• Home  
  • ಜಪಾನಿನ ಓಹ್ಮೋಟೋ ಗುಮಿ ಸಂಸ್ಥೆಯ ಪ್ರತಿನಿಧಿ ಮಂಡಳಿ ಮಂಗಳೂರು ಶಾರದಾ ಕಛೇರಿಗೆ ಭೇಟಿ (A representative board of the Japanese Ohmoto Gumi organization visited the Mangalore Sarada office.)
- ವ್ಯವಹಾರ

ಜಪಾನಿನ ಓಹ್ಮೋಟೋ ಗುಮಿ ಸಂಸ್ಥೆಯ ಪ್ರತಿನಿಧಿ ಮಂಡಳಿ ಮಂಗಳೂರು ಶಾರದಾ ಕಛೇರಿಗೆ ಭೇಟಿ (A representative board of the Japanese Ohmoto Gumi organization visited the Mangalore Sarada office.)

Share: ಜಪಾನಿನ ಓಹ್ಮೋಟೋ ಗುಮಿ ಸಂಸ್ಥೆಯ ಪ್ರತಿನಿಧಿ ಮಂಡಳಿ ಮಂಗಳೂರು ಶಾರದಾ ಕಛೇರಿಗೆ ಭೇಟಿ ಪರಸ್ಪರ ವೃತ್ತಿಪರ ಸಂಬಂಧ ಬಲಪಡಿಸಲು ಮುಲ್ಕಿ ಜೀವನ್ ಕೆ. ಶೆಟ್ಟಿಯವರಿಗೆ ಜಪಾನಿಗೆ ಆಹ್ವಾನ   (Mulki) ಮುಲ್ಕಿ: ಜಪಾನ್‌ ದೇಶದ  ಓಹ್ಮೋಟೋ ಗುಮಿ ಕಂಪನಿಯ  ಅಧ್ಯಕ್ಷ ಮತ್ತು ಪ್ರತಿನಿಧಿ ನಿರ್ದೇಶಕರಾದ ಕೀಚಿ ಮುಯಾಕೆ ಅವರ ನೇತೃತ್ವದ ಪ್ರತಿನಿಧಿ ಮಂಡಳಿ ಗುರುವಾರ ಮಂಗಳೂರಿನ ಕೊಡಿಯಲ್‌ಬೈಲ್‌ನ ರಾಮಭವನ ಕಾಂಪ್ಲೆಕ್ಸ್‌ನಲ್ಲಿ ಇರುವ ಮುಲ್ಕಿ ಜೀವನ್ ಕೆ. ಶೆಟ್ಟಿಯವರ ಶಾರದಾ ಕಚೇರಿಗೆ ಭೇಟಿ ನೀಡಿದರು.    ಕೀಚಿ […]

ಪರಸ್ಪರ ವೃತ್ತಿಪರ ಸಂಬಂಧ ಬಲಪಡಿಸಲು ಮುಲ್ಕಿ ಜೀವನ್ ಕೆ. ಶೆಟ್ಟಿಯವರಿಗೆ ಜಪಾನಿಗೆ ಆಹ್ವಾನ

  (Mulki) ಮುಲ್ಕಿ: ಜಪಾನ್‌ ದೇಶದ  ಓಹ್ಮೋಟೋ ಗುಮಿ ಕಂಪನಿಯ  ಅಧ್ಯಕ್ಷ ಮತ್ತು ಪ್ರತಿನಿಧಿ ನಿರ್ದೇಶಕರಾದ ಕೀಚಿ ಮುಯಾಕೆ ಅವರ ನೇತೃತ್ವದ ಪ್ರತಿನಿಧಿ ಮಂಡಳಿ ಗುರುವಾರ ಮಂಗಳೂರಿನ ಕೊಡಿಯಲ್‌ಬೈಲ್‌ನ ರಾಮಭವನ ಕಾಂಪ್ಲೆಕ್ಸ್‌ನಲ್ಲಿ ಇರುವ ಮುಲ್ಕಿ ಜೀವನ್ ಕೆ. ಶೆಟ್ಟಿಯವರ ಶಾರದಾ ಕಚೇರಿಗೆ ಭೇಟಿ ನೀಡಿದರು.

   ಕೀಚಿ ಮುಯಾಕೆ ಅವರ ತಂಡ ಮುಲ್ಕಿ ಜೀವನ್ ಕೆ. ಶೆಟ್ಟಿ ಅವರನ್ನು ಭೇಟಿ ಮಾಡಿ, ಮಂಗಳೂರಿನ ನಿರ್ಮಾಣ ಚಟುವಟಿಕೆಗಳು, ಭಾರತ–ಜಪಾನ್ ನಡುವಿನ ತಾಂತ್ರಿಕ ಸಹಕಾರದ ಅವಕಾಶಗಳು ಹಾಗೂ ವಿದೇಶಿ ವ್ಯಾಪಾರದ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಜೊತೆಗೆ ಜಪಾನಿನಲ್ಲಿ ಭಾರತೀಯ ಸಿವಿಲ್ ಎಂಜಿನಿಯರ್‌ಗಳಿಗೆ ಇರುವ ಉದ್ಯೋಗಾವಕಾಶಗಳ ಕುರಿತೂ ಮಾತುಕತೆ ನಡೆಯಿತು.

   ಈ ಸಂದರ್ಭದಲ್ಲಿ ಜಪಾನ್ ಪ್ರತಿನಿಧಿ ಮಂಡಳಿ ಮುಲ್ಕಿ ಜೀವನ್ ಕೆ. ಶೆಟ್ಟಿಯವರನ್ನು ಜಪಾನ್‌ಗೆ ಆಹ್ವಾನಿಸಿ, ನಿರ್ಮಾಣ ಕ್ಷೇತ್ರದಲ್ಲಿ ಸಹಕಾರದ ಅವಕಾಶಗಳನ್ನು ಇನ್ನಷ್ಟು ಅನ್ವೇಷಿಸಲು ಹಾಗೂ ಪರಸ್ಪರ ವೃತ್ತಿಪರ ಸಂಬಂಧಗಳನ್ನು ಬಲಪಡಿಸಲು ಹೇಳಿದ್ದಾರೆ.

  ಈ ಭೇಟಿಯು ನಿರ್ಮಾಣ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಕಾರ, ಜ್ಞಾನ ವಿನಿಮಯ ಮತ್ತು ವೃತ್ತಿಪರ ಅವಕಾಶಗಳನ್ನು ವಿಸ್ತರಿಸುವತ್ತ ಮಹತ್ವದ ಹೆಜ್ಜೆಯಾಗಿದೆ.

    ಈ ಸಂದರ್ಭ ಪ್ರೊ. ಹರಿಕೃಷ್ಣ ಭಟ್, ಕೊಜಿ ಸಾಕಿಕವಾ,  ಜುನಿಚಿ ಮತ್ಸುವೆ, ಟಕೆಹಿತೋ ನಂದಾ, ಶ್ರೀಮತಿ ಯಸುಕೋ ಸಾಟೋ, ಪ್ರೊ. ರಾಘವೇಂದ್ರ ಪೈ, ಮಹೇಶ್ ಕಾಮತ್, ಗಣೇಶ್ ಉಡುಪ, ಕಾರ್ತಿಕ್ ಶೆಟ್ಟಿ ಹಾಗೂ  ಕಿಶನ್ ಭಟ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.