• Home  
  • ಕಾಪು ಕೋತ್ವಾಲಗುತ್ತು ಕುಟುಂಬಿಕರ ಚತುಃಪವಿತ್ರ ನಾಗಮಂಡಲೋತ್ಸವ, ನಾಗದರ್ಶನ ಸಂಪನ್ನ(The four sacred Nagamandalotsava of the Kaup Kotwalguttu family, Nagadarshan Sampanna)
- ಧಾರ್ಮಿಕ

ಕಾಪು ಕೋತ್ವಾಲಗುತ್ತು ಕುಟುಂಬಿಕರ ಚತುಃಪವಿತ್ರ ನಾಗಮಂಡಲೋತ್ಸವ, ನಾಗದರ್ಶನ ಸಂಪನ್ನ(The four sacred Nagamandalotsava of the Kaup Kotwalguttu family, Nagadarshan Sampanna)

Share: ಕಾಪು ಕೋತ್ವಾಲಗುತ್ತು ಕುಟುಂಬಿಕರ ಚತುಃಪವಿತ್ರ ನಾಗಮಂಡಲೋತ್ಸವ, ನಾಗದರ್ಶನ ಸಂಪನ್ನ   ಗಣ್ಯರು, ಮೂಲಸ್ಥಾನದ ಆರಾಧಕರು, ಕಾಪು ಸಾವಿರ ಸೀಮೆಯ ಭಕ್ತರ ಉಪಸ್ಥಿತಿ (ಚಿತ್ರ ಕೃಪೆ : ರತನ್‌ ಸುರಭಿ) ಕಾಪು, ಎ. 5: ಕಾಪು ಕೋತ್ವಾಲಗುತ್ತು ಮೂಲ ನಾಗಬ್ರಹ್ಮಸ್ಥಾನದಲ್ಲಿ ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ, ಕೋತ್ವಾಲಗುತ್ತು ಕುಟುಂಬಿಕರು, ಮೂಲಸ್ಥಾನದ ಭಕ್ತಾದಿಗಳಿಂದ ಶನಿವಾರ ಜರಗಿದ ಚತುಃಪವಿತ್ರ ನಾಗಮಂಡಲೋತ್ಸವದಲ್ಲಿ ಬ್ರಹ್ಮಕಲಶಾಭಿಷೇಕ, ನಾಗದರ್ಶನ, ಅನ್ನಸಂತರ್ಪಣೆ ನಡೆಯಿತು.  ಕ್ಷೇತ್ರದ ವೇದಮೂರ್ತಿ ಶ್ರೀಶ ತಂತ್ರಿ, ಕೆ. ಪಿ. ಕುಮಾರಗುರು ತಂತ್ರಿ ಹಾಗೂ ನಾಗಪಾತ್ರಿ ಕಕ್ಕುಂಜೆ […]

ಕಾಪು, ಎ. 5: ಕಾಪು ಕೋತ್ವಾಲಗುತ್ತು ಮೂಲ ನಾಗಬ್ರಹ್ಮಸ್ಥಾನದಲ್ಲಿ ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ, ಕೋತ್ವಾಲಗುತ್ತು ಕುಟುಂಬಿಕರು, ಮೂಲಸ್ಥಾನದ ಭಕ್ತಾದಿಗಳಿಂದ ಶನಿವಾರ ಜರಗಿದ ಚತುಃಪವಿತ್ರ ನಾಗಮಂಡಲೋತ್ಸವದಲ್ಲಿ ಬ್ರಹ್ಮಕಲಶಾಭಿಷೇಕ, ನಾಗದರ್ಶನ, ಅನ್ನಸಂತರ್ಪಣೆ ನಡೆಯಿತು.

 ಕ್ಷೇತ್ರದ ವೇದಮೂರ್ತಿ ಶ್ರೀಶ ತಂತ್ರಿ, ಕೆ. ಪಿ. ಕುಮಾರಗುರು ತಂತ್ರಿ ಹಾಗೂ ನಾಗಪಾತ್ರಿ ಕಕ್ಕುಂಜೆ ವಾಸುದೇವ ಆಚಾರ್ಯ ಅವರ ಧಾರ್ಮಿಕ ಪೌರೋಹಿತ್ಯ ದಲ್ಲಿ ಬೆಳಿಗ್ಗೆ ನಾಗಬನದಲ್ಲಿ ಬ್ರಹ್ಮಕಲಶಾಧಿವಾಸ ಹೋಮ, ನವಕ ಕಲಶಾಭಿಷೇಕ, ಆಶ್ಲೇಷ ಬಲಿ, ಮಧ್ಯಾಹ್ನ ನಾಗ ದರ್ಶನ, ಪಲ್ಲ ಪೂಜೆ, ಅನ್ನಸಂತರ್ಪಣೆ ನಡೆಯಿತು.

