ಮಜೂರು ಮಸ್ಜಿದ್ ಆವರಣದಲ್ಲಿ ರೈಲ್ವೆ ಇಲಾಖೆಯಿಂದ ಜನಜಾಗ್ರತಿ ಮಾಹಿತಿ
ಮಸ್ಜಿದ್ ಅಧ್ಯಕ್ಷ ಡಾ. ಫಾರೂಕ್ ಚಂದ್ರನಗರ ಅವರಿಂದ ಸಂಪೂರ್ಣ ಸಹಕಾರ
(Majuru) ಮಜೂರು: ಕೊಂಕಣ್ ರೈಲ್ವೆ ಚೀಫ್ ಕಮಿಷನರ್ ಅಭಿಷೇಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಉಡುಪಿ ರೈಲ್ವೆ ಸ್ಟೇಷನ್‌ನ ಇನ್ಸ್‌ಪೆಕ್ಟರ್ ಸಂಜಯ್ ವಾತ್ಸ ಹಾಗೂ ಅವರ ಸಿಬ್ಬಂದಿಗಳು ಮಜೂರಿನ ಬದ್ರಿಯಾ ಜುಮ್ಮಾ ಮಸ್ಜಿದ್ ಗೆ ಭೇಟಿ ನೀಡಿ ರೈಲುಗಳ ಮೇಲೆ ಕಲ್ಲು ತೂರಾಟ ತಡೆಯುವ ಕುರಿತು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮಕ್ಕೆ ಬದ್ರಿಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷ ಡಾ. ಫಾರೂಕ್ ಚಂದ್ರನಗರ ಅವರು ಸಂಪೂರ್ಣ ಸಹಕಾರ ನೀಡಿದರು.
ಮಸ್ಜಿದ್‌ನ ಸದಸ್ಯರು ಹಾಗೂ ಧಾರ್ಮಿಕ ಕೇಂದ್ರದ ನಿರ್ವಹಣಾ ಸಮಿತಿಯವರ ಸಮ್ಮುಖದಲ್ಲಿ ಸಾರ್ವಜನಿಕರಿಗೆ ರೈಲುಗಳ ಮೇಲೆ ಕಲ್ಲು ತೂರಾಟದಿಂದ ಉಂಟಾಗುವ ಅಪಾಯಗಳು, ಕಾನೂನು ಕ್ರಮಗಳು ಹಾಗೂ ರೈಲ್ವೆ ಸುರಕ್ಷತೆಯ ಮಹತ್ವದ ಕುರಿತು ಅರ್ಥಪೂರ್ಣವಾಗಿ ಜನಜಾಗೃತಿ ಮೂಡಿಸಲಾಯಿತು.

