• Home  
  •  ಪಡುಬಿದ್ರಿಯಲ್ಲಿ ಮಹಿಳೆಯರ ತ್ರೋಬಾಲ್ ಪಂದ್ಯಾವಳಿ (Women’s throwball tournament in Padubidri)
- ಕ್ರೀಡೆ

 ಪಡುಬಿದ್ರಿಯಲ್ಲಿ ಮಹಿಳೆಯರ ತ್ರೋಬಾಲ್ ಪಂದ್ಯಾವಳಿ (Women’s throwball tournament in Padubidri)

Share: ಪಡುಬಿದ್ರಿಯಲ್ಲಿ ಮಹಿಳೆಯರ ತ್ರೋಬಾಲ್ ಪಂದ್ಯಾವಳಿ  ಎಮ್‌ಎಫ್‌ಸಿ ಬೆಂಗಳೂರಿಗೆ ಇನ್ನರ್‌ವೀಲ್ 2026  ಟ್ರೋಫಿ  (Padubidri) ಪಡುಬಿದ್ರಿ: ಪಡುಬಿದ್ರಿ ಬೀಚ್ ಸಮೀಪದ ಸಾಗರ್ ವಿದ್ಯಾ ಮಂದಿರ ಶಾಲೆಯ ಮೈದಾನದಲ್ಲಿ ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ಆಯೋಜಿಸಿದ್ದ ಮಹಿಳೆಯರ ತ್ರೋಬಾಲ್ ಪಂದ್ಯಾಟ ಕೂಟದಲ್ಲಿ ಬೆಂಗಳೂರಿನ ಎಮ್‌ಎಫ್‌ಸಿ ತಂಡ ಇನ್ನರ್‌ವೀಲ್ ಟ್ರೋಫಿ 2026 ನ್ನು ತನ್ನದಾಗಿಸಿಕೊಂಡಿತು.   ಬೆಂಗಳೂರಿನ ಎಮ್‌ಎಫ್‌ಸಿ ಹಾಗೂ ತುಳುನಾಡು ದೋಸ್ತ್ ತಂಡಗಳ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಎಮ್‌ಎಫ್‌ಸಿ ತಂಡ 15-07, 17-16  ಅಂಕಗಳ ಅಂತರದಲ್ಲಿ […]

 (Padubidri) ಪಡುಬಿದ್ರಿ: ಪಡುಬಿದ್ರಿ ಬೀಚ್ ಸಮೀಪದ ಸಾಗರ್ ವಿದ್ಯಾ ಮಂದಿರ ಶಾಲೆಯ ಮೈದಾನದಲ್ಲಿ ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ಆಯೋಜಿಸಿದ್ದ ಮಹಿಳೆಯರ ತ್ರೋಬಾಲ್ ಪಂದ್ಯಾಟ ಕೂಟದಲ್ಲಿ ಬೆಂಗಳೂರಿನ ಎಮ್‌ಎಫ್‌ಸಿ ತಂಡ ಇನ್ನರ್‌ವೀಲ್ ಟ್ರೋಫಿ 2026 ನ್ನು ತನ್ನದಾಗಿಸಿಕೊಂಡಿತು.

  ಬೆಂಗಳೂರಿನ ಎಮ್‌ಎಫ್‌ಸಿ ಹಾಗೂ ತುಳುನಾಡು ದೋಸ್ತ್ ತಂಡಗಳ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಎಮ್‌ಎಫ್‌ಸಿ ತಂಡ 15-07, 17-16  ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿತು.

ಅಜ್ಜರಕಾಡು ಫ್ರೆಂಡ್ಸ್ ತಂಡ ದ್ವಿತೀಯ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತು.

  ವೈಯಕ್ತಿಕ ಪ್ರಶಸ್ತಿಗಳಲ್ಲಿ ಎಮ್‌ಎಫ್‌ಸಿ ತಂಡದ ಅಕ್ಷತಾ ಶೆಟ್ಟಿ ಬೆಸ್ಟ್ ಸ್ಮಾಶರ್, ತುಳುನಾಡು ದೋಸ್ತ್ ತಂಡದ ಆಯಿಷಾ ಬೆಸ್ಟ್ ಡಿಫೆಂಡರ್ ಹಾಗೂ ಎಮ್‌ಎಫ್‌ಸಿ ತಂಡದ ವಿದ್ಯಾ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಗೆ ಭಾಜನರಾದರು.

  ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸ್ನೇಹ ಪ್ರವೀಣ್ ವಹಿಸಿದ್ದರು.

 ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವೈ. ಸುಕುಮಾರ್, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉದ್ಯಮಿ ದೀಪಕ್ ಎರ್ಮಾಳು, ಎರ್ಮಾಳು ತೆಂಕ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಧರ್ಮರಾಜ್ ಎರ್ಮಾಳು, ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿ ಎಡ್ನಾ ಜತನ್ನ, ಮುದರಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ರಿಯಾಜ್ ನಜೀರ್ ಸಾಹೇಬ್, ಇನ್ನರ್‌ವೀಲ್ ಜಿಲ್ಲಾ ೩೧೮ ಎಡಿಟರ್ ದೀಪಾ ಭಂಡಾರಿ, ಕಾಡಿಪಟ್ಣ ಮೊಗವೀರ ಮಹಾಸಭ ಅಧ್ಯಕ್ಷ ಅಶೋಕ್ ಸಾಲ್ಯಾನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ಧೀನ್ ಶೇಖ್, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಸುನಂದ ಸಾಲ್ಯಾನ್ ಉಪಸ್ಥಿತರಿದ್ದರು.

  ಉದ್ಘಾಟನಾ ಸಮಾರಂಭದಲ್ಲಿ ಇನ್ನರ್‌ವೀಲ್ ಜಿಲ್ಲಾ ೩೧೮ರ ಜಿಲ್ಲಾ ಅಧ್ಯಕ್ಷೆ ಶಬರಿ ಕಡಿದಾಲ್, ಅಂಚನ್ ಆಯುರ್ವೇದ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಡಾ. ಎನ್.ಟಿ. ಅಂಚನ್, ಸುಚರಿತಾ ಅಂಚನ್, ಹಿರಿಯ ತ್ರೋಬಾಲ್ ಆಟಗಾರ್ತಿ ವೈಯೊಲೇಟ್ ಮೇರಿ ಆಂದ್ರಾದೆ, ಸಾಗರ್ ವಿದ್ಯಾ ಮಂದಿರದ ಸಂಚಾಲಕ ಸುಕುಮಾರ್ ಶ್ರಿಯಾನ್ ಹಾಗೂ ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷ ಸುನಿಲ್ ಕುಮಾರ್ ಉಪಸ್ಥಿತರಿದ್ದರು.

  ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸ್ನೇಹ ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು.

   ಕಾರ್ಯದರ್ಶಿ ಸುನಂದ ಸಾಲ್ಯಾನ್ ವಂದಿಸಿದರು. ಶುಭ ದಿನೇಶ್ ಕಾರ್ಯಕ್ರಮ ನಿರ್ವಹಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.