ಪಡುಬಿದ್ರಿ ಸಹಕಾರಿ ವ್ಯ. ಸೊಸೈಟಿಗೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸದಸ್ಯರ ಭೇಟಿ
“ಕೌಶಲ್ಯ ಅಭಿವೃದ್ದಿ ಹಾಗೂ ವೃತ್ತಿಪರತೆ ತರಬೇತಿ” ಶಿಬಿರದಲ್ಲಿ ಭಾಗವಹಿಸಿದ 130 ಸಿಬ್ಬಂದಿ
(Padubidri) ಪಡುಬಿದ್ರಿ : ಬೆಂಗಳೂರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ “ಕೌಶಲ್ಯ ಅಭಿವೃದ್ದಿ ಹಾಗೂ ವೃತ್ತಿಪರತೆ ತರಬೇತಿ”ಗೆ ಆಗಮಿಸಿದ ೧೩೦ ಸಿಬಂದಿಗಳ ಅಧ್ಯಯನ ತಂಡವು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ಭಾನುವಾರ ಭೇಟಿ ನೀಡಿತು.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ರವರು ಮಾಹಿತಿ ನೀಡಿ, ಸೊಸೈಟಿಯ ಕಾರ್ಯಚಟುವಟಿಕೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಿದರು.
ತರಬೇತುದಾರರಾದ ವಿ. ಜೆ. ಕಾರ್ಕೂನ್ ಮಾತನಾಡಿ, ಪ್ರಾಥಮಿಕ ಸಹಕಾರಿ ಸಂಘಗಳು ಸಮಾಜಕ್ಕೆ ಹಾಗೂ ದೇಶಕ್ಕೆ ಯಾವ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದೆ ಎಂದು ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯುನ್ನು ನೋಡಿದಾಗ ತಿಳಿಯುತ್ತದೆ ಎಂದ ಅವರು, ಸೊಸೈಟಿಯ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭ ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ, ನಿರ್ದೇಶಕರಾದ ವೈ. ಜಿ. ರಸೂಲ್, ಗಿರೀಶ್ ಪಲಿಮಾರು, ವಾಸುದೇವ ದೇವಾಡಿಗ, ರಾಜಾರಾಮ್ ರಾವ್, ಕೃಷ್ಣ ಬಂಗೇರ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಇದರ ಡಿ. ಜಿ.ಎಮ್ ನಾರಾಯಣ ಹೆಗ್ಡೆ, ಶೋಭಾ, ಎ.ಜಿ.ಎಮ್. ಶ್ರೀಧರ್, ರಾಜಶೇಖರ್ ಹಾಗೂ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ನಿಶ್ಮಿತಾ ಪಿ. ಎಚ್, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ದೀಪಕ್ ಸಾಲ್ಯಾನ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ದಿ ಅಧಿಕಾರಿ ವಿಜಯ್ ಬಿ.ಎಸ್ ವಂದಿಸಿದರು.

