ಪಡುಪಣಂಬೂರು : ಬಸ್ ಡಿಕ್ಕಿ -ಅಪ್ರಾಪ್ತ ಬಾಲಕ ಸಾವು
ಬಿಹಾರ ಮೂಲಕ ರವಿಕುಮಾರ್ (16) ಮೃತ ಬಾಲಕ
(Mulki) ಮುಲ್ಕಿ: ರಸ್ತೆ ದಾಟುತ್ತಿದ್ದ ಬಾಲಕನಿಗೆ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಗ್ರಾನೈಟ್ ಅಂಗಡಿ ಎದುರು ಸೋಮವಾರ ರಾತ್ರಿ ಘಟಿಸಿದೆ.
ಮೃತ ಬಾಲಕನನ್ನು ಬಿಹಾರ ಮೂಲಕ ರವಿಕುಮಾರ್ (16) ಎಂದು ಗುರುತಿಸಲಾಗಿದೆ.
ಮೃತ ರವಿಕುಮಾರ್ ತಂದೆ ಗ್ರಾನೈಟ್ ಅಂಗಡಿಯಲ್ಲಿ ಕಾವಲುಗಾರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೋಮವಾರ ರಾತ್ರಿ 10:15ಕ್ಕೆ ಈತ ಅಂಗಡಿಗೆ ಹೋಗಿ ವಾಪಸ್ ಮನೆ ಕಡೆ ಹೋಗಲು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಬೈಂದೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ರವಿಕುಮಾರ್ ಸ್ಥಳದಲ್ಲಿಯೇ ಅಸು ನೀಗಿದ್ದಾನೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಬಸ್ ಚಾಲಕ ನಾಗರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

