• Home  
  • ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯಿಂದ ವಿಶ್ವ ಮಹಿಳಾ ದಿನಾಚರಣೆ (International Women’s Day celebrated by Yermal Srinidhi Women’s Council)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯಿಂದ ವಿಶ್ವ ಮಹಿಳಾ ದಿನಾಚರಣೆ (International Women’s Day celebrated by Yermal Srinidhi Women’s Council)

Share: ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯಿಂದ ವಿಶ್ವ ಮಹಿಳಾ ದಿನಾಚರಣೆ  ಮಹಿಳಾ ರಿಕ್ಷಾ ಚಾಲಕಿ ಶಶಿಕಲಾ ನಂಬಿಯಾರ್‌ ಪಡುಬಿದ್ರಿಯವರಿಗೆ ಸನ್ಮಾನ (Padubiri) ಪಡುಬಿದ್ರಿ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ ಆಯೋಜನೆಯಲ್ಲಿ ಮಂಡಳಿಯ ಸಭಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ನೆರವೇರಿತು.    ಕಾರ್ಯಕ್ರಮವನ್ನು ಮಂಗಳವಾರ ಉಡುಪಿ ಜಿ.ಪಂ. ಮಾಜಿ ಉಪಾಧ್ಯಕ್ಷೆ ಎರ್ಮಾಳು ಶೀಲಾ ಕೆ. ಶೆಟ್ಟಿ ಉದ್ಘಾಟಿಸಿದರು.    ಭಾರತೀಯ ಸಂಸ್ಕೃತಿಯ ರೂವಾರಿಯಾಗಿರುವ  ಭಾರತೀಯ ಮಹಿಳೆಯರಿಗೆ ಪ್ರಾಪಂಚಿಕವಾಗಿ ವಿಶೇಷವಾದ ಗೌರವ […]

(Padubiri) ಪಡುಬಿದ್ರಿ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ ಆಯೋಜನೆಯಲ್ಲಿ ಮಂಡಳಿಯ ಸಭಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ನೆರವೇರಿತು.

   ಕಾರ್ಯಕ್ರಮವನ್ನು ಮಂಗಳವಾರ ಉಡುಪಿ ಜಿ.ಪಂ. ಮಾಜಿ ಉಪಾಧ್ಯಕ್ಷೆ ಎರ್ಮಾಳು ಶೀಲಾ ಕೆ. ಶೆಟ್ಟಿ ಉದ್ಘಾಟಿಸಿದರು.

   ಭಾರತೀಯ ಸಂಸ್ಕೃತಿಯ ರೂವಾರಿಯಾಗಿರುವ  ಭಾರತೀಯ ಮಹಿಳೆಯರಿಗೆ ಪ್ರಾಪಂಚಿಕವಾಗಿ ವಿಶೇಷವಾದ ಗೌರವ – ಸ್ಥಾನಮಾನ ಇದೆ. ಆ ನಿಟ್ಟಿನಲ್ಲಿ ಸದ್ಗುಣ ಸಂಪನ್ನಳಾಗಿ ಸ್ಥಾನಮಾನಕ್ಕೆ ತಕ್ಕ ಗೌರವಯುತ ಜೀವನ ನಡೆಸುವ ಮೂಲಕ ಸಮಾಜಕ್ಕೆ ಭೂಷಣಪ್ರಾಯಳಾಗಿ ಸಮಾಜದ ಸ್ವಾಸ್ಥಕ್ಕೆ ಕ್ಕೆ ಮೆಟ್ಟಿಲಾಗಿರಬೇಕು ಎಂದರು. 
 ಮುಖ್ಯ ಅತಿಥಿ ಡಾ. ಚೈತ್ರ ಗುರುಪ್ರಸಾದ್‌ ಶೆಟ್ಟಿ ಮಾತನಾಡಿ, ಶರೀರ-ಭಾವನೆ-ಮನಸ್ಸು  ಇದ್ದಲ್ಲಿ ಮಾತ್ರ ಅದು ನಿಜವಾದ ಆರೋಗ್ಯವಾಗಿದೆ. ಸಾಧನೆಯ ಹಾದಿಯಲ್ಲಿರುವ ಹೆಣ್ಣು ಮಕ್ಕಳು ನೈಜ ನೆಮ್ಮದಿಯ ಜೊತೆಗೆ ಆರೋಗ್ಯದಾಯಕರಾಗಿದ್ದು,ಸಮಾಜದ ಆಗು ಹೋಗುಗಳ ಜೊತೆ ಉತ್ತಮ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವಂತೆ ಕರೆ ನೀಡಿದ್ದು, ಬಂಜೆತನ, ಥೈರಾಯ್ಡ್‌, ಹಾರ್ಮೋನ್ಸ್‌ ಸಹಿತ ಮಹಿಳೆಯರ ಆರೋಗ್ಯದ ವಿಚಾರದಲ್ಲಿ ಮಾಹಿತಿಯನ್ನು ನೀಡಿ ಸಮಾಲೋಚನೆ ನಡೆಸಿದರು.
  ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ರಿಕ್ಷಾ ಚಾಲಕಿ ಶಶಿಕಲಾ ನಂಬಿಯಾರ್‌ ಪಡುಬಿದ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
   ಸದಸ್ಯೆಯರಿಗೆ ಏರ್ಪಡಿಸಲಾದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
  ಸಮಾರಂಭದ ಅಧ್ಯಕ್ಷತೆಯನ್ನು ಎರ್ಮಾಳು ಶ್ರೀನಿಧಿ  ಮಹಿಳಾ ಮಂಡಳಿಯ ಅಧ್ಯಕ್ಷೆ ರೇಖಾ ಶೆಟ್ಟಿ ವಹಿಸಿದ್ದರು.

  ವೇದಿಕೆಯಲ್ಲಿ ಕೋಶಾಧಿಕಾರಿ ವಿಮಲ ಕೆ. ಸಾಲ್ಯಾನ್‌ ಉಪಸ್ಥಿತರಿದ್ದರು.
  ರಶ್ಮಿತಾ ಪ್ರಾರ್ಥಿಸಿದರು. ರೇಖಾ ಶೆಟ್ಟಿ ಉಪಾಧ್ಯಕ್ಷೆ ಸ್ವಾಗತಿಸಿದರು. ವಾಣಿಶ್ರೀ ಗಣೇಶ್‌ ಸನ್ಮಾನ ಪತ್ರ ವಾಚಿಸಿದರು. ಮಾಜಿ ಅಧ್ಯಕ್ಷೆ ಜ್ಯೋತಿ ಶೆಟ್ಟಿಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಅಮಣಿ ಕುಂದರ್‌ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.