• Home  
  • ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ  ನೂತನ ವಿದ್ಯಾರ್ಥಿ – ಶಿಕ್ಷಕರಿಗೆ ಸ್ವಾಗತ (Dr. TMA Pai College of Education welcomes new students and teachers)
- ಶಾಲಾ ಕಾಲೇಜು

ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ  ನೂತನ ವಿದ್ಯಾರ್ಥಿ – ಶಿಕ್ಷಕರಿಗೆ ಸ್ವಾಗತ (Dr. TMA Pai College of Education welcomes new students and teachers)

Share: ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ  ನೂತನ ವಿದ್ಯಾರ್ಥಿ – ಶಿಕ್ಷಕರಿಗೆ ಸ್ವಾಗತ  ಕಾಲೇಜು ನಡೆದು ಬಂದ ಹಾದಿ ಬಗ್ಗೆ ವಿವರಿಸಿದ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ     (Udupi) ಉಡುಪಿ : ಉಡುಪಿಯ ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ 2025-27 ಸಾಲಿನ ವಿದ್ಯಾರ್ಥಿ- ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮ ನೆರವೇರಿತು.     ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ   ಸ್ವಾಗತಿಸಿ ಸಂಸ್ಥೆ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು.    ಕಾಲೇಜಿನ ಸ್ಥಾಪಕರಾದ ಡಾ. ಟಿಎಂಎ […]

  (Udupi) ಉಡುಪಿ : ಉಡುಪಿಯ ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ 2025-27 ಸಾಲಿನ ವಿದ್ಯಾರ್ಥಿ- ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮ ನೆರವೇರಿತು.

    ಕಾಲೇಜಿನ ಸಮನ್ವಯಾಧಿಕಾರಿ ಡಾ. ಮಹಾಬಲೇಶ್ವರ   ಸ್ವಾಗತಿಸಿ ಸಂಸ್ಥೆ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು.

   ಕಾಲೇಜಿನ ಸ್ಥಾಪಕರಾದ ಡಾ. ಟಿಎಂಎ ಪೈ ಅವರ ಸಾಧನೆಯನ್ನು ಪರಿಚಯಿಸುವ ವಿಡಿಯೊ ಪ್ರದರ್ಶಿಸಲಾಯಿತು.

   ಕಾಲೇಜಿನ ಪರಿಸರ, ವಿವಿಧ ಅಧ್ಯಯನ ವಿಷಯಗಳು, ಪ್ರಾಯೋಗಿಕ ಚಟುವಟಿಕೆಗಳು, ಮೌಲ್ಯಮಾಪನ ಕ್ರಮ, ಸಹಪಠ್ಯ ಚಟುವಟಿಕೆಗಳು ಮತ್ತು ಎರಡು ವರ್ಷಗಳ ವ್ಯಾಸಂಗಾವಧಿಯಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ   ಶ್ರೀಮತಿ ಧನಲಕ್ಷ್ಮಿ, ಉಷಾ. ಎಚ್, ಮಮತಾ ಸಾಮಂತ್, ಸೀತಮ್ಮ ಮತ್ತು ಕಲ್ಪನಾ ಶಯನ ಮಾಹಿತಿ ನೀಡಿದರು.

    ಗ್ರಂಥಪಾಲಕರಾದ ವಿಜಯಕುಮಾರ್ ಗ್ರಂಥಾಲಯದ ಬಗ್ಗೆ ಮಾಹಿತಿ ಒದಗಿಸಿದರು.

   ವಿದ್ಯಾರ್ಥಿ ಶಿಕ್ಷಕರು ಗ್ರಂಥಾಲಯಕ್ಕೆ ಭೇಟಿ ನೀಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯ ಕಂಡಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.