್, ಎರ್ಮಾಳ್ ತೆಂಕ ಎಜುಕೇಶನ್ ಸೊಸೈಟಿ ಮುಂಬೈ ಸಮಿತಿ ಅಧ್ಯಕ್ಷ ಸುರೇಶ್ ಎಸ್ ಕುಂದರ್, ಕಾರ್ಯದರ್ಶಿ ಬಾಲಕೃಷ್ಣ ಸುವರ್ಣ, ಎರ್ಮಾಳ್ ತೆಂಕ ಎಜುಕೇಶನ್ ಸೊಸೈಟಿ ಎರ್ಮಾಳ್ ತೆಂಕ ಇದರ ಅಧ್ಯಕ್ಷ ಕಿಶೋರ್ ಕುಮಾರ್, ಮೊಗವೀರ ಸಭಾದ ಅಧ್ಯಕ್ಷರಾದ ಶ್ರೀ ಲಿಂಗಪ್ಪ ಪುತ್ರನ್, ಮೊಗವೀರ ಸಭಾ ಮುಂಬೈ ಇದರ ಉಪಾಧ್ಯಕ್ಷ ರವಿ ಪುತ್ರನ್, ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ನಳಿನಿ ಬಂಗೇರ, ಪ್ರಭಾಕರ್ ಪುತ್ರನ್, ದಾಮೋದರ ಸುವರ್ಣ, ಶ್ರೀಮತಿ ಕಸ್ತೂರಿ ಸುವರ್ಣ, ಶಿಕ್ಷಕ ರಕ್ಷಕ ಸಂಘದ ಪ್ರತಿನಿಧಿ ಮೊಹಮ್ಮದ್ ಸಲೀಂ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರೀತಿ ಸುವರ್ಣ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿಯರಾದ ಅಪ್ರಾ ಮತ್ತು ಸುಮಿತ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ರಾಜೇಶ್ ಸ್ವಾಗತಿಸಿದರು. ಸುಶಾಂಕ ವಂದಿಸಿದರು.

