• Home  
  •  ಪೆರ್ನಾಜೆಯಲ್ಲಿ ಗಜರಾಜನ ದಾಂಧಲೆ, ಬಾಳೆ, ಅಡಿಕೆ ಗಿಡ ಧ್ವಂಸ (Elephant vandalism in Pernaje, banana and areca nut plants destroyed)
- PROBLEMS

 ಪೆರ್ನಾಜೆಯಲ್ಲಿ ಗಜರಾಜನ ದಾಂಧಲೆ, ಬಾಳೆ, ಅಡಿಕೆ ಗಿಡ ಧ್ವಂಸ (Elephant vandalism in Pernaje, banana and areca nut plants destroyed)

Share:  ಪೆರ್ನಾಜೆಯಲ್ಲಿ ಗಜರಾಜನ ದಾಂಧಲೆ, ಬಾಳೆ, ಅಡಿಕೆ ಗಿಡ ಧ್ವಂಸ ಆನೆಗಳನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರಾ ಪರಿಹಾರ ಆಗಲಿದೆ. (Putfturu) ಪುತ್ತೂರು ಪೆರ್ನಾಜೆ: ಪುತ್ತೂರಿನ ಕುಮಾರ್ ಪೆರ್ನಾಜೆ ಯವರ ಮುಂಜಾನೆ 3.30 ಸಮಯ ತೋಟಕ್ಕೆ ಎರಡನೇ ಬಾರಿಗೆ ದಾವಡಿ ಇಟ್ಟ ಆನೆಗಳು 10ಕ್ಕೂ ಮಿಕ್ಕಿ ಬಾಳೆ ಗಿಡ, ಅಡಿಕೆ ಗಿಡಗಳನ್ನು ದ್ವಂಸ ಮಾಡಿದೆ.   ಪೆರ್ನಾಜೆ ಸುತ್ತ ಮುತ್ತ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ ಕೃಷಿ ಭೂಮಿಯನ್ನು ಧ್ವಂಸ ಮಾಡುತ್ತಿವೆ.   ಸೋಲಾರ್ ಬೇಲಿ […]

ಆನೆಗಳನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರಾ ಪರಿಹಾರ ಆಗಲಿದೆ.

(Putfturu) ಪುತ್ತೂರು ಪೆರ್ನಾಜೆ: ಪುತ್ತೂರಿನ ಕುಮಾರ್ ಪೆರ್ನಾಜೆ ಯವರ ಮುಂಜಾನೆ 3.30 ಸಮಯ ತೋಟಕ್ಕೆ ಎರಡನೇ ಬಾರಿಗೆ ದಾವಡಿ ಇಟ್ಟ ಆನೆಗಳು 10ಕ್ಕೂ ಮಿಕ್ಕಿ ಬಾಳೆ ಗಿಡ, ಅಡಿಕೆ ಗಿಡಗಳನ್ನು ದ್ವಂಸ ಮಾಡಿದೆ.

  ಪೆರ್ನಾಜೆ ಸುತ್ತ ಮುತ್ತ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ ಕೃಷಿ ಭೂಮಿಯನ್ನು ಧ್ವಂಸ ಮಾಡುತ್ತಿವೆ.

  ಸೋಲಾರ್ ಬೇಲಿ ಅಳವಡಿಸಿದ್ದರೂ ನಿಷ್ಪ್ರಯೋಜಕವಾಗಿದೆ. ಆನೆಗಳನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರ ಪರಿಹಾರ ಆಗಲಿದೆ. ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಮುಂದೆ ಪ್ರಾಣಾಪಾಯವೂ ಆಗಬಹುದೆನ್ನುತ್ತಾರೆ ಕೃಷಿಕ ಕುಮಾರ್‌ ಪೆರ್ನಾಜೆ.

 ಕಳೆದ ಮೂರು ವರ್ಷಗಳಿಂದ ಹಲವಾರು ಬಾರಿ ಆನೆಗಳು ಕೃಷಿ ಭೂಮಿ ನಾಶಗೊಳಿಸಿದ್ದು, ಈ ತನಕ ಯಾವುದೇ  ಪರಿಹಾರ ಸಿಗಲಿಲ್ಲ. ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈಯವರು ಇದಕ್ಕೆ ಸೂಕ್ತ ಸ್ಪಂದನೆ ನೀಡಬೇಕಾಗಿದೆ ಎಂದು ಕೃಷಿಕರು ಒತ್ತಾಯಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.