• Home  
  • ಶೀರೂರು ಪರ್ಯಾಯ 2026 ; ಉಡುಪಿ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ (Shiroor Paryaya 2026; Inauguration of Udupi City Electric Lighting)
- fastival - ಧಾರ್ಮಿಕ

ಶೀರೂರು ಪರ್ಯಾಯ 2026 ; ಉಡುಪಿ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ (Shiroor Paryaya 2026; Inauguration of Udupi City Electric Lighting)

Share: ಶೀರೂರು ಪರ್ಯಾಯ 2026; ಉಡುಪಿ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ‌ (Udupi) ಉಡುಪಿ: ಜನವರಿ18 ರಂದು ಸರ್ವಜ್ಞ ಪೀಠಾರೋಹಣ ಗೈಯಲಿರುವ ಶ್ರೀ ವೇದವರ್ಧನ ಶ್ರೀಪಾದರ ಶೀರೂರು ಪರ್ಯಾಯದ ಪ್ರಯುಕ್ತ ವಿದ್ಯುತ್ ದೀಪಾಲಂಕಾರದ ಉದ್ಘಾಟನೆಯನ್ನು  ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ‌ ನೆರವೇರಿಸಿದರು.    ಬಳಿಕ‌ ಮಾತನಾಡಿದ ಅವರು, ಮೊದಲ‌ ಬಾರಿಗೆ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಸಿಂಗಾರಗೊಂಡ‌ ನಗರಗಳು, ಪರ್ಯಾಯದ ಸಿದ್ಧತೆಗಳು ಅತ್ಯಂತ ವ್ಯವಸ್ಥಿತವಾಗಿ‌ ನಡೆಯುತ್ತಿರುವುದು ಸಂತೋಷವಾಗಿದೆ ಎಂದರು.   […]

(Udupi) ಉಡುಪಿ: ಜನವರಿ18 ರಂದು ಸರ್ವಜ್ಞ ಪೀಠಾರೋಹಣ ಗೈಯಲಿರುವ ಶ್ರೀ ವೇದವರ್ಧನ ಶ್ರೀಪಾದರ ಶೀರೂರು ಪರ್ಯಾಯದ ಪ್ರಯುಕ್ತ ವಿದ್ಯುತ್ ದೀಪಾಲಂಕಾರದ ಉದ್ಘಾಟನೆಯನ್ನು  ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ‌ ನೆರವೇರಿಸಿದರು.

   ಬಳಿಕ‌ ಮಾತನಾಡಿದ ಅವರು, ಮೊದಲ‌ ಬಾರಿಗೆ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಸಿಂಗಾರಗೊಂಡ‌ ನಗರಗಳು, ಪರ್ಯಾಯದ ಸಿದ್ಧತೆಗಳು ಅತ್ಯಂತ ವ್ಯವಸ್ಥಿತವಾಗಿ‌ ನಡೆಯುತ್ತಿರುವುದು ಸಂತೋಷವಾಗಿದೆ ಎಂದರು.

   ನಗರದ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ನ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ ಪರ್ಯಾಯ ಕಾರ್ಯಕ್ರಮಕ್ಕೆ‌ ಹೆಚ್ವಿನ ಮೆರುಗು ನೀಡಲು ಈ ಬಾರಿ ವಿಶೇಷ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ ಎಂದರು.

  ವಿದ್ಯುದ್ದೀಪಾಲಂಕಾರ ವ್ಯವಸ್ಥೆ ಮಾಡಿದ ಕೃಷ್ಣ ಕುಲಾಲ್ ಅವರನ್ನು ಶಾಸಕರು ಅಭಿನಂದಿಸಿದರು.

    ಶೀರೂರು ಪರ್ಯಾಯಕ್ಕೆ‌ ಉಡುಪಿ ನಗರ  ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇದರ‌ ಮೆರುಗು ಹೆಚ್ಚಿಸಲು ಈ ಬಾರಿ ಉಡುಪಿ‌ ನಗರಸಭೆ ಅನುದಾನದೊಂದಿಗೆ 50ಲಕ್ಷ ರೂಪಾಯಿ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

    ಕೆನರಾ ಬ್ಯಾಂಕ್ ನ ಜಿ ಎಂ ಗಂಗಾಧರ್, ನಗರ ಸಭೆಯ ಆಯುಕ್ತ ಮಹಾಂತೇಶ್, ನಗರ ಸಭೆಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ರಜನಿ ಹೆಬ್ಬಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ್ ಹೆಗ್ಡೆ, ಮಹಿಳಾ‌ ಘಟಕದ ಪದ್ಮಲತಾ, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಪ್ರಚಾರ ಸಮಿತಿ‌ ಸಂಚಾಲಕ ನಂದನ್ ಜೈನ್, ವಿಷ್ಣು ಮೂರ್ತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.