ಪಡುಬೆಳ್ಳೆ : ವೇದಿಕೆ ನಿರ್ಮಾಣ ಮತ್ತು ರುದ್ರಭೂಮಿ ನಿರ್ಮಾಣಕ್ಕೆ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯ ಹಸ್ತ
ಮಂಜೂರಾತಿ ಪತ್ರ ಹಸ್ತಾಂತರಿಸಿದ ಶ್ರೀಮತಿ ಮಮತಾ ಶೆಟ್ಟಿ, ನವೀನ್ ಅಮೀನ್ ಶಂಕರಪುರ
(Padubelle) ಪಡುಬೆಳ್ಳೆ : ಕಾಪು ತಾಲೂಕಿನ ಪಡುಬೆಳ್ಳೆ ಗೆಳೆಯರ ಬಳಗದ ವೇದಿಕೆ ನಿರ್ಮಾಣ ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಐವತ್ತು ಸಾವಿರ ಮಂಜೂರಾಗಿದ್ದು, ರುದ್ರಭೂಮಿಗೆ 2 ಲಕ್ಷ 50 ಸಾವಿರ ರೂ. ಮಂಜೂರಾಗಿದೆ.
ಒಟ್ಟು 3,ಲಕ್ಷ ದ ಮಂಜೂರಾತಿ ಪತ್ರ ವನ್ನು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಹಾಗೂ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ ರವರು ಗೆಳೆಯರ ಬಳಗಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭ ಹರೀಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಮೇಲ್ವಿಚಾರಕಿ ಗೀತಾ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಸದಸ್ಯರು, ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

