• Home  
  • ಉಡುಪಿ: ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಸ್ವರ್ಗದಲ್ಲೊಂದು ಹಾಸ್ಯ ಸಂಜೆ (Udupi: A comedy evening in heaven from Gangavathi Pranesh and team)
- ಮನೋರಂಜನೆ - ಸಾಂಸ್ಕೃತಿಕ

ಉಡುಪಿ: ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಸ್ವರ್ಗದಲ್ಲೊಂದು ಹಾಸ್ಯ ಸಂಜೆ (Udupi: A comedy evening in heaven from Gangavathi Pranesh and team)

Share: ಉಡುಪಿ: ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಸ್ವರ್ಗದಲ್ಲೊಂದು ಹಾಸ್ಯ ಸಂಜೆ ಕೊಳಲಗಿರಿ ಸಿಂಧೂರ ಸಭಾಂಗಣದಲ್ಲಿ ನಡೆದ ಹಾಸ್ಯ ಕಾರ್ಯಕ್ರಮ (Udupi) ಉಡುಪಿ: ಹೋಂ ಡಾಕ್ಟರ್ಸ್ ಫೌಂಡೇಶನ್ ಉಡುಪಿ ಪ್ರವರ್ತಿತ ಸ್ವರ್ಗ ಆಶ್ರಮ ಕೊಳಲಗಿರಿ ಇದರ ಸ್ವಂತ ಸ್ಥಳ ಮತ್ತು ಕಟ್ಟಡ  ಸಹಾಯಾರ್ಥಕವಾಗಿ ಕೊಳಲಗಿರಿ ಸಿಂಧೂರ ಸಭಾಂಗಣದಲ್ಲಿ ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಸ್ವರ್ಗದಲ್ಲೊಂದು ಹಾಸ್ಯ ಸಂಜೆ ಕಾರ್ಯಕ್ರಮ ಭಾನುವಾರ ನೆರವೇರಿತು.   ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಅವರನ್ನು ಹಾಸ್ಯ ಸಾಮ್ರಾಟ್ ಬಿರುದಿನೊಂದಿಗೆ ಗೌರವಿಸಲಾಯಿತು. […]

(Udupi) ಉಡುಪಿ: ಹೋಂ ಡಾಕ್ಟರ್ಸ್ ಫೌಂಡೇಶನ್ ಉಡುಪಿ ಪ್ರವರ್ತಿತ ಸ್ವರ್ಗ ಆಶ್ರಮ ಕೊಳಲಗಿರಿ ಇದರ ಸ್ವಂತ ಸ್ಥಳ ಮತ್ತು ಕಟ್ಟಡ  ಸಹಾಯಾರ್ಥಕವಾಗಿ ಕೊಳಲಗಿರಿ ಸಿಂಧೂರ ಸಭಾಂಗಣದಲ್ಲಿ ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ಸ್ವರ್ಗದಲ್ಲೊಂದು ಹಾಸ್ಯ ಸಂಜೆ ಕಾರ್ಯಕ್ರಮ ಭಾನುವಾರ ನೆರವೇರಿತು.

  ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಅವರನ್ನು ಹಾಸ್ಯ ಸಾಮ್ರಾಟ್ ಬಿರುದಿನೊಂದಿಗೆ ಗೌರವಿಸಲಾಯಿತು.

   ಮನು ಹಂದಾಡಿ, ಬಸವರಾಜ್ ಮಹಾಮನಿ, ಡಾ. ಬೆಣ್ಣೆ ಬಸವರಾಜ್ ರವರಿಂದ ಹಾಸ್ಯದ ಹಬ್ಬವೇ ನಡೆಯಿತು.

   ಈ ಸಂದರ್ಭದಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ಇದರ ಮುಖ್ಯಸ್ಥರಾದ ಡಾ. ಶಶಿಕಿರಣ್ ಶೆಟ್ಟಿಯವರನ್ನು ಕಲಾವಿದರು ಗೌರವಿಸಿದರು.

   ವೇದಿಕೆಯಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ಸದಸ್ಯರಾದ ಡಾ. ಸುಮಾ ಶೆಟ್ಟಿ, ಬಂಗಾರಪ್ಪ ಉದಯ್ ನಾಯ್ಕ್, ಅರುಣ್ ಜತ್ತನ್, ಪ್ರವೀಣ್ ಜತ್ತನ್, ಜೀವನ್ ಜತ್ತನ್, ಸುದರ್ಶನ್ ಜತ್ತನ್, ಕಿರಣ್ ಜತ್ತನ್, ಮಿಲಿತ್ ಹೆಗ್ಡೆ, ರಾಘವೇಂದ್ರ ಪೂಜಾರಿ, ವಾಣಿಶ್ರೀ , ಸುಂದರ್ ಪೂಜಾರಿ, ರಾಘವೇಂದ್ರ ಪ್ರಭು ಕವಾ೯ಲು, ಸಂಧ್ಯಾ ಶೆಣೈ ಮುಂತಾದವರು ಉಪಸ್ಥಿತರಿದ್ದರು.

  ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.