• Home  
  • ಹೆಜಮಾಡಿ ದೊಡ್ಡಮನೆ ರಾಮೋಲಾ ಜೆ. ಹೆಜಮಾಡಿ ನಿಧನ (Hejamadi Doddamaney Ramola J. Hejamadi passes away)
- ನಿಧನ

ಹೆಜಮಾಡಿ ದೊಡ್ಡಮನೆ ರಾಮೋಲಾ ಜೆ. ಹೆಜಮಾಡಿ ನಿಧನ (Hejamadi Doddamaney Ramola J. Hejamadi passes away)

Share: ಹೆಜಮಾಡಿ ದೊಡ್ಡಮನೆ ರಾಮೋಲಾ ಜೆ. ಹೆಜಮಾಡಿ ನಿಧನ ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಕಾಳಜಿ ವಹಿಸಿದ ಸಮಾಜ ಸೇವಕಿ (Hejamadi) ಹೆಜಮಾಡಿ: ಹೆಜಮಾಡಿ ದೊಡ್ಡಮನೆ ನಿವಾಸಿ ಶ್ರೀಮತಿ ರಾಮೋಲಾ ಜೆ. ಹೆಜಮಾಡಿ (84) ಅವರು ಜೂನ್ 12ರಂದು ನಿಧನರಾದರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.   1990ರ ದಶಕದಲ್ಲಿ ಹೆಜಮಾಡಿಯ ಮಹಿಳೆಯರನ್ನು ಸಂಘಟಿಸಿ ಜೈ ಕರ್ನಾಟಕ ಮಹಿಳಾ ಮಂಡಳಿಯನ್ನು ಸ್ಥಾಪಿಸಿ, ಅದರ ಸ್ಥಾಪಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದರು. ಅನೇಕ […]

(Hejamadi) ಹೆಜಮಾಡಿ: ಹೆಜಮಾಡಿ ದೊಡ್ಡಮನೆ ನಿವಾಸಿ ಶ್ರೀಮತಿ ರಾಮೋಲಾ ಜೆ. ಹೆಜಮಾಡಿ (84) ಅವರು ಜೂನ್ 12ರಂದು ನಿಧನರಾದರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

  1990ರ ದಶಕದಲ್ಲಿ ಹೆಜಮಾಡಿಯ ಮಹಿಳೆಯರನ್ನು ಸಂಘಟಿಸಿ ಜೈ ಕರ್ನಾಟಕ ಮಹಿಳಾ ಮಂಡಳಿಯನ್ನು ಸ್ಥಾಪಿಸಿ, ಅದರ ಸ್ಥಾಪಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದರು. ಅನೇಕ ಮಹಿಳೆಯರಿಗೆ ಹೊಲಿಗೆ ತರಬೇತಿ ಹಾಗೂ ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಿದ್ದರು.

   ಅಲ್ಲದೆ, ಅವರು ಹೆಜಮಾಡಿ ಬಿಲ್ಲವರ ಸಂಘದ ಉಪಾಧ್ಯಕ್ಷೆಯಾಗಿ, ಹೆಜಮಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿಯಾಗಿ ಹಾಗೂ ದಕ್ಷಿಣ ಕನ್ನಡ–ಕಾಸರಗೋಡು ಜಿಲ್ಲಾ ಒಕ್ಕೂಟದ ಜಿಲ್ಲಾ ಮಹಿಳಾ ಸಂಚಾಲಕಿಯಾಗಿ ವಿವಿಧ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.

   ಸಾಮಾಜಿಕ, ಮಹಿಳಾ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ಅವರ ಸೇವೆ ಸ್ಮರಣೀಯವಾಗಿದ್ದು, ಅವರ ನಿಧನವು ಕುಟುಂಬದವರಿಗೆ, ಬಂಧು-ಬಳಗಕ್ಕೆ ಹಾಗೂ ಹೆಜಮಾಡಿ ಭಾಗದ ಜನತೆಗೆ ಅಪಾರ ನಷ್ಟವನ್ನುಂಟು ಮಾಡಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.