ಪಡುಬಿದ್ರಿ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಸೊತ್ತುಕಳವು
ರೂ. 48 ಲಕ್ಷ ಮೌಲ್ಯದ 70 ಪವನ್ ಚಿನ್ನ, ಭಾರೀ ಮೌಲ್ಯದ ವಾಚ್ ಕಳವು
(Padubidri) ಪಡುಬಿದ್ರಿ : ಪಡುಬಿದ್ರಿಯ ದೀನ್ ಸ್ಟ್ರೀಟ್ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ರೂ.48 ಲಕ್ಷ ಮೌಲ್ಯದ ಚಿನ್ನಾಭರಣ, ಮತ್ತು 50 ಸಾವಿರ ಮೌಲ್ಯದ ವಾಚನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಘಟಿಸಿದೆ.
ಪಡುಬಿದ್ರಿಯ ದೀನ್ ಸ್ಟ್ರೀಟ್ ನಲ್ಲಿರುವ ಅಪ್ತಾಬ್ ಮಂಜಿಲ್ ಹೆಸರಿನ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಬಾಗಿಲಿನ ಬೀಗ ಮುರಿದು ಒಳಗೆ ಹೊಕ್ಕ ಕಳ್ಳರು, ಕಬ್ಬಿಣದ ಕಪಾಟಿನಲ್ಲಿದ್ದ 3.5 ಪವನ್ ಚಿನ್ನದ 6 ನೆಕ್ಲೆಸ್, 15 ಪವನ್ ತೂಕದ 7 ಬಂಗಾರದ ಬಳೆ, 3 ಪವನ್ ತೂಕ್ 3 ಬ್ರಾಸ್ಲೆಟ್, 4 ಪವನ್ ತೂಕದ 15 ಚಿನ್ನದ ಉಂಗುರ ಒಟ್ಟು 70 ಪವನ್ ಚಿನ್ನ ಹಾಗೂ ರೂ.50 ಸಾವಿರ ಮೌಲ್ಯದ ರೇಡೋ ವಾಚ್ ಕಳವಾದ ಬಗ್ಗೆ ಮಾಹಿತಿ ಲಭಿಸಿದೆ.
ಈ ಬಗ್ಗೆ ಜುವೀನಾ ಅರಾ ಖದೂಸ್ ರವರು ಪಡುಬಿದ್ರಿ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಆಗಮಿಸಿದ್ದು, ತನಿಖೆ ಮುಂದುವರಿದಿದೆ.

