• Home  
  • ಪಡುಬಿದ್ರಿ ದೇಗುಲ: ಎ. 23 – ಮೇ 4ರ ವರೆಗೆ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ (Padubidri Temple: April. 23 – May 4 until the re-establishment of Brahmakalashotsava)
- ಧಾರ್ಮಿಕ

ಪಡುಬಿದ್ರಿ ದೇಗುಲ: ಎ. 23 – ಮೇ 4ರ ವರೆಗೆ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ (Padubidri Temple: April. 23 – May 4 until the re-establishment of Brahmakalashotsava)

Share: ಪಡುಬಿದ್ರಿ ದೇಗುಲ: ಎ. 23 – ಮೇ 4ರ ವರೆಗೆ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಬ್ರಹ್ಮಕಲಶೋತ್ಸವದ ಲೋಗೋ ಬಿಡುಗಡೆ (ಚಿತ್ರ ಕೃಪೆ : ರವಿ ಡಿಜಿಟಲ್ಸ್‌ ಪಡುಬಿದ್ರಿ)  (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ಸುಮಾರು 30 ಕೋ. ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ಎ. 23ರಿಂದ ಮೇ 4ರ ವರೆಗೆ ಪುನ‌ರ್ ಪ್ರತಿಷ್ಠೆಹಾಗೂ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ. ಪ್ರಯುಕ್ತ ಪಡುಬಿದ್ರಿ […]

 (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ಸುಮಾರು 30 ಕೋ. ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ಎ. 23ರಿಂದ ಮೇ 4ರ ವರೆಗೆ ಪುನ‌ರ್ ಪ್ರತಿಷ್ಠೆಹಾಗೂ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ. ಪ್ರಯುಕ್ತ ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಜರಗಿದ ಜೀರ್ಣೋ ದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಗಳ ಸಂಯುಕ್ತ ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಲೋಗೋ ಬಿಡುಗಡೆ ಗೊಳಿಸಲಾಯಿತು.

ಈ ಸಂದರ್ಭ ಬ್ರಹ್ಮಕಲಶೋ ತ್ಸವ ಸಮಿತಿಯ ಅಧ್ಯಕ್ಷ ಎಂಆರ್‌ಜಿ ಗ್ರೂಪ್‌ನ ಸಿಎಂಡಿ ಡಾ. ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ಬ್ರಹ್ಮಕಲಶೋತ್ಸವ ಅವಿಸ್ಮರಣೀಯಗೊಳಿಸಲು 20 ಸಮಿತಿ ರಚಿಸಲಾಗಿದೆ. ಮಾ. 30ಕ್ಕೆ ಮತ್ತೆ ಸಮಿತಿಯ ಸಭೆ ನಡೆಸಿ ಕಾರ್ಯಕ್ರಮವನ್ನು ಅಂತಿಮಗೊಳಸಲಾಗುವುದು ಎಂದರು.

ಬ್ರಹ್ಮಕಲಶೋತ್ಸವದ ಲೋಗೋವನ್ನು ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಮತ್ತು ಶಾಸಕ ಹಾಗೂ ಸಮಿತಿಯ ಗೌರವಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಬಿಡುಗಡೆಗೊಳಿಸಿದರು.

ಈ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಅತ್ಯಂತ ಕಡಿಮೆ ಅವಧಿಯಲ್ಲಿ ದೇವಸ್ಥಾನ ಅದ್ಭುತವಾಗಿ ನಿರ್ಮಾ ಣಗೊಂಡಿದೆ. ಜೀರ್ಣೋದ್ಧಾರದ ಪ್ರಕ್ರಿಯೆಯಲ್ಲಿ ಭಾಗವಹಿಸುವುದೇ ನಮ್ಮೆಲ್ಲರ ಸೌಭಾಗ್ಯ ಎಂದರು.

  ಹೊರೆಕಾಣಿಕೆ ಮೆರವಣಿಗೆ ಸಮಿತಿಯ ಸಂಚಾಲಕ, ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಎ. 26ರಂದು ನಡೆಯಲಿರುವ ಹೊರೆಕಾಣಿಕೆ ಮೆರವಣಿಗೆಯ ಬಗ್ಗೆ ಮಾಹಿತಿ ನೀಡಿದರು.

  ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿ ಮುರಳೀನಾಥ ಶೆಟ್ಟಿ ನೂತನ ಸಮಿತಿಯ ವಿವರ ನೀಡಿದರು. ಸಾಂಸ್ಕೃತಿಕ ಸಮಿತಿಯ ನಟರಾಜ್ ಪಿ. ಎಸ್. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರಾಯೋಜಕತ್ವದ ಮಾಹಿತಿ ನೀಡಿದರು.

  ಶ್ರೀ ದೇಗುಲದ ಆನುವಂಶಿಕ ಮೊಕ್ತೇಸರರಾದ ರತ್ನಾಕರರಾಜ್ ಅರಸು ಕಿನ್ಯಕ್ಕ ಬಲ್ಲಾಳ್‌,  ಪಡುಬಿದ್ರಿ ಪೇಟೆಮನೆ ಭವಾನಿಶಂಕರ್ ಹೆಗ್ಡೆ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್, ಕಾರ್ಯನಿರ್ವ ಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಅರ್ಚಕ ಗುರುರಾಜ ಭಟ್,   ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ರವೀಂದ್ರನಾಥ ಜಿ. ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪಿ. ಆರ್. ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್ ಹೆಗ್ಡೆ, ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಪ್ರಶಾಂತ್‌ ಶೆಣೈ ಉಪಸ್ಥಿತರಿದ್ದರು.

  ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ನವೀನ್‌ಚಂದ್ರ ಜೆ. ಶೆಟ್ಟಿ ಸ್ವಾಗತಿಸಿದರು. ಪಿ. ಶ್ರೀಧರ ಆಚಾರ್ ನಿರೂಪಿಸಿದರು. ಕಾರ್ಯದರ್ಶಿ ವೈ. ಸುಕುಮಾರ್‌ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.