• Home  
  • ಕಾಪು: 9 ನೇ ಕರ್ನಾಟಕ ರಾಜ್ಯ ಸ್ಕೂಲ್ಸ್ ಚೆಸ್ ಚಾಂಪಿಯನ್‌ ಶಿಪ್  2026 ಉದ್ಘಾಟನೆ (Kaup: 9th Karnataka State Schools Chess Championship 2026 inaugurated)
- ಕ್ರೀಡೆ

ಕಾಪು: 9 ನೇ ಕರ್ನಾಟಕ ರಾಜ್ಯ ಸ್ಕೂಲ್ಸ್ ಚೆಸ್ ಚಾಂಪಿಯನ್‌ ಶಿಪ್  2026 ಉದ್ಘಾಟನೆ (Kaup: 9th Karnataka State Schools Chess Championship 2026 inaugurated)

Share: ಕಾಪು: 9 ನೇ ಕರ್ನಾಟಕ ರಾಜ್ಯ ಸ್ಕೂಲ್ಸ್ ಚೆಸ್ ಚಾಂಪಿಯನ್‌ ಶಿಪ್ 2026 ಉದ್ಘಾಟನೆ ಕಾಪು ಶ್ರೀ ಹಳೆ ಮಾರಿಯಮ್ಮ ಸಭಾಭವನದಲ್ಲಿ ನಡೆದ ಚೆಸ್ ಟೂರ್ನಿ (Kaup) ಕಾಪು: ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು, ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಮತ್ತು ಎಜುಕೇಷನ್ ಟ್ರಸ್ಟ್ ಕಾಪು ಇದರ ಅಂಗಸಂಸ್ಥೆಯ ಆಯೋಜನೆಯಲ್ಲಿ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಹಾಗೂ ಅಫಿಲಿಯನ್ಸ್ […]

(Kaup) ಕಾಪು: ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು, ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಮತ್ತು ಎಜುಕೇಷನ್ ಟ್ರಸ್ಟ್ ಕಾಪು ಇದರ ಅಂಗಸಂಸ್ಥೆಯ ಆಯೋಜನೆಯಲ್ಲಿ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು ಹಾಗೂ ಅಫಿಲಿಯನ್ಸ್ ಟೆಕ್ನಾಲಜಿ, ಮಂಗಳೂರು ಇವರ ಸಹಕಾರದಲ್ಲಿ ಶನಿವಾರ ಕಾಪು ಶ್ರೀ ಹಳೆ ಮಾರಿಯಮ್ಮ ಸಭಾಭವನದಲ್ಲಿ 9ನೇ ಕರ್ನಾಟಕ ರಾಜ್ಯ ಸ್ಕೂಲ್ಸ್ ಚೆಸ್ ಚಾಂಪಿಯನ್‌ಶಿಪ್ – 2026 ರ ಉದ್ಘಾಟನಾ ಸಮಾರಂಭ ನಡೆಯಿತು.

 ಕಾರ್ಯಕ್ರಮವನ್ನು ಕಾಪು ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ ಉದ್ಘಾಟಿಸಿದರು.

ಅವರು ಮಾತನಾಡಿ, ಕಾಪುವಿನ ಚೆಸ್‌ ಸಂಸ್ಥೆಯು   ಕಳೆದ ಇಪ್ಪತ್ತು ವರ್ಷಗಳಿಂದ ಸ್ಪರ್ಧೆ ನಡೆಸಿಕೊಂಡು ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಕಾಪುವಿನಲ್ಲಿ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುತ್ತಿರುವ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.

 ಚೆಸ್ ಪಂದ್ಯಾಟದ ಉದ್ಘಾಟನೆಯನ್ನು ಕಾಪು ಶ್ರೀ ಜನಾರ್ಧನ ದೇವಸ್ಥಾನ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ ನೆರವೇರಿಸಿದರು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಎಂ. ಆರ್.ಪಿ.ಎಲ್, ಸಿ.ಎಸ್. ಆರ್, ಜನರಲ್ ಮ್ಯಾನೇಜರ್ ಮಂದಾರ ವಿ. ಕಾಳೆ ವಹಿಸಿದ್ದರು.

ಉಡುಪಿ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ವ್ಯಾಸರಾಜ್ ತಂತ್ರಿ ಮಂಗಳೂರು, ಅಫಿಲಿಯನ್ಸ್ ಟೆಕ್ನಾಲಜಿ, ಸ್ಥಾಪಕರಾದ ಅವಿನಾಶ್ ಶೆಟ್ಟಿ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಬೆಂಗಳೂರು ಇದರ ಅಧ್ಯಕ್ಷರಾದ ಮಧುಕರ್ ಟಿ. ಎನ್, ಉಡುಪಿ ಉಜ್ವಲ್ ಸಂಸ್ಥೆಯ ಮಾಲೀಕ ಅಜಯ್ ಪುರುಷೋತ್ತಮ ಶೆಟ್ಟಿ, ಕಾಪು ಶ್ರೀ ಹಳೇ ಮಾರಿಯಮ್ಮ ಗುಡಿಯ ಮಾಜಿ ಆಡಳಿತ ಮೊಕ್ತಸರ ಶ್ರೀಧರ ಶೆಣೈ, ಅಸೋಸಿಯೇಷನ್ ಆಫ್ ಸರ್ಜರಿ ಆಫ್ ಇಂಡಿಯಾ ಚೇರ್ಮನ್ ಡಾ. ರಾಜಗೋಪಾಲ್ ಶೆಣೈ ಮುಖ್ಯ ಅತಿಥಿಗಳಾಗಿದ್ದರು.

  ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ ಮತ್ತು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ ಕಾಪು ಸ್ವಾಗತಿಸಿದರು. ಶ್ರೀಮತಿ ಸೌಂದರ್ಯ ಯು.ಕೆ ನಿರೂಪಿಸಿದರು. ಸಾಕ್ಷಾತ್ ಯು.ಕೆ. ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.