ಆರ್. ಅಶೋಕ್ ರವರ ಧರ್ಮಪತ್ನಿ ಮೀನಾಕ್ಷಿ ಅಶೋಕ್ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಭೇಟಿ
ಶ್ರೀ ದೇವಳದ ವತಿಯಿಂದ ವಿಷೇಶ ಪ್ರಾರ್ಥನೆ, ಅಭಿನಂದನೆ
(Uchila) ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರವರ ಧರ್ಮಪತ್ನಿ ಮೀನಾಕ್ಷಿ ಅಶೋಕ್ ರವರು ಶನಿವಾರ ಸಂಜೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ದೇವಳದ ಪ್ರಧಾನ ಅರ್ಚಕ ವೇದ ಮೂರ್ತಿ ರಾಘವೇಂದ್ರ ಉಪಾಧ್ಯಾಯರವರು ಮಹಾಲಕ್ಷ್ಮಿಗೆ ವಿಷೇಶ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು.
ಶ್ರೀ ಕ್ಷೇತ್ರದ ವತಿಯಿಂದ ಶ್ರೀಮತಿ ಮೀನಾಕ್ಷಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ದಿನೇಶ್ ಎರ್ಮಾಳು, ಮೊಗವೀರ ಮಹಾಜನ ಮಹಿಳಾ ಸಭಾ ಅಧ್ಯಕ್ಷೆ ಕವಿತಾ ಶರತ್, ಪೂರ್ಣಿಮಾ ಚಂದ್ರಶೇಖರ್, ಆರತಿ ಮನೋಜ್, ಭಾರತಿ ಕೇಶವ್ ಉಪಸ್ಥಿತರಿದ್ದರು.

