ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಆಯೋಜನೆಯಲ್ಲಿ ಯೋಗ ದಿನಾಚರಣೆ
ಉಡುಪಿ ಐಎಂಎ ಭವನದಲ್ಲಿ ನಡೆದ ಯೋಗ ಕಾರ್ಯಕ್ರಮ
(Udupi) ಉಡುಪಿ: ಕರ್ನಾಟಕ ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘ, ಮಣಿಪಾಲ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘ, ಭಾರತೀಯ ವೈದ್ಯಕೀಯ ಸಂಘ ಸಂಯುಕ್ತವಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉಡುಪಿಯ ಐಎಂಎ ಭವನದಲ್ಲಿ ಆಚರಿಸಲಾಯಿತು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ರಾಜಯೋಗಿ ಅವಿನಾಶ್ ವಂಕರ್ ಆಗಮಿಸಿ ಮಾಹಿತಿ ನೀಡುತ್ತಾ, ಯೋಗ ಸಂಪೂರ್ಣ ಆರೋಗ್ಯಕ್ಕೆ ಸಹಕಾರಿ ಎಂದರು.
ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ರಾಜಶ್ರೀ ಪಾಲಡಿ ಪ್ರಸ್ತಾವನೆ ಮಾತುಗಳನ್ನಾಡಿ, ಯೋಗದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜಯೋಗಿ ಅವಿನಾಶ್ ವಂಕರ್ ರವರನ್ನು ಅಭಿನಂದಿಸಲಾಯಿತು.
ಐಎಂಎ ಉಡುಪಿ ಕರಾವಳಿ ಕಾರ್ಯದರ್ಶಿಡಾ. ಮಾನಸ್, ಕೋಶಾಧಿಕಾರಿ ಡಾ. ಸನತ್ ರಾವ್, ಮಣಿಪಾಲ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ. ಇಂದಿರಾ ಶಾನುಬೋಗ್, ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಯೋಗ ಪಟು ಡಾ. ಅನ್ನಪೂರ್ಣ ಹಾಗೂ ಶಿಷ್ಯೆಯರಿಂದ ಯೋಗಾಸನ ಪ್ರಾತ್ಯಕ್ಷಿಕೆ ನಡೆಯಿತು. ಐಎಂಎ ಮಹಿಳಾ ವಿಭಾಗದವರಿಂದ ಯೋಗ ನೃತ್ಯ ಉತ್ತಮವಾಗಿ ಮೂಡಿ ಬಂತು.
ಡಾ. ಶರತ್ ಐಎಂಎ ಪ್ರಾರ್ಥನೆ ಗೈದರು. ಮಣಿಪಾಲ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ರಾಜಲಕ್ಷ್ಮೀ ಸ್ವಾಗತಿಸಿದರು. ಕೋಶಾಧಿಕಾರಿ ಡಾ. ಅಂಜಲಿ ಮುಂಡ್ಕೂರು ಹಾಗೂ ಡಾ. ರಂಜಿತಾ ನಾಯಕ್ ನಿರೂಪಿಸಿದರು. ಐಎoಎ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಮತ್ ವಂದಿಸಿದರು.

