• Home  
  • ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಇನ್ನು 48 ದಿನಗಳು ಮಾತ್ರಾ (Only 48 days left for the Padubidri Temple Brahma Kalashotsava.)
- ಧಾರ್ಮಿಕ

ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಇನ್ನು 48 ದಿನಗಳು ಮಾತ್ರಾ (Only 48 days left for the Padubidri Temple Brahma Kalashotsava.)

Share: ಪಡುಬಿದ್ರಿ ದೇಗುಲ ಬ್ರಹ್ಮಕಲಶೋತ್ಸವಕ್ಕೆ ಇನ್ನು 48 ದಿನಗಳು ಮಾತ್ರಾ ತುಳುನಾಡಿನ ಪ್ರಸಿದ್ದ ದೇಗುಲಗಳಲ್ಲಿ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವೂ ಒಂದು ಚಿತ್ರಕೃಪೆ : ರವಿ ಡಿಜಿಟಲ್ಸ್, ಪಡುಬಿದ್ರಿ (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅದ್ದೂರಿಯ ಬ್ರಹ್ಮಕಲಶೋತ್ಸವಕ್ಕೆ ಇನ್ನು ಕೇವಲಾ 48 ದಿನಗಳ ಒಂದು ಮಂಡಲ ಬಾಕಿ ಇದ್ದು, ಎಪ್ರಿಲ್‌ 23 ರಿಂದ ಬ್ರಹ್ಮಕಲಶೋತ್ಸವದ ಪ್ರಕ್ರಿಯೆಗೆ ಚಾಲನೆ ದೊರಕಲಿದೆ. ಪುರಾಣ ಪ್ರಸಿದ್ಧ ತುಳುನಾಡಿನ ಪ್ರಸಿದ್ದ ದೇವಸ್ಥಾನಗಳಲ್ಲಿ ಪಡುಬಿದ್ರಿಯ […]

(Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಅದ್ದೂರಿಯ ಬ್ರಹ್ಮಕಲಶೋತ್ಸವಕ್ಕೆ ಇನ್ನು ಕೇವಲಾ 48 ದಿನಗಳ ಒಂದು ಮಂಡಲ ಬಾಕಿ ಇದ್ದು, ಎಪ್ರಿಲ್‌ 23 ರಿಂದ ಬ್ರಹ್ಮಕಲಶೋತ್ಸವದ ಪ್ರಕ್ರಿಯೆಗೆ ಚಾಲನೆ ದೊರಕಲಿದೆ.

ಪುರಾಣ ಪ್ರಸಿದ್ಧ ತುಳುನಾಡಿನ ಪ್ರಸಿದ್ದ ದೇವಸ್ಥಾನಗಳಲ್ಲಿ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವೂ ಒಂದಾಗಿದೆ. ಇತಿಹಾಸಕಾರರು ಭ್ರಗು ಪ್ರತಿಷ್ಠಿತವೆಂದು ಹೇಳುವ ಮಹಾರುದ್ರ ಸನ್ನಿಧಾನ ಮತ್ತುಉಪಸ್ಥಾನಾಧಿಪತಿಯಾಗಿ ಮೆರೆಯುತ್ತಾ, ಭಕ್ತರ ಮನದಭೀಷ್ಟಗಳನ್ನು ನೆರವೇರಿಸುವ ಮಹಾಗಣಪತಿ ಸನ್ನಿಧಾನವು ಪ್ರಸಿದ್ಧವಾಗಿವೆ.

  ಇಲ್ಲಿನ ಕಟ್ಟದಪ್ಪ ಸೇವೆ, ಪೊಟ್ಟಪ್ಪ ಸೇವೆ ಸಹಿತವಾಗಿ ಗಣಪನಿಗೆ ಅವಿರತ ಹರಿದು ಬರುವ ಪಂಚಕಜ್ಜಾಯ ಸೇವೆಗಳು ಇಲ್ಲಿನ ಬಹುಜನಪ್ರಿಯ ಸೇವೆಗಳಾಗಿವೆ.

  ಹಿಂದೂ ಧಾರ್ಮಿಕದತ್ತಿ ಇಲಾಖೆಯ ಅಧೀನಕ್ಕೊಳಪಟ್ಟ ಈ ಪುರಾತನ ಸನ್ನಿಧಾನವನ್ನು ಪುನರ್‌ ನಿರ್ಮಿಸುವ ಬಯಕೆಯೊಂದಿಗೆ ಬೆಂಗಳೂರಿನ ಎಂಆರ್‌ಜಿ ಗ್ರೂಪ್ ಉದ್ಯಮ ಸಂಸ್ಥೆಯ ಸಂಸ್ಥಾಪಕ ಡಾ. ಕೆ. ಪ್ರಕಾಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಎಲ್ಲಾ ಸಮುದಾಯಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ಜೀರ್ಣೋದ್ದಾರ ಸಮಿತಿಯು ರಚನೆಯಾಗಿದೆ. ಇದಕ್ಕೆ ಶ್ರೀ ದೇಗುಲದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ ಮತ್ತು ಪಡುಬಿದ್ರಿ ಕೊರ್ನಾಯ ಮನೆ ಶ್ರೀಪತಿ ಕೊರ್ನಾಯ ಅವರೂ ಸಹಕರಿಸುತ್ತಿದ್ದಾರೆ.

