ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದ ಶ್ರೀವಿದ್ಯಾ ಜೆಡ್ಡುರವರಿಗೆ ಗೌರವಾರ್ಪಣೆ
ಮುಡಿಪುವಿನ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ ಕಾರ್ಯಕ್ರಮ
(Putturu) ಪುತ್ತೂರು: ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8 ನೇ ಸ್ಥಾನಗಳಿಸಿದ ಬಂಟ್ವಾಳ ತಾಲೂಕಿನ ಬಸವನಗುಡಿಯ ನಿವಾಸಿ ಶ್ರೀವಿದ್ಯಾ ಜೆಡ್ಡುರವರಿಗೆ ಮುಡಿಪುವಿನ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಪಟಿಕ್ಕಲ್ ಕೃಷ್ಣಪಸಾದ ಅವರ ಮಗ ಚಿನ್ಮಯ ರಾಮನ ಉಪನಯನ ಸಂದರ್ಭ ಅಭಿನಂದಿಸಿ ಸನ್ಮಾನಿಸಲಾಯಿತು.
ಶ್ರೀವಿದ್ಯಾ ಜೆಡ್ಡುರವರು ಸ್ವರ ಸಿಂಚನ ಸಂಗೀತ ಕಲಾ ವಿದ್ಯಾರ್ಥಿಯಾಗಿದ್ದು, ಭರತನಾಟ್ಯ ಸಹಿತ ಬಹುಮುಖ ಕಲಾ ಪ್ರತಿಭಾ ವಿದ್ಯಾರ್ಥಿನಿ.
ಈ ಸಂದರ್ಭ ಪಟಿಕ್ಕಲ್ ರಾಮಚಂದ್ರ ಭಟ್ ಮತ್ತು ದೇವಕಿ ಭಟ್, ಶಾರದಮ್ಮ ಪೆರ್ನಾಜೆ, ಗೌರಿ ಅಮ್ಮ ಜೆಡ್ಡು, ಕುಮಾರ ಪೆರ್ನಾಜೆ, ಸೌಮ್ಯ ಪೆರ್ನಾಜೆ, ವಿದ್ಯಾರ್ಥಿನಿಯ ತಂದೆ ತಾಯಿ ನ್ಯಾಯವಾದಿ ಪ್ರಕಾಶ್ ನಾರಾಯಣ ಜೆಡ್ಡು,ರಮ್ಯ ಜೆಡ್ಡು, ಕೃಷ್ಣಪ್ರಸಾದ್ ಪಟಿಕ್ಕಲ್, ಸ್ವರ್ಣ ಗೌರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಖ್ಯಾತ ಕಲಾವಿದರಿಂದ “ಯಕ್ಷಗಾನ ವೈಭವ” ಸಭಿಕರ ಮನರಂಜಿಸಿತು.

