• Home  
  • ಪಣಿಯೂರು: ಸ್ಕೂಟಿಗೆ ನೀರು ಸಾಗಾಟದ ಟ್ಯಾಂಕರ್‌ ಡಿಕ್ಕಿ, ಯುವಕ ಸಾವು (Paniyur: A young man died after a water tanker collided with a scooty)
- ಅಪಘಾತ

ಪಣಿಯೂರು: ಸ್ಕೂಟಿಗೆ ನೀರು ಸಾಗಾಟದ ಟ್ಯಾಂಕರ್‌ ಡಿಕ್ಕಿ, ಯುವಕ ಸಾವು (Paniyur: A young man died after a water tanker collided with a scooty)

Share: ಪಣಿಯೂರು: ಸ್ಕೂಟಿಗೆ ನೀರು ಸಾಗಾಟದ ಟ್ಯಾಂಕರ್‌ ಡಿಕ್ಕಿ, ಯುವಕ ಸಾವು   ಪೆಜತ್ತಕಟ್ಟೆ ಬಳಿಯ ಕೃಷ್ಣ ಕೃಪಾ ಮನೆಯ ಕೃಷ್ಣ ಮೂಲ್ಯ ಮೃತ ಯುವಕ (Padubidri) ಪಡುಬಿದ್ರಿ: ನೀರು ಸಾಗಾಟದ ಟ್ಯಾಂಕರ್ ರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಸ್ಕೂಟಿ ಸವಾರ ‌ಮೃತಪಟ್ಟ ಧಾರುಣ ಘಟನೆ ಮಂಗಳವಾರ ಬೆಳಿಗ್ಗೆ ಪಣಿಯೂರುಕಂಚುಗರ ಕೇರಿ ತಿರುವಿನಲ್ಲಿ ಘಟಿಸಿದೆ.    ಪಣಿಯೂರು ಬಳಿಯ ಪೆಜತ್ತಕಟ್ಟೆ ಬಳಿಯ ಕೃಷ್ಣ ಕೃಪಾ ಮನೆಯ ಕೃಷ್ಣ ಮೂಲ್ಯ (22) ಮೃತ ಸ್ಕೂಟಿ ಸವಾರ.  ಕೃಷ್ಣ ಪಣಿಯೂರಿಗೆ ಹಾಲು […]

(Padubidri) ಪಡುಬಿದ್ರಿ: ನೀರು ಸಾಗಾಟದ ಟ್ಯಾಂಕರ್ ರೊಂದು ಸ್ಕೂಟಿಗೆ ಡಿಕ್ಕಿ ಹೊಡೆದು ಸ್ಕೂಟಿ ಸವಾರ ‌ಮೃತಪಟ್ಟ ಧಾರುಣ ಘಟನೆ ಮಂಗಳವಾರ ಬೆಳಿಗ್ಗೆ ಪಣಿಯೂರುಕಂಚುಗರ ಕೇರಿ ತಿರುವಿನಲ್ಲಿ ಘಟಿಸಿದೆ.

   ಪಣಿಯೂರು ಬಳಿಯ ಪೆಜತ್ತಕಟ್ಟೆ ಬಳಿಯ ಕೃಷ್ಣ ಕೃಪಾ ಮನೆಯ ಕೃಷ್ಣ ಮೂಲ್ಯ (22) ಮೃತ ಸ್ಕೂಟಿ ಸವಾರ.

 ಕೃಷ್ಣ ಪಣಿಯೂರಿಗೆ ಹಾಲು ಖರೀದಿಗೆ ಬಂದಿದ್ದು,   ಮರಳಿ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಸಾಗುತ್ತಿದ್ದ ನೀರಿನ ಟ್ಯಾಂಕರ್, ಏಕಾಏಕಿ ಕಂಚುಗರ ರಸ್ತೆಗೆ ತೆರಳಲು ಬಲಬದಿಗೆ ತಿರುಗಿದ ಸಂದರ್ಭ   ಅಪಘಾತ ಸಂಭವಿಸಿದೆ.

 ಸ್ಕೂಟಿ ಸವಾರರ ತಲೆಗೆ ತೀವ್ರಗಾಯವಾಗಿದ್ದು,  ಉಚ್ಚಿಲದ ಎಸ್‌ಡಿಪಿಐ ಆಂಬುಲೆನ್ಸ್‌ ನಲ್ಲಿ ಸಮಾಜ ಸೇವಕ ಜಲಾಲುದ್ದೀನ್ ರವರು ಸ್ಥಳೀಯರ ಸಹಕಾರದೊಂದಿಗೆ ಗಾಯಾಳುವನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಗಾಯಾಳುವನ್ನು ಪರೀಕ್ಷಿಸಿ, ಮೃತ ಘೋಷಿಸಿದ್ದಾರೆ.

   ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.