   ಕಳೆದ ಎಪ್ರಿಲ್ ತಿಂಗಳಲ್ಲಿ ದೇವರ ಸಾನಿಧ್ಯ  ಸಂಕೋಚಗೊಂಡು, ಕರಸೇವೆಯೂ ನಡೆದಿತ್ತು. ಮುಂದೆ ಶ್ರೀ ದೇಗುಲವನ್ನು ಸಾರ್ವಜನಿಕರ, ಭಕ್ತಾದಿಗಳ ಸಹಕಾರದೊಂದಿಗೆ ಪುನರ್‌ ನಿರ್ಮಿಸಲು ಶಿಲಾನ್ಯಾಸ, ನಿಧಿ ಕುಂಭ ಸ್ಥಾಪನೆ ಮುಂತಾದ ಧಾರ್ಮಿಕ ಪ್ರಕ್ರಿಯೆಗಳು ನಡೆದಿದೆ.

   ಕುಡುಪು ಕೃಷ್ಣರಾಜ ತಂತ್ರಿ ವಾಸ್ತುತಜ್ಞರಾಗಿ, ಕಾರ್ಕಳದ ಸುಜಯ ಶೆಟ್ಟಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದು, ನಂದಳಿಕೆ ಚಾವಡಿ ಮನೆ ಸುಹಾಸ್ ಹೆಗ್ಡೆ ಹಾಗೂ ಎಲ್ಲೂರು ವಿಷ್ಣುಮೂರ್ತಿ ಭಟ್‌ ನಿರ್ಮಾಣ ಕೆಲಸ ಕಾರ್ಯಗಳಲ್ಲಿ ಸಹಕರಿಸುತ್ತಿದ್ದಾರೆ.

  ಕಲ್ಲ ಮುಂಡ್ಯೂರು ನಾರಾಯಣ ಆಚಾರ್ಯ, ಹರೀಶ್ ಆಚಾರ್ಯ ಅವರ ತಂಡವು ದಾರುಶಿಲ್ಪ ಸಂಯೋಜನೆಯಲ್ಲಿ ಕೈಜೋಡಿಸಿದೆ. ಕನಿಷ್ಠತಮ ಸಮಯದೊಳಗಾಗಿ ಅಭೂತಪೂರ್ವ ವಿನ್ಯಾಸಗಳೊಂದಿಗೆ ದೇಗುಲದ ನವೀಕರಣ ಕಾರ್ಯಗಳು ಸಮರೋಪಾದಿಯಲ್ಲಿ ಮುನ್ನಡೆದು ಭಕ್ತ ಜನರ ಕಣ್ಮನ ಸೆಳೆಯುತ್ತಿದೆ.

   ಮಹಾಲಿಂಗೇಶ್ವರ ಸನ್ನಿಧಾನವನ್ನು ಇದ್ದಲ್ಲೇ ಉಳಿಸಿಕೊಂಡು ಬಲು ನವ್ಯವಾಗಿ ಕಟ್ಟಲಾಗಿರುವ ರುದ್ರದೇವರ ಗರ್ಭಗುಡಿ, ತೀರ್ಥಮಂಟಪ, ಶಿಲಾಮಯ ಮಹಾಗಣಪತಿ ಸನ್ನಿಧಾನ, ದೇವರ ಎದುರಿನ ನಮಸ್ಕಾರ ಮಂಟಪ, ಪೂರ್ವ ಗೋಪುರ, ಸ್ವಾಗತಗೋಪುರಗಳ ಕೆಲಸಕಾರ್ಯಗಳು ವೇಗ ಪಡೆದಿವೆ. ಸುತ್ತುಪೌಳಿ ವಿನ್ಯಾಸಗಳು ಈಗಾಗಲೇ ಬಲು ಸೊಗಸಾಗಿ ನಿರ್ಮಾಣಗೊಂಡಿವೆ. ಮುಂದೆ ಯಾಗಶಾಲೆ, ನಾಗ ಸನ್ನಿಧಿ, ದೈವ ಸಾನ್ನಿಧ್ಯಗಳ ಸಂಕೋಚ ಮತ್ತು ಶ್ರೀ ದೇಗುಲದ ಪುಷ್ಕರಣಿ ತಟದಲ್ಲಿ ಅವುಗಳ ‌ ಪುನಃ ನಿರ್ಮಾಣ ಆಗುತ್ತಿದೆ. ಅನ್ನಛತ್ರ, ಪಾಕಶಾಲೆ, ವಸಂತ ಮಂಟಪಗಳ ಕಾಮಗಾರಿಗಳ ಭರದಿಂದ ಸಾಗುತ್ತಿದೆ.

  ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷಡಾ। ಕೆ. ಪ್ರಕಾಶ್ ಶೆಟ್ಟಿ ಅವರು ದೇಗುಲ ಪುನಃ ನಿರ್ಮಾಣ ಕಾರ್ಯದ ನೇತೃತ್ವವಹಿಸಿದ್ದಾರೆ. ಕ್ಷೇತ್ರದ ತಂತ್ರಿಗಳಾದ ಕಂಬ್ಳೆಕಟ್ಟ ವೇದಮೂರ್ತಿ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರ ಮುಂದಾಳತ್ವದಲ್ಲಿ ಮುಂದಿನ ಎಪ್ರಿಲ್ ತಿಂಗಳಲ್ಲಿ  ಜೀರ್ಣೋದ್ಧಾರ, ಪುನಃ ಪ್ರತಿಷ್ಠೆ ಕಾರ್ಯ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.