 ಸಂಜೆ ಹಾಲಿಟ್ಟು ಸೇವೆ, ರಾತ್ರಿ ಮಂಡಲ ಪೂಜೆ, ಚತುಃಪವಿತ್ರ ನಾಗ ಮಂಡಲ ಸೇವೆ ಹಾಗೂ ಸನ್ನಿಧಾನದ ಮೂಲ ಪ್ರಸಾದ ವಿತರಿಸಲಾಯಿತು.

ನಾಗಪಾತ್ರಿ ಕಕ್ಕುಂಜೆ ವಾಸುದೇವ ಆಚಾರ್ಯರವರ ನಾಗ ನರ್ತನ ಸೇವೆ ಮತ್ತು ಮದ್ದೂರು ಕೃಷ್ಣಪ್ರಸಾದ್‌ ವೈದ್ಯರ ಬಳಗ, ನಾಗ ಕನ್ನಿಕೆಯಾಗಿ ಬಾಲಕೃಷ್ಣ ವೈದ್ಯ ಮತ್ತು ನಟರಾಜ್‌ ವೈದ್ಯ, ನಾಗಯಕ್ಷಿ ಡಮರು ಮೇಳದಿಂದ ನಡೆದ ಚತುಃಪವಿತ್ರ ನಾಗಮಂಡಲೋತ್ಸವದಲ್ಲಿ ಭಕ್ತಾಧಿಗಳು ಭಾವಪರವಶವಾಗಿದ್ದಾರೆ.

  ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ, ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಎಸ್. ಶೆಟ್ಟಿ, ಗಣ್ಯರಾದ ಮುನಿಯಾಲು ಉದಯ್ ಕುಮಾರ್‌ಶೆಟ್ಟಿ, ಮುಂಬಯಿ ಉದ್ಯಮಿ ವಿರಾರ್‌ಶಂಕರ್‌ ಶೆಟ್ಟಿ, ಉದ್ಯಮಿ ಹರಿಯಪ್ಪ ಕೋಟ್ಯಾನ್, ಶ್ರೀಕರ ಶೆಟ್ಟಿ ಕಲ್ಯಾ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ ಸುಕುಮಾರ್, ಮಾಜಿ ಅಧ್ಯಕ್ಷರಾದ ನವೀನ್ ಚಂದ್ರ ಜೆ. ಶೆಟ್ಟಿ ಪಡುಬಿದ್ರಿ, ನವೀನ್ ಚಂದ್ರ ಸುವರ್ಣ, ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ಕೋತ್ವಾಲಗುತ್ತು ಹೆಬ್ಬಾಗಿಲುಮನೆ ಕಾಪು ದಿವಾಕರ್‌ಶೆಟ್ಟಿ, ಉಪಾಧ್ಯಕ್ಷರಾದ ಕೋತ್ವಾಲಗುತ್ತು ಮೇಲ್ಮನೆ ಚಂದ್ರಹಾಸ ಶೆಟ್ಟಿ, ಕೋತ್ಕಾಲಗುತ್ತು ನಡುಪಾಲುಮನೆ ಚಂದ್ರಹಾಸ ಶೆಟ್ಟಿ, ಕೋತ್ಪಾಲಗುತ್ತು ಹಾವಂಜೆಮನೆ ಕರುಣಾಕರ ಶೆಟ್ಟಿ, ಕೊಡವೂರು ಗರಡೆಮನೆ ಅಣ್ಣಪ್ಪ ಶೆಟ್ಟಿ ಕೋತ್ಕಾಲಗುತ್ತು, ಪ್ರಧಾನ ಕಾರ್ಯದರ್ಶಿ ಕೋತ್ವಾಲಗುತ್ತು ಹೊಸಮನೆ ಸುಮನ್ ಶೆಟ್ಟಿ, ಕೋಶಾಧಿಕಾರಿ ಕೋತ್ಕಾಲಗುತ್ತು ಹೆಬ್ಬಾಗಿಲು ಮನೆ ಜಿನೇಂದ್ರ ಶೆಟ್ಟಿ, ಪ್ರಮುಖರಾದ ಎರ್ಮಾಳು ಕೆ. ಶಶಿಧರ ಶೆಟ್ಟಿ ಎರ್ಮಾಳು, ಸದಾನಂದ ಶೆಟ್ಟಿ ಪುಣೆ, ಅಜಿತ್ ಶೆಟ್ಟಿ ಬರೋಡಾ, ಅಶ್ವಿನ್ ಶೆಟ್ಟಿ ಬರೋಡಾ, ಪ್ರಶಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಮೇಲ್ಮನೆ, ಸುನಿಲ್ ಶೆಟ್ಟಿ ಹಾಗೂ ಕೋತಾಲಗುತ್ತು ಕುಟುಂಬಸ್ಥರು, ಮೂಲಸ್ಥಾನ ಆರಾಧಕರು ಮತ್ತು ಕಾಪು ಸಾವಿರ ಸೀಮೆಯ ಭಕ್ತರು ಇದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.